ಬೆಂಗಳೂರು (ಮಾ. 27): ಗೋಲ್ಡನ್ ಸ್ಟಾರ್ ಮನೆಯಲ್ಲಿಂದು ಸಂಭ್ರಮ ಮನೆ ಮಾಡಿದೆ. ಗಣೇಶ್, ಶಿಲ್ಪಾ-ಗಣೇಶ್ ದಂಪತಿ ಖುಷಿಯಲ್ಲಿದ್ದಾರೆ. ಕಾರಣ ಇಂದು ಅವರ ಪುತ್ರಿ ಚಾರಿತ್ರ್ಯ ಹುಟ್ಟುಹಬ್ಬ. 

ಗಣೇಶ್ ತಮ್ಮ ಮಗಳ ವಿಶೇಷ ಫೋಟೋಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಚಾರಿತ್ರ್ಯ ಮುದ್ಮುದ್ದಾಗಿ ಕಾಣಿಸುತ್ತಾರೆ. 

 

ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿಗೆ ಮಗಳು ಚಾರಿತ್ರ್ಯ ಹಾಗೂ ವಿಹಾನ್ ಎನ್ನುವ ಮಗನಿದ್ದಾನೆ. ಚಾರಿತ್ರ್ಯ ಈಗಾಗಲೇ ’ಚಮಕ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ.