ರಾಗಿಣಿಗೆ ಮದ್ವೆ ಪ್ರಪೋಸ್ ಮಾಡಿದ್ದು ನಿಜ; ಆರೋಪಿ ಶಿವಪ್ರಕಾಶ್ ಸ್ಪಷ್ಟನೆ!
ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟಿ ರಾಗಿಣಿಯ ಒಂದು ಕಾಲದ ಬಾಯ್‌ಫ್ರೆಂಡ್ ಶಿವಪ್ರಕಾಶ್ ಮಾಧ್ಯಮಗಳಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸೌಂಡ್ ಮಾಡಿದ ಡ್ರಗ್ಸ್ ಮಾಫಿಯಾ ವಿಚಾರಣೆ ಇನ್ನೂ ಮುಂದುವರಿದಿದೆ. ಅನಾರೋಗ್ಯ ಕಾರವೊಡ್ಡಿ ಸಂಜನಾ ಜೈಲಿನಿಂದ ಹೊರ ಬಂದಿರಬಹುದು. ಆದರೆ, ರಾಗಣಿ ಇನ್ನೂ ಕಂಬಿ ಎಣಿಸುತ್ತಿದ್ದಾರೆ. ರಾಗಿಣಿ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ವಾರಕ್ಕೆ ಮುಂದೂಡಿದ್ದು, ಮತ್ತೊಂದು ವಾರ ಜೈಲಿನ ಕಂಬಿ ಎಣಿಸುವುದು ಅವರಿಗೆ ಅನಿವಾರ್ಯವಾಗಲಿದೆ. ಈ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ನಂ.1 ಶಿವಪ್ರಕಾಶ್ ವಿಚಾರಣೆಗೆ ಹಾಜರಾಗಿದ್ದರು.
ಆಸ್ಪತ್ರೇಲಿ ಚಿಕಿತ್ಸೆ ಪಡೆದು ಜೈಲಿಗೆ ಮರಳಿದ ರಾಗಿಣಿ
ಲವ್, ಪ್ರಪೋಸ್ ನಿಜವೇ?:
ನಟಿ ರಾಗಿಣಿ ಬಾಯ್ ಫ್ರೆಂಡ್ ಆಗಿದ್ದ ಶಿವಪ್ರಕಾಶ್ ತಮ್ಮ ಪ್ರೀತಿ ವಿಚಾರವನ್ನು ಒಪ್ಪಿಕೊಂಡಿದ್ದಾರೆ. 'ನನ್ನನ್ನು ಯಾಕೆ ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಅನ್ನೋದು ಗೊತ್ತಿಲ್ಲ. ರಾಗಿಣಿ ಹಾಗೂ ನನ್ನ ಸಂಬಂಧ ಮುರಿದು ಮೂರು ವರ್ಷ ಆಗಿದೆ. ರಾಗಿಣಿಯನ್ನು ಇಷ್ಟ ಪಟ್ಟಿದ್ದು ನಿಜ, ಪ್ರಪೋಸ್ ಮಾಡಿದ್ದೂ ಹೌದು. 2017ರಲ್ಲಿ ಮದುವೆಯಾಗಬೇಕೆಂದು ನಿರ್ಧರಿಸಿ ಮದುವೆ ಪ್ರಸ್ತಾಪವನ್ನೂ ಮಾಡಿದ್ದೆ. ಕೆರಿಯರ್ ಬಗ್ಗೆ ಯೋಚನೆ ಮಾಡ್ತಿದ್ದೀನಿ, ಈಗಲೇ ಬೇಡ ಅಂದಳು. ಆಗ ಇಬ್ಬರೂ ಒಪ್ಪಂದದ ಮೇಲೆ ದೂರ ಆದೆವು. ಅಂದಿನಿಂದ ನನ್ನ ಸಂಪರ್ಕದಲ್ಲಿ ರಾಗಿಣಿ ಇಲ್ಲ,' ಎಂದು ಶಿವಪ್ರಕಾಶ್ ಹೇಳಿದ್ದಾರೆ.
