ಮಂಡ್ಯ ಲೋಕಸಭಾ ಕಣ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ | ದರ್ಶನ್, ಯಶ್ ಭದ್ರತೆ ಕೋರಿ ಕೇಂದ್ರಕ್ಕೆ ಪತ್ರ ಬರೆದ ರಾಜ್ಯ ಬಿಜೆಪಿ | 

ಬೆಂಗಳೂರು (ಮಾ. 27): ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಬೆಳವಣಿಗೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಮಲತಾ-ನಿಖಿಲ್ ಸ್ಪರ್ಧೆಯಿಂದ ಮಂಡ್ಯ ರಣಾಂಗಣ ಇನ್ನಷ್ಟು ಕಾವೇರಿದೆ. ಸುಮಲತಾ ಪರ ದರ್ಶನ್-ಯಶ್ ನಿಂತಿದ್ದು ಇನ್ನಷ್ಟು ಕಾವು ಹೆಚ್ಚಾಗುವಂತೆ ಮಾಡಿದೆ. ಬಿಜೆಪಿ ಮಂಡ್ಯದಿಂದ ಅಭ್ಯರ್ಥಿಯನ್ನು ನಿಲ್ಲಿಸದೇ ಸುಮಲತಾಗೆ ಬೆಂಬಲ ನೀಡಿದೆ. 

ಯಶ್, ದರ್ಶನ್ ಗೆ ಭದ್ರತೆ ನೀಡುವಂತೆ ರಾಜ್ಯ ಬಿಜೆಪಿ ಕೇಂದ್ರಕ್ಕೆ ಪತ್ರ ಬರೆದಿದೆ. ರಾಜ್ಯ ಪ್ರಧಾನಿ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗೆ ಪತ್ರ ಬರೆದಿದ್ದಾರೆ. 

Scroll to load tweet…

ದರ್ಶನ್ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಕೆ. ಆರ್ ಪೇಟೆ ನಾರಾಯಣ ಗೌಡ ಯಶ್, ದರ್ಶನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು.