ಕರ್ಣನ್‌ ಎಸ್‌ ನಿರ್ದೇಶನದ ‘ಧೀರ ಭಗತ್‌ ರಾಯ್‌’ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ. ಇದೊಂದು ಪೊಲಿಟಿಕಲ್‌ ಡ್ರಾಮಾ ಕತೆಯ ಸಿನಿಮಾ. ಮೀಸಲು ಕ್ಷೇತ್ರದಲ್ಲಿ ನಡೆಯುವ ಚುನಾವಣೆಯ ಅಖಾಡದ ಹಿನ್ನೆಲೆಯಲ್ಲಿ ಇಡೀ ಸಿನಿಮಾ ಸಾಗುತ್ತದೆ.

ಕರ್ಣನ್‌ ಎಸ್‌ (Karnan S) ನಿರ್ದೇಶನದ ‘ಧೀರ ಭಗತ್‌ ರಾಯ್‌’ (Dheera Bhagat Roy) ಚಿತ್ರದ ಟೀಸರ್‌ (Teaser) ಬಿಡುಗಡೆ ಆಗಿದೆ. ಇದೊಂದು ಪೊಲಿಟಿಕಲ್‌ ಡ್ರಾಮಾ ಕತೆಯ ಸಿನಿಮಾ. ಮೀಸಲು ಕ್ಷೇತ್ರದಲ್ಲಿ ನಡೆಯುವ ಚುನಾವಣೆಯ ಅಖಾಡದ ಹಿನ್ನೆಲೆಯಲ್ಲಿ ಇಡೀ ಸಿನಿಮಾ ಸಾಗುತ್ತದೆ. ರಂಗಭೂಮಿ ಪ್ರತಿಭೆ ರಾಕೇಶ್‌ ದಳವಾಯಿ (Rakesh Dalawai) ನಾಯಕನಾಗಿ, ಸುಚರಿತ ಸಹಾಯ ರಾಜ್‌ ನಾಯಕಿಯಾಗಿ, ಶರತ್‌ ಲೋಹಿತಾಶ್ವ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರವೀಣ್‌ ಎಚ್‌.ಸಿ, ತ್ರಿವಿಕ್ರಮ್‌, ಮಠ ಕೊಪ್ಪಳ, ಸುಧೀರ್‌ ಕುಮಾರ್‌, ಮುರೊಳ್ಳಿ ಗೋವಿಂದ್‌, ಶಶಿಕುಮಾರ್‌, ಫಾರೂಕ್‌ ಅಹ್ಮದ್‌ ಚಿತ್ರದ ಮುಖ್ಯ ಪಾತ್ರಧಾರಿಗಳು. 

‘ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಹೋರಾಟ ಇದಾಗಿದೆ. ಕನ್ನಡದ ಮಟ್ಟಿಗೆ ಒಂದು ಅಚ್ಚುಕಟ್ಟಾದ ಕತೆಯನ್ನು ಈ ಸಿನಿಮಾ ಮೂಲಕ ಹೇಳುತ್ತಿದ್ದೇವೆಂಬ ತೃಪ್ತಿ ಇದೆ’ ಎನ್ನುತ್ತಾರೆ ನಿರ್ದೇಶಕ ಕರ್ಣನ್‌ ಎಸ್‌. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ, ಎಂ ಸೆಲ್ವಂ ಜಾನ್‌ ಛಾಯಾಗ್ರಾಹಣ ಇದೆ. ‘ನಟನೆಗೆ ಸ್ಕೋಪ್‌ ಇರುವ ಪಾತ್ರ ಸಿಕ್ಕಿದೆ. ಎಲ್ಲರಿಗೂ ಈ ಸಿನಿಮಾ ಇಷ್ಟವಾಗುತ್ತದೆಂಬ ನಂಬಿಕೆ ಇದೆ. ರಂಗಭೂಮಿಯಲ್ಲಿ ಮೆಚ್ಚಿಕೊಂಡಂತೆ ಚಿತ್ರರಂಗದಲ್ಲೂ ನನ್ನ ಅಭಿನಯ ಮೆಚ್ಚುತ್ತಾರೆಂಬ ವಿಶ್ವಾಸ ಇದೆ’ ಎಂದರು ರಾಕೇಶ್‌ ದಳವಾಯಿ. ನಿರ್ದೇಶಕ ಜಟ್ಟ ಗಿರಿರಾಜ್‌ ಚಿತ್ರತಂಡಕ್ಕೆ ಶುಭ ಕೋರಿದರು.

