Asianet Suvarna News Asianet Suvarna News

ರಜನಿಕಾಂತ್‌ ಅವರಿಗೂ ಕೆಡಿ ಚಿತ್ರದ ನನ್ನ ಪಾತ್ರಕ್ಕೂ ಸಂಬಂಧ ಇಲ್ಲ: ರಮೇಶ್‌ ಅರವಿಂದ್‌

ಇದು ರಜನಿಕಾಂತ್‌ ಅವರನ್ನು ಹೋಲುತ್ತಿದ್ದು ಈ ಬಗ್ಗೆ ರಮೇಶ್‌ ಅವರನ್ನು ಪ್ರಶ್ನಿಸಿದಾಗ ಅವರು ಹೇಳಿದ್ದಿಷ್ಟು.

Rajinikant and KD film my character has no connection says Ramesh Aravind vcs
Author
First Published Nov 3, 2023, 9:57 AM IST

ಜೋಗಿ ಪ್ರೇಮ್‌ ನಿರ್ದೇಶನದ ‘ಕೆಡಿ’ ಸಿನಿಮಾದ ರಮೇಶ್‌ ಅರವಿಂದ್‌ ಪಾತ್ರದ ಫಸ್ಟ್ ಲುಕ್‌ ರಿವೀಲ್‌ ಆಗಿದೆ. ಚಿತ್ರದಲ್ಲಿ ರಮೇಶ್‌ ‘ಧರ್ಮ’ ಎಂಬ ರಗಡ್‌ ಪಾತ್ರದಲ್ಲಿ ನಟಿಸಿದ್ದಾರೆ. ಇದು ರಜನಿಕಾಂತ್‌ ಅವರನ್ನು ಹೋಲುತ್ತಿದ್ದು ಈ ಬಗ್ಗೆ ರಮೇಶ್‌ ಅವರನ್ನು ಪ್ರಶ್ನಿಸಿದಾಗ ಅವರು ಹೇಳಿದ್ದಿಷ್ಟು.

- ಕೆಡಿ ಸಿನಿಮಾದ ನನ್ನ ಪಾತ್ರ 1978ರ ಸುಮಾರಿಗೆ ನಡೆಯುವಂಥಾದ್ದು. ಆ ಕಾಲಘಟ್ಟದಲ್ಲಿ ಹೇರ್‌ಸ್ಟೈಲ್‌, ಡ್ರೆಸಿಂಗ್‌ ಅದೇ ಥರ ಇತ್ತು. ನಾನು ಕಾಲೇಜಲ್ಲಿ ಇದ್ದಾಗಲೂ ಇದೇ ಥರ ಕಾಣ್ತಿದ್ದೆ. ಈಗ ನನ್ನ ಪಾತ್ರವೂ ಆ ಕಾಲಘಟ್ಟದಲ್ಲೇ ನಡೆಯೋದರಿಂದ ಲುಕ್ ಹಾಗಿದೆ. ಆ ಕಾಲದಲ್ಲಿ ರಜನಿಕಾಂತ್‌ ಹವಾ ಜೋರಿತ್ತು. ಎಲ್ಲರೂ ರಜನಿಕಾಂತ್‌ ಸ್ಟೈಲ್‌ ಅನುಕರಿಸುತ್ತಿದ್ದರು. ಹೀಗಾಗಿ ನನ್ನ ಪಾತ್ರದಲ್ಲೂ ಆ ಪ್ರಭಾವ ಕಾಣಿಸುತ್ತದೆ. ಇದರ ಹೊರತಾಗಿ ರಜನಿಕಾಂತ್‌ ಅವರಿಗೂ ನನ್ನ ಪಾತ್ರಕ್ಕೂ ಯಾವುದೇ ಸಂಬಂಧ ಇಲ್ಲ.

ಆ್ಯಕ್ಷನ್‌ ಪ್ರಿನ್ಸ್ 'KD' ಪ್ರಪಂಚಕ್ಕೆ ಧರ್ಮನ ಎಂಟ್ರಿ! ಕೆಡಿಗೂ ಧರ್ಮನಿಗೂ ಏನು ಸಂಬಂಧ ?

- ಕೆಡಿ ಸಿನಿಮಾದ ಧರ್ಮ ಸದಾ ಧರ್ಮದ ಪರವಾಗಿ ನಿಲ್ಲುವವನು. ಅಧರ್ಮ ಸಹಿಸೋನಲ್ಲ. ಅದನ್ನೇ ಪ್ರೇಮ್‌ ಬಹಳ ಪ್ಯಾಶನೇಟ್‌ ಆಗಿ ತೋರಿಸಿದ್ದಾರೆ. ನಿಮ್ಮ ಪಾತ್ರವನ್ನು ಮಾಸ್‌ ಆಗಿ ತೋರಿಸ್ತೀನಿ ಅಂದಿದ್ದಾರೆ. ನಮ್ಮ ಭಾಗದ ದೃಶ್ಯಗಳ ಒಂದು ಹಂತದ ಶೂಟಿಂಗ್‌ ಮುಗಿದಿದೆ. ಇದರಲ್ಲಿ ಸಂಜಯ್‌ ದತ್‌, ರವಿಚಂದ್ರನ್‌ ಹಾಗೂ ನನ್ನ ಕಾಂಬಿನೇಶನ್‌ನ ಸೀನ್‌ಗಳಿದ್ದವು.

- ಬೆಂಗಳೂರಲ್ಲಿ, ಮೈಸೂರಲ್ಲಿ ಈ ಸಿನಿಮಾಕ್ಕಾಗಿ ಬೃಹತ್‌ ಸೆಟ್‌ ಹಾಕಿದ್ದಾರೆ. ನಮ್ಮ ಟೌನ್‌ಹಾಲ್‌ 70 - 80ರ ದಶಕದಲ್ಲಿ ಇದ್ದ ಹಾಗೆ ಮರು ನಿರ್ಮಾಣ ಮಾಡಿದ್ದಾರೆ.

- ನಾನು ಮೈಸೂರಲ್ಲಿ ಶಿವಣ್ಣ - ಪ್ರೇಮ್ ಕಾಂಬಿನೇಶನ್‌ನ ‘ಜೋಗಿ’ ಸಿನಿಮಾ ನೋಡಿ ಬೆರಗಾಗಿ ಅಲ್ಲಿಂದಲೇ ಪ್ರೇಮ್‌ ಅವರಿಗೆ ಫೋನ್‌ ಮಾಡಿ ಅಭಿನಂದನೆ ತಿಳಿಸಿದ್ದೆ. ಅಲ್ಲಿಂದಲೇ ನಮ್ಮಿಬ್ಬರ ನಡುವೆ ಸ್ನೇಹ ಇದೆ. ಅವರ ಸಿನಿಮಾದಲ್ಲಿ ನಟಿಸುವ ಪ್ಲಾನ್ ನಡೆಯುತ್ತಲೇ ಇತ್ತು. ಇದೀಗ ಅದು ಸಾಧ್ಯವಾಗಿದೆ. ಪ್ರತಿಭೆಗಳ ದೊಡ್ಡ ಗಡಣವೇ ಇಲ್ಲಿದೆ. ಅವರ ಜೊತೆಗೆ ನಟಿಸೋದಕ್ಕೆ ಖುಷಿ ಇದೆ. ಜೊತೆಗೆ ನನ್ನ ಪಾತ್ರವೂ ಚೆನ್ನಾಗಿದೆ. ಹೀಗಾಗಿ ಸಿನಿಮಾ ಒಪ್ಪಿಕೊಂಡೆ.

 

Follow Us:
Download App:
  • android
  • ios