ಜನರಿಗೆ ಕನೆಕ್ಟ್‌ ಆಗುವುದಿಲ್ಲ ಎಂದು ತಂದೆ ಕೊಟ್ಟ ಹೆಸರನ್ನು ತೆಗೆದುಬಿಡಿ ಎಂದುಬಿಟ್ಟ ನಿರ್ದೇಶಕರು: ರಘು ಮುಖರ್ಜಿ

ಚಿತ್ರರಂಗದಲ್ಲಿ ಎದುರಾದ ಕಷ್ಟಗಳನ್ನು ನಗುತ್ತಲೇ ಸಣ್ಣ ಪುಟ್ಟ ಕಷ್ಟಗಳು ಎಂದ ರಘು. ಹೆಸರು ತೆಗೆಯಲು ಹೇಳಿದ ಡೈರೆಕ್ಟರ್ ಯಾರು?
 

Raghu Mukherjee opens up about the challenges in the film industry with rapid rashmi vcs

2003ರಲ್ಲಿ ಪ್ಯಾರಿಸ್ ಪ್ರಣಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಾಡಲ್ ರಘು ಮುಖರ್ಜಿ 2009ರಲ್ಲಿ ಸವಾರಿ ಚಿತ್ರದ ಮೂಲಕ ರೊಮ್ಯಾಂಟಿಕ್ ಹೀರೋ ಆಗಿ ಜನರಿಗೆ ಕನೆಕ್ಟ್‌ ಆಗಿಬಿಟ್ಟರು. ನೀ ಇಲ್ಲದೆ, ಪ್ರೇಮಾ ಚಂದ್ರಮ, ದಂಡುಪಾಳ್ಯ, ಆಕ್ರಮಣ, ಸೂಪರ್ ರಂಗ,ಹೆಡ್‌ ಬುಶ್, ಇನ್‌ಸ್ಪೆಕ್ಟರ್ ವಿಕ್ರಂ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ರಘು ಆರಂಭದಲ್ಲಿ ಎದುರಿಸಿದ ಸಂಕಷ್ಟಗಳನ್ನು ಹಂಚಿಕೊಂಡಿದ್ದಾರೆ. 

ಹೆಸರು ಬದಲಾಯಿಸಬೇಕು:

'ಸುಮಾರು ಸಲ ನನಗೆ ಅನಿಸಿದೆ ಚಿತ್ರರಂಗದಲ್ಲಿ ನನ್ನನ್ನು ಲೋಕಲ್ ರೀತಿ ಯಾರೂ ನೋಡುವುದಿಲ್ಲ ಈಗ ಜನರು ನನ್ನ ಜೊತೆ ಕನೆಕ್ಟ್‌ ಆಗುತ್ತಿದ್ದಾರೆ. ಇಂಡಸ್ಟ್ರಿಯಲ್ಲಿ ಎಲ್ಲರೂ ಒಟ್ಟಿಗೆ ಸೇರುವುದನ್ನು ನೋಡಿದರೆ ನನ್ನ ಗುಣ ತುಂಬಾ ರಿಸರ್ವ್. ಖ್ಯಾತ ಡೈರೆಕ್ಟ್‌ ಒಬ್ಬರು ನನ್ನ ಹೆಸರಿನ ಹಿಂದೆ ಇರುವ ಮುಖರ್ಜಿ ಹೆಸರನ್ನು ತೆಗೆದುಬಿಡಿ ಎಂದರು, ನಾನು ಅವರ ಹೆಸರನ್ನು ರಿವೀಲ್ ಮಾಡುವುದಿಲ್ಲ. ಮುಖರ್ಜಿ ಅನ್ನೋ ಹೆಸರಿದ್ದರೆ ಜನರು ಕನೆಕ್ಟ್ ಆಗುವುದಿಲ್ಲ ನಿಮ್ಮನ್ನು ಹೊರಗಿನವರ ರೀತಿ ನೋಡುತ್ತಾರೆ ಅಂದುಬಿಟ್ಟರು. ನನ್ನ ತಂದೆ ಕೊಟ್ಟಿರುವ ಹೆಸರನ್ನು ತೆಗೆಯುವುದಿಲ್ಲ ಎಂದು ಅವರಿಗೆ ಹೇಳಿದೆ. ಈ ರೀತಿ ಸಣ್ಣ ಪುಟ್ಟ ಘಟನೆಗಳು ತುಂಬಾ ನಡೆದಿದೆ ಆದರೂ ಜನರು ನನಗೆ ಪ್ರೀತಿ ಕೊಟ್ಟಿದ್ದಾರೆ' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ರಘು ಮುಖರ್ಜಿ ಮಾತನಾಡಿದ್ದಾರೆ.

15 ದಿನಕ್ಕೊಮ್ಮೆ ಉಪವಾಸ ಮಾಡಿದರೆ ಆಗುವ ಲಾಭಗಳನ್ನು ರಿವೀಲ್ ಮಾಡಿದ ಡಾ. ಗೌರಿ!

'ನಮಗೆ ಏನು ಸೇರಬೇಕು ಖಂಡಿತಾ ಸೇರುತ್ತದೆ ಬಹುಷ ಹೆಚ್ಚಿಗೆ ಸಮಯ ತೆಗೆದುಕೊಳ್ಳಬಹುದು ಅಥವ ಸ್ವಲ್ಪ ಕಷ್ಟ ಆಗಬಹುದು ಆದರೆ ಹಠ ಯಾವತ್ತೂ ಕಡಿಮೆ ಆಗಲ್ಲ. ನನ್ನಲ್ಲಿ ಹೆಚ್ಚಿನ ಸಾಮರ್ಥ್ಯವಿದೆ ಎಂದು ನಿರ್ದೇಶಕರು ಯೋಚನೆ ಮಾಡಲಿ ಎಂದು ಆಶಿಸುತ್ತೀನಿ. ನನ್ನನ್ನು ಸೂಪರ್ ಸ್ಟಾರ್‌ ಎಂದು ಗುರುತಿಸಬೇಕು ಅನ್ನೋ ಪಾತ್ರಗಳನ್ನು ಮಾಡಬೇಕು ಅನಿಸುತ್ತಿದೆ. ಏಕೆಂದರೆ ನಟನೆ ಬೇರೆ, ಸ್ಟಾರ್ ಡಮ್ ಬೇರೆ ಅನ್ನೋದನ್ನು ನಾನು ತಡವಾಗಿ ಅರ್ಥ ಮಾಡಿಕೊಂಡಿದ್ದೀನಿ' ಎಂದು ರಘು ಮುಖರ್ಜಿ ಹೇಳಿದ್ದಾರೆ. 

 

Latest Videos
Follow Us:
Download App:
  • android
  • ios