ಕನ್ನಡಿಗರು ಒಳ್ಳೆಯ ಸಿನಿಮಾವನ್ನು ಯಾವತ್ತೂ ಕೈ ಬಿಟ್ಟಿಲ್ಲ: ಇದು ‘ಮರ್ಯಾದೆ ಪ್ರಶ್ನೆ’

ಯಾವುದೇ ಸಿನಿಮಾದ ವೀಕ್ಷಣೆಗೆ ಪ್ರೇಕ್ಷಕರಲ್ಲಿ ಮೊದಲು ಕುತೂಹಲ ಹುಟ್ಟಿಸುವುದು ಆ ಸಿನಿಮಾದ ಹಾಡುಗಳು. ನಂತರ ಟ್ರೇಲರ್‌. ಈ ಎರಡರಲ್ಲೂ ಪಾಸ್‌ ಆಗಿರುವುದು ನಾಗರಾಜ ಸೋಮಯಾಜಿ ನಿರ್ದೇಶನದ, ಆರ್‌ಜೆ ಪ್ರದೀಪ ನಿರ್ಮಾಣದ ‘ಮರ್ಯಾದೆ ಪ್ರಶ್ನೆ’. 

Rakesh Adiga Suneel Rao Starrer Maryade Prashne Kannada Trailer Out gvd

ಯಾವುದೇ ಸಿನಿಮಾದ ವೀಕ್ಷಣೆಗೆ ಪ್ರೇಕ್ಷಕರಲ್ಲಿ ಮೊದಲು ಕುತೂಹಲ ಹುಟ್ಟಿಸುವುದು ಆ ಸಿನಿಮಾದ ಹಾಡುಗಳು. ನಂತರ ಟ್ರೇಲರ್‌. ಈ ಎರಡರಲ್ಲೂ ಪಾಸ್‌ ಆಗಿರುವುದು ನಾಗರಾಜ ಸೋಮಯಾಜಿ ನಿರ್ದೇಶನದ, ಆರ್‌ಜೆ ಪ್ರದೀಪ ನಿರ್ಮಾಣದ ‘ಮರ್ಯಾದೆ ಪ್ರಶ್ನೆ’. ಅರ್ಜುನ್‌ ರಾಮ್‌ ಸಂಗೀತ ನಿರ್ದೇಶನದ ಈ ಸಿನಿಮಾದ ಎರಡು ಹಾಡುಗಳು ಮನ ಮುಟ್ಟುವಂತಿದ್ದವು. ಇದೀಗ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ನೋಡಿದವರೆಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ.

ಕಲಾವಿದರಾದ ಸುನೀಲ್‌ ರಾವ್‌, ಪೂರ್ಣಚಂದ್ರ, ಶೈನ್‌ ಶೆಟ್ಟಿ, ನಾಗೇಂದ್ರ ಷಾ, ರೇಖಾ ಕೂಡ್ಲಿಗಿ, ರಾಕೇಶ್‌ ಅಡಿಗ, ತೇಜು ಬೆಳವಾಡಿ, ಪ್ರಭು ಮುಂಡ್ಕೂರು, ಶ್ರವಣ್‌ ಕುಮಾರ್‌ ಎಲ್ಲರೂ ಮಿಂಚಿದ್ದಾರೆ. ವಿಶೇಷ ಎಂದರೆ ಇತ್ತೀಚೆಗೆ ಗಮನ ಸೆಳೆಯುವಂತಹ ಸಿನಿಮಾ ಮಾಡಿದ ಎಲ್ಲಾ ಯುವ ನಿರ್ದೇಶಕರನ್ನು ಆಹ್ವಾನಿಸಿ ಅವರ ಕೈಯಲ್ಲಿ ಈ ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡಿಸಲಾಯಿತು. ನಂತರ ಮಾತನಾಡಿದ ನಿರ್ದೇಶಕ ನಾಗರಾಜ ಸೋಮಯಾಜಿ, ‘ಜೀವಂತಿಕೆಯ ಕತೆ ಇದು, ನಮ್ಮ ಸುತ್ತಮುತ್ತ ಇರುವ ಜೀವಗಳ ಕತೆ ಇದು. ರಿಯಲಿಸ್ಟಿಕ್‌ ರಿವೇಂಜ್‌ ಡ್ರಾಮಾ. 

