ಬೆಂಗಳೂರು (ಮಾ. 27): ಮಂಡ್ಯ ಕಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾಗೆ ಬೆಂಬಲಗಳ ಮಹಾಪೂರವೇ ಹರಿದು ಬರುತ್ತಿದೆ. ಸ್ಟಾರ್ ನಟರು, ರೈತಸಂಘ ಬೆಂಬಲ ನೀಡಿದ್ದಾರೆ. ಇದೀಗ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಸುಮಲತಾಗೆ ಬೆಂಬಲ ನೀಡುತ್ತಾರೆ. ಅವರ ಪರ ಪ್ರಚಾರಕ್ಕೆ ಬರುತ್ತಾರೆ ಎಂಬ ಮಾತು ಕೇಳಿ ಬಂದಿದೆ.

ಯಶ್-ದರ್ಶನ್‌ಗೆ ಭದ್ರತೆ ಕೋರಿ ಕೇಂದ್ರಕ್ಕೆ ಪತ್ರ ಬರೆದ ಬಿಜೆಪಿ

ಜೊತೆಗೆ ನಟರಾದ ಶತ್ರುಘ್ನ ಸಿನ್ಹಾ, ಮೋಹನ್ ಬಾಬು ಕೂಡಾ ಸಪೋರ್ಟ್ ಮಾಡುತ್ತಾರೆ ಎಂದು ಕೇಳಿ ಬಂದಿದೆ.  ಈ ಬಗ್ಗೆ ಸುಮಲತಾ ಪ್ರತಿಕ್ರಿಯೆ ನೀಡುತ್ತಾ, ರಜನೀಕಾಂತ್, ನನ್ನ ಪರ ಪ್ರಚಾರಕ್ಕೆ ಬರುವುದಿಲ್ಲ. ನಾನು ಯಾರಿಗೂ ಪ್ರಚಾರಕ್ಕೆ ಬನ್ನಿ ಎಂದು ವಿನಂತಿ ಮಾಡಿಕೊಂಡಿಲ್ಲ. ಇವೆಲ್ಲಾ ವದಂತಿ ಎಂದು ಹೇಳಿದ್ದಾರೆ . 

ಗೋಲ್ಡನ್ ಸ್ಟಾರ್ ಮನೆಯಲ್ಲಿಂದು ಸಂಭ್ರಮ; ಕಾರಣ ಏನು ಗೊತ್ತಾ?

ರಜನೀಕಾಂತ್, ಮೋಹನ್ ಬಾಬು ಜೊತೆ ಅಂಬರೀಶ್ ನಿಕಟ ಸ್ನೇಹ ಹೊಂದಿದ್ದರಿಂದ ಇಂತದ್ದೊಂದು ಮಾತಿಗೆ ಇನ್ನಷ್ಟು ಪುಷ್ಟಿ ಬಂದಿತ್ತು.