ಆರ್‌.ಕೇಶವಮೂರ್ತಿ

ಇದ್ದಕ್ಕಿದ್ದಂತೆ ನಟನೆ ಕಡೆ ಮುಖ ಮಾಡಿದ್ದೀರಲ್ಲ?

ಮೊದಲಿನಿಂದಲೂ ನನಗೆ ನಟನೆ ಮಾಡಬೇಕು ಎಂಬುದು ಆಸೆ. ನಟನೆ ನನ್ನ ಪ್ಯಾಷನ್‌. ಸಿನಿಮಾ ನಿರ್ದೇಶಿಸುವುದು ನನ್ನ ಕನಸು. ಮೊದಲಿಗೆ ಕನಸು ಕೈ ಹಿಡಿಯಿತು. ಈಗ ಪ್ಯಾಷನ್‌ಕಡೆ ಹೆಜ್ಜೆ ಹಾಕಿದ್ದೇನೆ.

ಹೊಂಬಾಳೆ ಫಿಲ್ಮ್ಸ್‌ ಜತೆ ಸಿನಿಮಾ ಮಾತುಕತೆ ಆಗಿಲ್ಲ: ರಕ್ಷಿತ್‌ ಶೆಟ್ಟಿ 

ಮುಂದೆ ನಿರ್ದೇಶನ ಮಾಡುವುದಿಲ್ಲವೇ?

ನಿರ್ದೇಶನ ಯಾವತ್ತಿಗೂ ಕೈ ಬಿಡಲ್ಲ. ನಿರ್ದೇಶಿಸುತ್ತಲೇ ನನಗೆ ಸೂಕ್ತ ಎನಿಸುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ.

ನಿಮ್ಮೊಳಗಿನ ನಟನಿಗೆ ಧೈರ್ಯ ಕೊಟ್ಟಿದ್ದು ಯಾರು?

ಮಂಸೋರೆ ನಿರ್ದೇಶನದ ‘ಆಕ್ಟ್ 1978’. ಈ ಚಿತ್ರದಲ್ಲಿ ನಾನು ಮಾಡಿದ ಅಟೆಂಡರ್‌ ಪಾತ್ರವೇ ನನ್ನೊಳಗಿನ ನಟನನ್ನು ಗುರುತಿಸಿತು. ನಟನೆಗೆ ಧೈರ್ಯ ಮತ್ತು ವಿಶ್ವಾಸ ತುಂಬಿತು.

ವಿಭಿನ್ನ ಕಥೆ ಹೊಂದಿರುವ 'ಚೂರಿಕಟ್ಟೆ' ಇಂದು ತೆರೆಗೆ; ಈ ಚಿತ್ರದ ವಿಶೇಷತೆಗಳೇನು ಗೊತ್ತಾ? 

ಯಾವೆಲ್ಲ ಚಿತ್ರಗಳಲ್ಲಿ ನಟಿಸುತ್ತಿದ್ದೀರಿ?

ಒಟ್ಟು ಐದು ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ನೀನಾಸಂ ಭಾಸ್ಕರ್‌ ನಿರ್ದೇಶನದ ಚಿತ್ರ. ಶ್ರೇಯಸ್‌ ನಿರ್ದೇಶಿಸುತ್ತಿರುವ ಚಿತ್ರ. ಗುರು ದೇಶಪಾಂಡೆ ನಿರ್ದೇಶನದ ‘ಪೆಂಟಗನ್‌’ ಹಾಗೂ ಪವನ್‌ಕುಮಾರ್‌ ತಂಡದ ಐದು ಜನ ನಿರ್ದೇಶಕರ ಚಿತ್ರಗಳ ಪೈಕಿ ಜಯತೀರ್ಥ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದಕ್ಕೆ ಬಹುಶಃ ‘ಆದ್ದರಿಂದ’ ಎನ್ನುವ ಹೆಸರಿಡಬಹುದು.