Su From So :ಸು ಫ್ರಮ್ ಸೋ ಸಿನಿಮಾದ ಬಂದರೋ ಬಂದರೋ ಬಾವ ಬಂದರೋ ಸಾಂಗ್ ಗೆ ಈಗ ಸ್ಟೆಪ್ಸ್ ಸಿಕ್ಕಿದೆ. ರಾಜ್ ಬಿ. ಶೆಟ್ಟಿ ಡಾನ್ಸ್ ಪ್ರೇಮಿಗಳಿಗೆ ಸಖತ್ ಗಿಫ್ಟ್ ನೀಡಿದ್ದಾರೆ.
ಬಂದರೋ ಬಂದರೋ ಬಾವ ಬಂದರೋ.. ಕುಂತ್ರೆ ನಿಂತ್ರೆ ಇದೇ ಹಾಡು. ಸಿನಿಮಾ ನೋಡಿದ ಎಲ್ಲರ ಬಾಯಲ್ಲಿ ಈ ಹಾಡು ಕೇಳಿ ಬರ್ತಿದೆ. ಆದ್ರೆ ಈ ಹಾಡಿಗೆ ಯಾವ ಸ್ಟೆಪ್ಸ್ ಹಾಕ್ಬೇಕು ಅನ್ನೋ ಕನ್ಫ್ಯೂಸ್ ಫ್ಯಾನ್ಸ್ ಗಿತ್ತು. ಅವ್ರದ್ದೇ ಸ್ಟೈಲ್ ನಲ್ಲಿ ಕುಣಿದು ಕೆಲವರು ರೀಲ್ಸ್ ಮಾಡಿದ್ರೆ ಮತ್ತೆ ಕೆಲವರು ಯಾವ್ದೋ ವಿಡಿಯೋ, ಫೋಟೋಗೆ ಈ ಸಾಂಗ್ ಹಾಕ್ತಾ ಇದ್ರು. ಆದ್ರೀಗ ಸು ಫ್ರಮ್ ಸೋ (su from so) ಅಲಿಯಾಸ್ ಸುಲೋಚನ ಫ್ರಮ್ ಸೋಮೇಶ್ವರ ಚಿತ್ರದ ಬಂದರೋ ಬಂದರೋ ಬಾವ ಬಂದರೋ ಹಾಡಿಗೆ ನಿಮ್ಗೆ ಸ್ಟೆಪ್ಸ್ ಸಿಕ್ಕಿದೆ. ಮತ್ತ್ಯಾಕೆ ತಡ, ಒಂದೊಂದೇ ರೀಲ್ಸ್ ಹೊರ ಬರ್ಲಿ.
ರಾಜ್ ಬಿ. ಶೆಟ್ಟಿ (Raj B. Shetty) ನಿರ್ಮಾಣದ ಸು ಫ್ರಂ ಸೋ ಸಿನಿಮಾದಲ್ಲಿ ಹಿಟ್ ಆಗಿರೋ ಹಾಡು ನಮ್ದೆ ಡಾನ್ಸ್ ಫ್ಲೋರ್. ಇದಕ್ಕೆ ಜನ ಹುಚ್ಚೆದ್ದು ಕುಣಿತಿದ್ದಾರೆ. ಸಿನಿಮಾ ನೋಡಿದೋರು ಇನ್ನೊಂದು ಹಾಡು ಗುನುಗ್ತಿದ್ದಾರೆ. ಅದೇ ಬಂದರೋ ಬಂದರೋ ಬಾವ ಬಂದರೋ. ಆದ್ರೆ ಈ ಹಾಡಿಗೆ ಯಾವ ದೃಶ್ಯ ಪ್ಲೇ ಆಗುತ್ತೆ ಅನ್ನೋದು ಸಿನಿಮಾ ನೋಡಿದೋರಿಗೆ ಗೊತ್ತು. ಹಾಗಾಗಿ ಸ್ಟೆಪ್ಸ್ ಸ್ವಲ್ಪ ಕೈಕೊಡ್ತಾ ಇತ್ತು. ಇನ್ಮುಂದೆ ಈ ಟೆನ್ಷನ್ ಇಲ್ಲ. ನಟ ಹಾಗೂ ನಿರ್ಮಾಪಕ ರಾಜ್ ಬಿ. ಶೆಟ್ಟಿ ಅದಕ್ಕೆ ಸ್ಟೆಪ್ಸ್ ನೀಡಿದ್ದಾರೆ.