ಸಂಜು ವೆಡ್ಸ್‌ ಗೀತಾ 2 ಸಿನಿಮಾ ಸೂಪರ್‌ ಹಿಟ್‌ ಆಗೋದು ನೂರಕ್ಕೆ ನೂರು ಗ್ಯಾರಂಟಿ: ನಟ ಉಪೇಂದ್ರ

ಕನ್ನಡಿಗರು ಒಳ್ಳೆಯ ಸಿನಿಮಾವನ್ನು ಯಾವತ್ತೂ ಕೈ ಬಿಟ್ಟಿಲ್ಲ. ಈ ಸಿನಿಮಾವನ್ನೂ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ’ ಎಂಬ ನಂಬಿಕೆ ಇದೆ ಎಂದರು. ಸಿನಿಮಾದ ಕತೆ ಬರೆದಿರುವ, ನಿರ್ಮಾಪಕ ಆರ್‌ಜೆ ಪ್ರದೀಪ, ‘ಪ್ರತಿಯೊಬ್ಬರೂ ಪ್ರತಿಯೊಬ್ಬರಿಗೂ ಗೌರವ, ಮರ್ಯಾದೆ ಕೊಡಲೇಬೇಕು. ಆಗ ಪ್ರಪಂಚ ಚೆನ್ನಾಗಿರುತ್ತದೆ. ಕೊಡದೇ ಇದ್ದಾಗ ಏನಾಗುತ್ತದೆ ಎಂಬ ಥಾಟ್‌ ಬಂದಾಗ ಈ ಕತೆ ಹುಟ್ಟಿಕೊಂಡಿತು. ಈ ಮಣ್ಣಿನ ಕತೆಗಳನ್ನು ಜಾಗತಿಕ ಮಟ್ಟದಲ್ಲಿ ಹೇಳುವ ಆಸೆಯ ಮೊದಲ ಪ್ರಯತ್ನ ಇದು’ ಎಂದರು.

ಮಧ್ಯಮ ವರ್ಗದ ಬದುಕಿನ ಬ್ಯೂಟಿ ಮರ್ಯಾದೆ ಪ್ರಶ್ನೆಯಲ್ಲಿದೆ: ‘ 20 ರುಪಾಯಿಯ ಒಂದು ಚುರುಮುರಿ 10 ರುಪಾಯಿಯ ಒಂದು ಕಾಫಿಯಲ್ಲೇ ಖುಷಿ ಕಾಣುವ ಮಧ್ಯಮ ವರ್ಗದ ಬದುಕು, ಅಭಿರುಚಿಯಲ್ಲಿ ಒಂದು ಬ್ಯೂಟಿ ಇದೆ. ಅದನ್ನು ಬಹಳ ಸಹಜವಾಗಿ ನಮ್ಮ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ನಾಗರಾಜ ಸೋಮಯಾಜಿ. ಇವರ ನಿರ್ದೇಶನದ ‘ಮರ್ಯಾದೆ ಪ್ರಶ್ನೆ’ ಎಂಬ ರಿವೆಂಜ್‌ ಡ್ರಾಮಾ ನ.22ಕ್ಕೆ ತೆರೆಗೆ ಬರುತ್ತಿದೆ. ‘ನಮ್ಮ ಸಿನಿಮಾದ ಪಾತ್ರಗಳೆಲ್ಲ ಚಾಮರಾಜಪೇಟೆ ಆಸುಪಾಸಿನಲ್ಲೇ ಮೈದಳೆದಿವೆ. 

ಕತೆ ಎಂದರೆ ಕಲಾವಿದನನ್ನು ತೃಪ್ತಿ ಪಡಿಸಬೇಕು, ನಿರ್ಮಾಪಕನಿಗೆ ಕಾಸು ಬರಬೇಕು: ಗೋಲ್ಡನ್‌ ಸ್ಟಾರ್‌ ಗಣೇಶ್‌

ಅಲ್ಲಿನ ಪರಿಸರ, ಜೀವನ ಶೈಲಿಯಲ್ಲಿ ಮೈದುಂಬಿಕೊಂಡು ಬದುಕಿನ ಸಂತೋಷ, ಸಂಘರ್ಷಗಳಿಗೆ ಮುಖಾಮುಖಿಯಾಗುತ್ತವೆ. ಮಧ್ಯಮ ವರ್ಗದ ರಿಯಾಲಿಟಿಗಳನ್ನು ತೆರೆ ಮೇಲೆ ನೋಡುವ ಪ್ರತಿಯೊಬ್ಬರೂ ಅದಕ್ಕೆ ಒಂದಲ್ಲ ಒಂದು ರೀತಿ ಕನೆಕ್ಟ್ ಆಗುತ್ತಾ ಹೋಗುತ್ತಾರೆ’ ಎನ್ನುತ್ತಾರೆ ನಾಗರಾಜ್‌. ಆರ್‌ ಜೆ ಪ್ರದೀಪ್‌ ಕಥೆ ಬರೆಯುವ ಜೊತೆಗೆ ಈ ಸಿನಿಮಾ ನಿರ್ಮಿಸಿದ್ದಾರೆ. ಶೈನ್‌ ಶೆಟ್ಟಿ, ಪೂರ್ಣಚಂದ್ರ ಮೈಸೂರು, ಸುನೀಲ್‌ ರಾವ್‌, ರಾಕೇಶ್‌ ಅಡಿಗ, ತೇಜು ಬೆಳವಾಡಿ, ರೇಖಾ ಕೂಡ್ಲಗಿ, ನಾಗೇಂದ್ರ ಶಾ, ಪ್ರಭು ಮುಂಡ್ಕೂರ್‌, ಹರಿಹರನ್‌ ವಿ ತಾರಾಗಣದಲ್ಲಿದ್ದಾರೆ.
 

Latest Videos
Follow Us:
Download App:
  • android
  • ios