ಜೂನ್ 6 ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ. ಆ ಪ್ರಯುಕ್ತ ‘777 ಚಾರ್ಲಿ’ ಚಿತ್ರದ ಟೀಸರ್ ಐದು ಭಾಷೆಗಳಲ್ಲಿ ಬಿಡುಗಡಯಾಗುತ್ತಿದೆ. 

ಪ್ಯಾನ್ ಇಂಡಿಯಾ ಸಿನಿಮಾವನ್ನು ಚಿತ್ರತಂಡ ಟೀಸರ್ ಮೂಲಕ ದೊಡ್ಡ ಮಟ್ಟದಲ್ಲಿ ಸಂಭ್ರಮಿಸಲು ಹೊರಟಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಹೀಗೆ ಐದು ಭಾಷೆಗಳಲ್ಲಿ ಟೀಸರ್ ಬಿಡುಗಡೆಯಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾನು ನಾಯಿ ಪ್ರಿಯೆ, ಅದಕ್ಕೇ 777 ಚಾರ್ಲಿ ಆಡಿಶನ್‌ಗೆ ಹೋಗಿದ್ದೆ; ಸಂಗೀತಾ ಶೃಂಗೇರಿ ಜತೆ ಮಾತುಕತೆ 

ಕಿರಣ್ ರಾಜ್ ನಿರ್ದೇಶನದ ಈ ಚಿತ್ರದ ಅಂತಿಮ ಭಾಗದ ಚಿತ್ರೀಕರಣ ಈ ವರ್ಷಾರಂಭ ಕಾಶ್ಮೀರದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಉಳಿದಂತೆ ಒಂದಿಷ್ಟು ದೃಶ್ಯಗಳ ಚಿತ್ರೀಕರಣ ಬಾಕಿ ಇದ್ದು, ಅದನ್ನು ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ಧರಿಸಿದೆ. ಪೋಸ್‌ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಬಹುತೇಕ ಮುಕ್ತಾಯ ಆಗಿದ್ದು, ಒಟ್ಟು 160 ದಿನಗಳ ಕಾಲ ಇಲ್ಲಿಯವರೆಗೂ ಶೂಟಿಂಗ್ ಮಾಡಲಾಗಿದೆ.

ರಕ್ಷಿತ್‌ ಶೆಟ್ಟಿಪಾತ್ರಕ್ಕೆ ಸ್ಫೂರ್ತಿಯಾಗುವ ರಾಯಲ್‌ ಕ್ಯಾರೆಕ್ಟರ್‌ ವಂಶಿನಾದನ್‌!

ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಜತೆಗೆ ಶ್ವಾನ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಶ್ವಾನ ಪಾತ್ರದ ಚಿತ್ರೀಕರಣಕ್ಕಾಗಿಯೇ ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಸಂಗೀತಾ ಶೃಂಗೇರಿ ನಾಯಕಿಯಾಗಿ ನಟಿಸಿದ್ದು, ತಮಿಳಿನ ಬಾಬಿ ಸಿಂಹ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.