Asianet Suvarna News Asianet Suvarna News

ಪುನೀತ್ ರಾಜ್‌ಕುಮಾರ್ ಸಮಾಧಿ ಅಭಿವೃದ್ಧಿ; ಸಿಎಂ ಭೇಟಿ ಮಾಡಿದ ರಾಘಣ್ಣ, ಅಶ್ವಿನಿ

ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಅಪ್ಪು ಸಮಾಧಿ ಸ್ಥಳ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ ದೊಡ್ಡ ಮನೆ ಕುಟುಂಬಸ್ಥರು..
 

Raghavendra Rajkumar Ashwini meets CM Basavaraj Bommai to develop Puneeth rajkumar memorial vcs
Author
Bangalore, First Published Aug 18, 2022, 11:52 AM IST

ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ಪವರ್ ಸ್ಟಾರ್,ಯುವರತ್ನ ಮತ್ತು ಕನ್ನಡದ ಮಾಣಿಕ್ಯ ಪುನೀತ್ ರಾಜ್‌ಕುಮಾರ್ ಅಗಲಿ ಅಕ್ಟೋಬರ್ 29ಕ್ಕೆ ಒಂದು ವರ್ಷ ಆಗುತ್ತದೆ. ಈಗಲ್ಲೂ ಲಕ್ಷಾಂತರ ಜನರು ಸಮಾಧಿ ಸ್ಥಳಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸುತ್ತಾರೆ. ಹೊಸ ಸಿನಿಮಾ ತಂಡಗಳು ಪೋಸ್ಟರ್, ಟೀಸರ್ ಮತ್ತು ಲಾಂಚ್ ಕಾರ್ಯಕ್ರಮಗಳನ್ನು ಅಪ್ಪು ಮುಂದೆ ಮಾಡುತ್ತಾರೆ. ಹೀಗಾಗಿ ಸಮಾಧಿ ಸ್ಥಳ ಅಭಿವೃದ್ಧಿ ಮಾಡಬೇಕೆಂದು ದೊಡ್ಡ ಮನೆ ಕುಟುಂಬಸ್ಥರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಸಮಾಧಿ ಎಲ್ಲಿದೆ?

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್‌ಕುಮಾರ್, ಡಾ. ಪಾರ್ವತಮ್ಮ ರಾಜ್‌ಕುಮಾರ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಸಮಾಧಿ ಪಕ್ಕದಲ್ಲಿ ಪುನೀತ್ ರಾಜ್‌ಕುಮಾರ್ ಸಮಾಧಿ ಇದೆ. 

ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ಮತ್ತು ಗುರು ರಾಜ್‌ಕುಮಾರ್ ಕೆಲವು ದಿನಗಳ ಹಿಂದೆ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಹಾಕಿರುವ ಶಾಮಿಯಾನವನ್ನು ತೆರವುಗೊಳಿಸಿ ಅರ್ಥಪೂರ್ಣ ಸಮಾಧಿ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. 75ನೇ ಸ್ವಾತಂತ್ರ್ಯ ದಿನಾಚರಣೆ ದಿನದಂದು ಬರೋಬ್ಬರಿ 1.20 ಲಕ್ಷ ಜನರು ಪುನೀತ್ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ದಿನೇ ದಿನೇ ಜನ ಸಾಗರ ಹೆಚ್ಚಾಗುತ್ತಿರುವ ಕಾರಣ ಆದಷ್ಟು ಬೇಗ ಸ್ಮಾರಕ್ಕೆ ಅಭಿವೃದ್ಧಿ ಆಗಬೇಕಿದೆ. 