Yuva Rajkumar: ಯುವ ಹೊಸ ಚಿತ್ರಕ್ಕೆ ಸಂತೋಷ್‌ ಆನಂದ್‌ರಾಮ್‌ ನಿರ್ದೇಶನ

'ಧೀರ ಭಗತ್ ರಾಯ್' ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸಖತ್ ಪ್ರಾಮಿಸಿಂಗ್ ಆಗಿದೆ. ಅಧಿಕಾರಕ್ಕಾಗಿ ನಡೆಯುವ ಹೋರಾಟ, ಪ್ರೀತಿ-ಮಮತೆಯ ಸುತ್ತನಡೆಯುವ ಬಾಂಧವ್ಯದ ಕಥೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ಪ್ರತಿ ಪಾತ್ರಗಳ ಅಮೋಘ ಅಭಿನಯ ನೋಡುಗರ ಮನಮುಟ್ಟುತ್ತದೆ. ಶ್ರೀ ಓಂ ಸಿನಿ ಎಂಟರ್ಟೈನರ್ಸ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಧೀರ ಭಗತ್ ರಾಯ್ ಸಿನಿಮಾಗೆ ಪೂರ್ಣ ಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದು, ವಿಶ್ವ ಎನ್ ಎಂ ಸಂಕಲನ, ಎಂ ಸೆಲ್ವಂ ಜಾನ್ ಛಾಯಾಗ್ರಹಣ, ಕರಿಯಪ್ಪ ಎಸ್ ಪಾಲವ್ವನ ಹಳ್ಳಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈಗಾಗಲೇ ಶೇಖಡ 60ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಉಳಿದ ಭಾಗದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದೆ.

ಗ್ಯಾಂಗ್ಸ್ ಆಫ್‌ ಪಿನಾಕಿ ಪೋಸ್ಟರ್‌ ಬಿಡುಗಡೆ: ಯುವ ತಂಡವೊಂದು ಹೊಸ ಸಿನಿಮಾದ ಪೋಸ್ಟರ್‌ ಬಿಡುಗಡೆ ಮಾಡಿದೆ. ಆ ಸಿನಿಮಾದ ಹೆಸರು ಗ್ಯಾಂಗ್ಸ್ ಆಫ್‌ ಪಿನಾಕಿ. ಸುನೀಲ್‌ ವದತ್‌ ಈ ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕ. ಅಲೈಕಾ ಎನ್ನುವ ಸಿನಿಮಾ, ತಮಿಳಿನಲ್ಲಿ ಒಂದು ವೆಬ್‌ ಸೀರಿಸ್‌ ಮಾಡಿರುವ ವಿವೇಕ್‌ ಚಕ್ರವರ್ತಿ ಈ ಚಿತ್ರದ ನಾಯಕ. ದೆಹಲಿ ಮೂಲದ ನಟಿ ಕೃತಿಕಾ ನಾಯಕಿ. ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿರುವ ತಂಡವು ಕನ್ನಡ, ತೆಲಗು ಸೇರಿ ಐದು ಭಾಷೆಗಳಲ್ಲಿ ಸಿನಿಮಾ ಮಾಡಲು ನಿರ್ಧರಿಸಿದೆ. ಚಿತ್ರದಲ್ಲಿ ನಾಗಿ ಶೆಟ್ಟಿ, ವಿಜಯ್‌ ರಾಮ್‌, ವೆಂಕಟೇಶ್‌ ಮೂರ್ತಿ, ಕೃಷ್ಣಮೂರ್ತಿ, ಮಧುಸೂದನ್‌, ಪುನೀತ್‌ ಗೌಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅನೂಪ್‌ ಟಿ, ಸುಹಾಸ್‌ ರಾಜ್‌ ಹೆಚ್‌ ನಿರ್ದೇಶನ ತಂಡದಲ್ಲಿದ್ದಾರೆ.

ಕೊನೆಗೂ ಬಹಿರಂಗವಾಯ್ತು ರಣಬೀರ್ - ಅಲಿಯಾ ಮದುವೆ ದಿನಾಂಕ

ಮಾಲಾಶ್ರೀ-ರಂಜನಿ ರಾಘವನ್‌ ಹೊಸ ಚಿತ್ರ: ಹಿರಿಯ ನಟಿ ಮಾಲಾಶ್ರೀ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ರವೀಂದ್ರ ವೆಂಶಿ ನಿರ್ದೇಶಿಸುತ್ತಿರುವ ಆ್ಯಕ್ಷನ್‌ ಥ್ರಿಲ್ಲರ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್‌, ಪ್ರಮೋದ್‌ ಶೆಟ್ಟಿನಟಿಸುತ್ತಿದ್ದಾರೆ. ಮೂವರೂ ಡಾಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಮಂಜು ಪಾವಗಡ ತಾರಾಬಳಗದಲ್ಲಿದ್ದಾರೆ. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಘಟಿಸಿದ ನೈಜ ಘಟನೆಯನ್ನು ಸಿನಿಮಾ ಕಥೆಯಾಗಿಸಲಾಗಿದೆ. ‘ಚಿತ್ರದಲ್ಲಿ ಬಹುತೇಕ ಸನ್ನಿವೇಶಗಳು ಆಸ್ಪತ್ರೆಯಲ್ಲಿ ನಡೆಯಲಿದೆ’ ಎಂದು ನಿರ್ದೇಶಕ ರವೀಂದ್ರ ತಿಳಿಸಿದ್ದಾರೆ. ಬೆಂಗಳೂರಿನ ಬಿ ಎಸ್‌ ಚಂದ್ರಶೇಖರ್‌ ಚಿತ್ರದ ನಿರ್ಮಾಪಕರು.

YouTube video player