ಪೊಲೀಸ್ ಪಾತ್ರದಲ್ಲಿ ದೀಪಕ್ ಖದರ್ ತೋರಿಸಿದ್ದು, ತಪಸ್ವಿನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಾಸ್ ಕ್ವೀನ್ ರಾಗಿಣಿ ದ್ವಿವೇದಿ ಹೆಜ್ಜೆ ಹಾಕಿರುವ ಸಾರಾಯಿ ಶಾಂತಮ್ಮ ಹಾಡು ಈಗಾಗಲೇ ಹಿಟ್ ಲೀಸ್ಟ್ ಸೇರಿದೆ. ..
ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ರಾಜವರ್ಧನ್ (Rajavardan) ಅಭಿನಯದ ಬಹು ನಿರೀಕ್ಷಿತ 'ಗಜರಾಮ' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. 2 ನಿಮಿಷ 46 ಸೆಕೆಂಡ್ ಇರುವ ಟ್ರೇಲರ್ ನಲ್ಲಿ ಆಕ್ಷನ್, ಎಮೋಷನ್, ಸೆಂಟಿಮೆಂಟ್, ಲವ್ ಅಂಶಗಳೇ ಹೈಲೆಟ್ಸ್.. ರಾಜವರ್ಧನ್ ಕುಸ್ತಿಕಣದಲ್ಲಿ ಪೈಲ್ವಾನ್ ಆಗಿ ತೊಡೆ ತಟ್ಟಿದ್ದು, ಕಬೀರ್ ಸಿಂಗ್ ಖಳನಾಯಕನಾಗಿ ಅಬ್ಬರಿಸಿದ್ದಾರೆ.
ಪೊಲೀಸ್ ಪಾತ್ರದಲ್ಲಿ ದೀಪಕ್ ಖದರ್ ತೋರಿಸಿದ್ದು, ತಪಸ್ವಿನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಾಸ್ ಕ್ವೀನ್ ರಾಗಿಣಿ ದ್ವಿವೇದಿ ಹೆಜ್ಜೆ ಹಾಕಿರುವ ಸಾರಾಯಿ ಶಾಂತಮ್ಮ ಹಾಡು ಈಗಾಗಲೇ ಹಿಟ್ ಲೀಸ್ಟ್ ಸೇರಿದೆ. ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ. ಮಠದ್ ಸಂಕಲನ, ಧನಂಜಯ್ ಅವರ ಕೊರಿಯೋಗ್ರಾಫಿ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ , ಚೇತನ್ ಕುಮಾರ್ ಅವರ ಸಾಹಿತ್ಯವಿದೆ. ಮೆಲೋಡಿ ಮಾಂತ್ರಿಕ ಮನೋಮೂರ್ತಿ ಸಂಗೀತ ಚಿತ್ರದ ತೂಕ ಹೆಚ್ಚಿಸಿದೆ.
ಅಣ್ಣಾವ್ರು ಮನೆಲ್ಲಿ 'ತತ್ತಯ್ಯಾ' ಅಂತಿದ್ರು..; ಅದ್ನ ಅಪ್ಪು ಬಾಯಲ್ಲಿ ಕೇಳಿ, ಎಂಥಾ ಸೊಗಸು!
ಒಂದಷ್ಟು ನಿರ್ದೇಶಕರ ಜೊತೆ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವಿರುವ ಸುನಿಲ್ ಕುಮಾರ್ ಅವರೀಗ 'ಗಜರಾಮ' ಸಿನಿಮಾ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. 'ಬಾಂಡ್ ರವಿ' ಸಿನಿಮಾವನ್ನು ನಿರ್ಮಾಣ ಮಾಡಿರುವ ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ ಅಡಿಯಲ್ಲಿ ನರಸಿಂಹಮೂರ್ತಿ 'ಗಜರಾಮ' ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಟ್ರೇಲರ್ ಮೂಲಕ ಆಮಂತ್ರಣ ಕೊಟ್ಟಿರುವ ಚಿತ್ರತಂಡ ಫೆಬ್ರವರಿ 7ಕ್ಕೆ ಸಿನಿಮಾವನ್ನು ತೆರೆಗೆ ತರಲಿದೆ.
ಅಂದಹಾಗೆ, ಡ್ರಗ್ಸ್ ಕೇಸ್ ಆರೋಪದಿಂದ ಇತ್ತೀಚೆಗಷ್ಟೇ ಮುಕ್ತಿ ಪಡೆದಿರುವ ನಟಿ ರಾಗಿಣಿ ಅವರು ಇದೀಗ ಮತ್ತೆ ಆಕ್ಟಿವ್ ಆಗತೊಡಗಿದ್ದಾರೆ. ಈ ಗಜರಾಮ ಚಿತ್ರದಲ್ಲಿ 'ಸಾರಾಯಿ ಶಾಂತಮ್ಮ' ಹಾಡಿಗೆ ಸಕತ್ ಜೋಶ್‌ಫುಲ್ ಆಗಿಯೇ ಹೆಜ್ಜೆ ಹಾಕಿದ್ದಾರೆ ನಟಿ ರಾಗಿಣಿ ದ್ವಿವೇದಿ. ಮುಂದಿನ ತಿಂಗಳು ತೆರೆಗೆ ಬರಲಿರುವ ಗಜರಾಮ ಚಿತ್ರದ ಮೂಲಕ ನಟಿ ರಾಗಿಣಿ ಮತ್ತೆ ಹೊಸ ಇನ್ನಿಂಗ್ಸ್ ಶುರು ಮಾಡಬಹುದು, ಕಾದು ನೋಡಬೇಕಷ್ಟೇ!
ರಜನಿಕಾಂತ್ ಅವರಿಗೆ ಸಿನಿಮಾ ಮಾಡೋ ಅಗತ್ಯವಿಲ್ಲ ಅಂತ ಹೇಳ್ಬೇಡಿ: ಕಿಚ್ಚ ಸುದೀಪ್
