Asianet Suvarna News Asianet Suvarna News

ಬುಲೆಟ್‌ ಪ್ರಕಾಶ್‌ ಮಗನ ಕೈ ಸೇರಿತ್ತು ಲಕ್ಷಲಕ್ಷ ಹಣ?; ವಿಡಿಯೋ ಹಿಂದಿರುವ ರಹಸ್ಯ ಬಿಚ್ಚಿಟ್ಟ ರಕ್ಷಕ್

ವೈರಲ್ ಆಗುತ್ತಿರುವ ವಿಡಿಯೋಗೆ ಸ್ಪಷ್ಟನೆ ಕೊಟ್ಟ ಬುಲೆಟ್ ಪ್ರಕಾಶ್ ಮಗ. ಯಾವ ಸ್ಟಾರ್ ನಟರೂ ಬಂದು ಬ್ಯಾಗ್ ಕೊಟ್ಟಿಲ್ಲ...

Rakshak Bullet clarifies about viral video about money from star actor vcs
Author
First Published Jan 7, 2023, 4:27 PM IST

ಕನ್ನಡ ಚಿತ್ರರಂಗ ಜನಪ್ರಿಯ ಹಾಸ್ಯ ನಟ ಬುಲೆಟ್‌ ಪ್ರಕಾಶ್ ಅನಾರೋಗ್ಯದಿಂದ ಅಗಲಿದಾಗ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಪುತ್ರ ರಕ್ಷಕ್ ಹೊತ್ತಿಕೊಳ್ಳುತ್ತಾರೆ. ಬುಲೆಟ್ ಅಗಲಿದಾಗ ಸಾಮಾಜಿ ಜಾಲತಾಣದಲ್ಲಿ ಸ್ವಾಮೀಜಿ ಒಬ್ಬರ ವಿಡಿಯೋ ವೈರಲ್ ಆಗುತ್ತದೆ. ಅದರಲ್ಲಿ ಪುನೀತ್ ರಾಜ್‌ಕುಮಾರ್‌ ಬುಲೆಟ್‌ ಪುತ್ರನಿಗೆ ಲಕ್ಷ ಲಕ್ಷ ಹಣವಿರುವ ಬ್ಯಾಗ್ ಕೊಟ್ಟರು ಎಂದು. ಈ ವಿಚಾರದ ಬಗ್ಗೆ ರಕ್ಷಕ್ ಕ್ಲಾರಿಟಿ ಕೊಟ್ಟಿದ್ದಾರೆ.