ರವಿಶಂಕರ್ ಸುಳ್ಳು ಕೇಸ್:
ಶಿವಪ್ರಕಾಶ್ ಜೊತೆ ಬ್ರೇಕ್ ಅಪ್ ಆದ ನಂತರ ರವಿಶಂಕರ್ ಎಂಬುವವರನ್ನು ರಾಗಿಣಿ ಪ್ರೀತಿಸುತ್ತಿದ್ದರು. ಖಾಸಗಿ ಹೊಟೇಲ್‌ನಲ್ಲಿ ಶಿವಪ್ರಕಾಶ್ ಹಾಗೂ ರವಿಶಂಕರ್ ಇಬ್ಬರ ನಡುವೆಯೂ ಜಗಳವಾಗಿತ್ತು ಎಂಬ ಆರೋಪವೂ ಕೇಳಿ ಬಂದಿತ್ತು. ಈ ಬಗ್ಗೆಯೂ ಶಿವಪ್ರಕಾಶ್ ಕ್ಲಾರಿಟಿ ನೀಡಿದ್ದಾರೆ. 'ಗಲಾಟೆಯಲ್ಲಿಯೂ ನಮ್ಮ ಮೇಲೆ ರವಿಶಂಕರ್ ಸುಳ್ಳು ಕೇಸ್ ನೀಡಿದ್ದಾರೆ. ವಿಚಾರಣೆಯಲ್ಲಿ ಪೊಲೀಸರು ಆರೋಪ ಸುಳ್ಳು ಅಂತ ತೀರ್ಮಾನ ಮಾಡಿದರು. ರವಿಶಂಕರ್ ಬೇಕು ಬೇಕೆಂದೇ ನನ್ನನ್ನು ಸಿಲುಕಿಸಿದ್ದಾನೆ,' ಎಂಬುವುದು ಶಿವಪ್ರಕಾಶ್ ಆರೋಪ.
3 ತಿಂಗಳಿನಿಂದ ಪರಪ್ಪನ ಅಗ್ರಹಾರದಲ್ಲಿ ರಾಗಿಣಿ; ಮನೆ ಸೇರೋದು ಯಾವಾಗ?
ಡ್ರಗ್ಸ್ ವಿಚಾರಣೆ:
'ನನಗೂ ಡ್ರಗ್ಸ್‌ಗೂ ದೂರದ ಮಾತು, ನಾನು ಡ್ರಗ್ಸ್ ಸೇವಿಸಿಲ್ಲ. ಈ ವಿಚಾರದ ಬಗ್ಗೆ ತನಿಖಾಧಿಕಾರಿಗಳಿಗೆ ಎಲ್ಲಾ ಮಾಹಿತಿ ಕೊಟ್ಟಿರುವೆ ಹಾಗೂ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೀನಿ. ಇಷ್ಟು ದಿನ ನಾನು ಎಲ್ಲಿಯೂ ನಾಪತ್ತೆಯಾಗಿಲ್ಲ, ನಿರೀಕ್ಷಣಾ ಜಾಮೀನಿಗಾಗಿ ಕಾಯುತ್ತಿದ್ದೆ. ಪ್ರಕರಣ ಕೋರ್ಟ್‌ನಲ್ಲಿರುವ ಕಾರಣ ಹೆಚ್ಚಿಗೆ ಮಾತನಾಡುವುದಿಲ್ಲ. ನಾಳೆಯೂ ತನಿಖಾಧಿಕಾರಿಗಳು ವಿಚಾರಣೆಗೆ ಬರಲು ಹೇಳಿದ್ದಾರೆ. ಬರುತ್ತೇನೆ' ಎಂದು ಶಿವಪ್ರಕಾಶ್ ಹೇಳಿದ್ದಾರೆ.