ಯಸ್, ರಾಜ್ ಬಿ. ಶೆಟ್ಟಿ , ನಿರ್ದೇಶಕ ಹಾಗೂ ನಟ ಸುಲೋಚನ ಅಲಿಯಾಸ್ ಜೆಪಿ ತೂಮಿನಾಡ್ (JP Toominad) ಹಾಗೇ ರವಿಯಣ್ಣ ಅಂತಾನೇ ಪ್ರಸಿದ್ಧಿ ಪಡೆದಿರುವ ಶನೀಲ್ ಗೌತಮ್ (Shanil Gautam), ಈ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ರಾಜ್ ಬಿ. ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಬಾವ ಬಂದ್ರು ನಮ್ಮ ವರ್ಷನ್. ಧನ್ಯವಾದ ಕರ್ನಾಟಕ. ನೆಕ್ಟ್ ಸ್ಟಾಪ್ ಕೇರಳ ಅಂತ ಶೀರ್ಷಿಕೆ ಹಾಕಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಸಿಂಪಲ್ ಆಗಿ, ರಾಜ್ ಬಿ. ಶೆಟ್ಟಿ, ಜೆಪಿ ತೂಮಿನಾಡ್ ಹಾಗೂ ಶನೀಲ್ ಗೌತಮ್ ಡಾನ್ಸ್ ಮಾಡಿದ್ದು, ನೋಡೋಕೆ ಮಜ ನೀಡ್ತಿದೆ. ಸದ್ಯ ಈ ವಿಡಿಯೋ ವೈರಲ್ ಆಗ್ತಿದೆ. ಸು ಫ್ರಮ್ ಸೋ ವೀಕ್ಷಕರು ಇದನ್ನು ನೋಡಿ ಎಂಜಾಯ್ ಮಾಡ್ತಿದ್ದಾರೆ. ಬಂದರು ಬಂದರು ಅಂತ ಟ್ರೆಂಡ್ ತಂದಿದ್ದೀರಿ,. ನಿಮ್ಮ ಸಿನಿಮಾ ನೋಡೋಕೆ ಜನವೋ ಜನ, ಟಿಕೆಟ್ ಸಿಗ್ತಿಲ್ಲ. ಸಿನಿಮಾ ಸೂಪರ್ ಅಂತ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಸು ಫ್ರಮ್ ಸೋ ಸಿನಿಮಾ ಕನ್ನಡದಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಆನ್ಲೈನ್ ನಲ್ಲಿ ಜನ ಟಿಕೆಟ್ ಬುಕ್ ಮಾಡೋಕೆ ಪರದಾಡುವಂತಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಹೊಸ ಟ್ರೆಂಡ್ ಕ್ರಿಯೆಟ್ ಮಾಡಿದ ಸಿನಿಮಾ, ಕೋಟಿ ಕೋಟಿ ಬಾಚಿಕೊಳ್ತಿದೆ. ಐದಾರು ದಿನಗಳಲ್ಲಿ 20 ಕೋಟಿಗೂ ಹೆಚ್ಚು ಗಳಿಕೆ ಮಾಡಿದ ಸಿನಿಮಾ, ದಾಖಲೆಯತ್ತ ಮುನ್ನುಗ್ಗುತ್ತಿದೆ.
ಈ ಮಧ್ಯೆ ಇಂದು ಅಂದ್ರೆ ಆಗಸ್ಟ್ ಒಂದರಂದು ಮಲಯಾಳಂನಲ್ಲಿ ಸಿನಿಮಾ ತೆರೆಗೆ ಬಂದಿದೆ. ತೆಲುಗು ವರ್ಷನ್ ಡಬ್ಬಿಂಗ್ ಶುರುವಾಗಲಿದೆ. ಆಗಸ್ಟ್ 7 ರಂದು ತೆಲುಗಿನಲ್ಲಿ ಸಿನಿಮಾ ತೆರೆಗೆ ಬರಲಿದೆ. ಹಿಂದಿಯಲ್ಲಿ ಡಬ್ಬಿಂಗ್ ಶುರುವಾಗಿದ್ದು, ಚಿತ್ರ ತಂಡ ಬಿಡುಗಡೆ ದಿನಾಂಕ ಹೇಳಿಲ್ಲ. ಈ ಮಧ್ಯೆ ಇಂದಿನಿಂದ ಯುಎಸ್ ಎ, ಜರ್ಮನಿ ಕೆಲ ನಗರದಲ್ಲಿ ಸಿನಿಮಾ ತೆರೆ ಕಂಡಿದೆ. ಕೆಲ ದಿನಗಳಲ್ಲಿಯೇ ಆಸ್ಟ್ರೇಲಿಯಾದಲ್ಲೂ ಸಿನಿಮಾ ಬಿಡುಗಡೆ ಆಗಲಿದೆ.