'ಅಪ್ಪು ಸರ್‌ ಮತ್ತು ನನ್ನ ಫೋಟೋ ಹಾಕುತ್ತಾರೆ ಅದರಲ್ಲಿ 5 ಲಕ್ಷ ಹಣ ಕೊಟ್ಟಿದ್ದಾರೆ ಎಂದು ಬರೆಯುತ್ತಾರೆ. ಏನಂದ್ರೆ ಪುನೀತ್ ರಾಜ್‌ಕುಮಾರ್ ಅವರು ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್‌ ಅವರಿಗೆ 5 ಲಕ್ಷ ಹಣ ಕೊಟ್ಟರು ಅಂತ ಹೇಳುತ್ತಾರೆ. ಇದೆಲ್ಲಾ ಕೇಳಿಸಿಕೊಂಡು ನಾನು ಸೈಲೆಂಟ್ ಆದೆ. ಇಲ್ಲಿ ಪ್ರತಿಯೊಬ್ಬರಿಗೂ ಗೌರವವಿರುತ್ತದೆ ಇಂಡಸ್ಟ್ರಿ ಅಂದ್ರೆ ಎಲ್ಲರೂ ಗೌರವ ಕೊಡುತ್ತಾರೆ ಅಪ್ಪು ಸರ್ ಅಂದ್ರೆ ನಮಗೆ ಲೆಜೆಂಡ್ ಅಂತ ಹೇಳುತ್ತೀವಿ ದೇವರು ಅಂತ ಪೂಜಿಸುತ್ತಿದ್ದಾರೆ. ಸಿನಿಮಾ ಅನ್ನೋ ಫೀಲ್ಡ್‌ನ ನಾನು ಚಿಕ್ಕ ವಯಸ್ಸಿನಿಂದ ನೋಡಿಕೊಂಡು ಬರುತ್ತಿರುವ ಕಾರಣ ಏನೇ ವಿಚಾರವಾದರೂ ಅದನ್ನು ನಾನು ರಿಸೀವ್ ಮಾಡಿಕೊಳ್ಳುತ್ತೀನಿ. ಅದೇ ನೀವು ಹೊಸಬ್ಬರನ್ನು ಕರೆದುಕೊಂಡು ಬಂದಾಗ ಅವರ ತಲೆ ಮೇಲೆ ಈ ರೀತಿ ವಿಚಾರಗಳನ್ನು ಹಾಕಿದಾಗ ಆತನಿಗೆ ಏನೂ ಮಾಡಲಾಗದು ಬದಲಿಗೆ ಡಿಪ್ರೆಶನ್‌ಗೆ ಜಾರಿ ಬಿಡುತ್ತಾರೆ. ಇದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಪ್ರಚಾರ ಸಿಗುತ್ತಿದೆ ಎಂದು ಸುಮ್ಮನಾಗುತ್ತೀನಿ. ಓಡೋ ಕುದುರೆ ಬಗ್ಗೆ ಪಬ್ಲಿಸಿಟಿ ಕೊಡಬೇಕು ಕೊಡುತ್ತಿದ್ದಾರೆ ಅದೇ ನನಗೆ ಖುಷಿ. ರಕ್ಷಕ್‌ ಅನ್ನೋ ಹೆಸರು ಉಳಿಸಿಕೊಳ್ಳುತ್ತಿದ್ದಾರೆ. ಮುಂದಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.'  ಎಂದು ಕಾಂಟ್ರವರ್ಸಿಗಳ ಬಗ್ಗೆ ರಕ್ಷಕ್ ಮಾತನಾಡಿದ್ದಾರೆ.

Rakshak Bullet clarifies about viral video about money from star actor vcs

'ಮತ್ತೊಂದು ವಿಡಿಯೋ ನೋಡುವೆ ಅವ್ರು ಯಾರು ನನಗೆ ಗೊತ್ತಿಲ್ಲ ಫೇಸ್‌ಬುಕ್‌ ಲೈವ್‌ ಬರುತ್ತಾರೆ ಅದರಲ್ಲಿ ಭಜನೆ ಮಾಡುವಾಗ ಅಪ್ಪು ಎಂಥ ಕೆಲಸ ಮಾಡಿದ್ದರು ಹಾಗೆ ಹೀಗೆ ಎಂದು ಮಾತನಾಡುತ್ತಾರೆ. ಏನೋ ವಿಡಿಯೋ ನನಗೆ ಬಂದಿದೆ ಎಂದು ನಾನು ನೋಡುತ್ತೀನಿ ಅದರಲ್ಲಿ ನನ್ನ ವಿಷಯ ಬರುತ್ತೆ. ಪುನೀತ್ ರಾಜ್‌ಕುಮಾರ್ ಅವರು ಬುಲೆಟ್‌ ಪ್ರಕಾಶ್ ಅವರ ಮನೆಗೆ ಹೋಗುತ್ತಾರೆ  ಅವರ ಮನೆಯಲ್ಲಿ ಒಂದು ಬ್ಯಾಗ್ ಇಟ್ಟು ಬರುತ್ತಾರೆ ಆ ಬ್ಯಾಗ್‌ನ ಮತ್ತೆ ರಕ್ಷಕ್‌ ಕೊಡುತ್ತಾರೆ ಫೂನ್ ಮಾಡಿ ಹೇಳುತ್ತಾರೆ. ಈ ರೀತಿ ವಿಚಾರ ಹೇಗೆ ಹುಟ್ಟಿಸುತ್ತಾರೆಂದು ಗೊತ್ತಾಗುವುದಿಲ್ಲ. ಒಮ್ಮೆ ಬೇಸರ ಆದರೆ ಮತ್ತೊಮ್ಮೆ ನಗು ಬರುತ್ತೆ. ರಕ್ಷಕ್‌ ಅವರು ಪುನೀತ್ ರಾಜ್‌ಕುಮಾರ್‌ಗೆ ಕರೆ ಮಾಡಿ ಸರ್ ಬ್ಯಾಗ್ ಬಿಟ್ಟಿದ್ದೀರಿ ಎನ್ನುತ್ತಾರಂತೆ ಆಗ ಅಪ್ಪು ಬ್ಯಾಗ್ ಓಪನ್ ಮಾಡಿ ಎನ್ನುತ್ತಾರೆ ಅದರಲ್ಲಿ ಲಕ್ಷಲಕ್ಷ ಹಣ ಇರುತ್ತದೆ' ಎಂದು ನಡೆದ ಘಟನೆ ರಕ್ಷಕ್ ವಿವರಿಸುತ್ತಾರೆ. 

Rakshak Bullet ಅಪ್ಪ ಹೋದ್ಮೇಲೆ ಸಂಬಂಧಿಕರನ್ನ ನಂಬಲ್ಲ, ಕಚಡಾ ಫ್ಯಾಮಿಲಿ ಅಂದ್ರೆ ಕಚಡಾ ಅಷ್ಟೆ

'ಬುಲೆಟ್ ಅವರ ಮನೆಯವರು ಇದನ್ನು ನೋಡಿದ್ದರೆ ಹೇಗೆ ಅನ್ನೋ ಯೋಚನೆ ಮಾಡಬೇಕು ಅಲ್ವಾ? ನಾನು ತುಂಬಾ ಸ್ಟ್ರಿಕ್ಟ್‌ ಅದಿಕ್ಕೆ ಆ ಸ್ವಾಮಿಗಳಿಗೆ ಕರೆ ಮಾಡಿ ಮಾತನಾಡಿದೆ. ಸತ್ಯ ಅಂದ್ರೆ ಸತ್ಯ ಒಪ್ಪಿಕೊಳ್ಳುತ್ತಿನಿ ಯಾಕೆ ಸುಳ್ಳು ಒಪ್ಪಿಕೊಳ್ಳಬೇಕು. ನನ್ನ ಧ್ವನಿ ಬದಲಾಯಿಸಿ ಬೇರೆ ಟೋನ್‌ಗಳಲ್ಲಿ ಮಾತನಾಡಿದೆ ನನ್ನ ಸ್ನೇಹಿತರು ಅವರ ಜೊತೆ ಮಾತನಾಡಿದ್ದರು. ಯಾಕೆ ಸುಳ್ಳು ಸುದ್ದಿ ಮಾಡುತ್ತಿರುವುದು ಹಾಗೆ ಹೀಗೆ ಎಂದು ಕೆಟ್ಟದಾಗಿ ಬೈದಿದ್ದಾರೆ. ಕರೆ ಕಟ್ ಮಾಡಿದ ಕ್ಷಣವೇ ವಿಡಿಯೋ ಡಿಲೀಟ್ ಮಾಡಿದ್ದರು.' ಎಂದಿದ್ದಾರೆ ರಕ್ಷಕ್.

'ಮತ್ತೊಬ್ಬರು ಸ್ಟಾರ್‌ ಜೊತೆ ನನ್ನ ಫೋಟೋ ಹಾಕಿ ರಕ್ಷಕ್ ಅವರ ಬಳಿ 10 ಲಕ್ಷ ಹಣ ತೆಗೆದುಕೊಂಡಿದ್ದಾರೆ ಎಂದು ಸುದ್ದಿ ಮಾಡಿದ್ದರು. ಅದರ ಒಳಗೆ ಓಪನ್ ಮಾಡಿ ನೋಡಿದರೆ ಏನೂ ಮಾಹಿತಿ ಇರಲಿಲ್ಲ. ಒಳ್ಳೆ ವಿಚಾರವನ್ನು ಜನರಿಗೆ ತಿಳಿಸಿ ಹೊಸ ಚಾನೆಲ್‌ಗಳಿಗೆ ನಾನು ಸಂದರ್ಶನ ಕೊಟ್ಟಿದ್ದೀನಿ ನಮ್ಮವರು ಎಂದು ಗೌರವ ಕೊಟ್ಟು' ಎಂದು ರಕ್ಷಕ್ ಮಾತನಾಡಿದ್ದಾರೆ.  

 

Follow Us:
Download App:
  • android
  • ios