Raghavendra Rajkumar Ashwini meets CM Basavaraj Bommai to develop Puneeth rajkumar memorial vcs

ರಾಜ್‌ಕುಮಾರ್ ಕುಟುಂಬದ ಜೊತೆ PWD ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಆದಷ್ಟು ಬೇಗ ಯೋಜನಾ ವರದಿ ತಯಾರಿಸುವಂತೆ ಸಿಎಂ ಸೂಚನೆ ಕೊಟ್ಟಿದ್ದಾರೆ. ನವೆಂಬರ್ 1ನೇ ತಾರೀಕು ಪುನೀತ್ ರಾಜ್‌ಕುಮಾರ್ ಸ್ಮಾರಕದ ಗುದ್ದಲಿ ಪೂಜೆ ನಡೆಯುವ ಸಾಧ್ಯತೆಗಳಿದೆ.  ಮುಖ್ಯಮಂತ್ರಿಗಳಿಗೆ ಗುರು ರಾಜ್‌ಕುಮಾರ್ ತಯಾರಿಸಿರುವ ಸಮಾಧಿ ಸ್ಥಳದ ಅಭಿವೃದ್ಧಿ ಕುರಿತ ಪಿಪಿಟಿ ತೋರಿಸಲಾಗಿತ್ತು.

ರಾಜ್ ಸ್ಮಾರಕ ‌ಕುರಿತು ಕುಟುಂಬದ ಕನಸೆನು ಗೊತ್ತಾ?

ರಾಜ್‌ಕುಮಾರ್ ಸ್ಮಾರಕದ 2.5 ಎಕರೆ ಜಾಗದಲ್ಲಿ ಅಭಿವೃದ್ಧಿ ‌ಪಡಿಸಿ ಸುಸರ್ಜಿತ ಮ್ಯೂಸಿಯಂ ಮಾಡಲು ಪ್ಲ್ಯಾನ್ ಮಾಡಲಾಗಿದೆ.ಈ ಮ್ಯೂಸಿಯಂನಲ್ಲಿ ಡಾ. ರಾಜ್ ಕುಮಾರ್  ದಿನನಿತ್ಯ ಬಳಸಿದ ವಸ್ತುಗಳು, ಬಟ್ಟೆಗಳು ಮತ್ತು ಪುನೀತ್ ‌ರಾಜ್ ಕುಮಾರ್ ಅವರ ಫೇವರೆಟ್ ವಸ್ತುಗಳು, ರಾಜ್ ಕುಮಾರ್ ಪಡೆದ ಪ್ರಶಸ್ತಿಗಳು, ಪುನಿತ್ ಪಡೆದ ಪ್ರಶಸ್ತಿಗಳು ಎಲ್ಲಾ  ಮ್ಯೂಸಿಯಂನಲ್ಲಿ ಇಡಲಿದ್ದಾರೆ. ಅದಲ್ಲದೆ ಚಲನಚಿತ್ರಕ್ಕೆ ಸಂಬಂಧಿಸಿದ ಲೈಬ್ರರಿ ‌ಮಾಡಲು ಕುಟುಂಬದ ಮನವಿ ಮಾಡಿಕೊಂಡಿದ್ದಾರೆ.

ಸ್ವಾತಂತ್ರ್ಯೋತ್ಸವದಲ್ಲಿ ಅಪ್ಪು ನೆನಪು: ಪುನೀತ್‌ ಮುಖವಾಡ ಧರಿಸಿ ಶಾಲಾ ಮಕ್ಕಳ ನೃತ್ಯ

ಸಿನಿಮಾ ತಜ್ಞರು ಬರೆದಿರುವ ಕೆಲ ಪುಸ್ತಕಗಳನ್ನು ವಿದೇಶಗಳಲ್ಲಿ ಮಾತ್ರ ಸಿಗುತ್ತದೆ, ಇದೆಲ್ಲ ನಮ್ಮಲ್ಲೇ ಸಿಗುವಂತೆ ಮಾಡಲು ರಾಜ್ ಸ್ಮಾರಕದಲ್ಲಿ ಲೈಬ್ರರಿ ಮಾಡಿದರೆ ಒಳಿತು ಎಂದಿದ್ದಾರೆ. ರಾಜ್ ಕುಟುಂಬದ ಮನವಿಗೆ ಒಪ್ಪಿಗೆ ಸೂಚಿಸಿರುವ ಸಿಎಂ ಡಿಜಿಟಲ್ ಲೈಬ್ರರಿಯೂ ಒಳಗೊಂಡಂತೆ  ಲೈಬ್ರರಿ ‌ಮಾಡೋಣ ಎಂದಿದ್ದಾರೆ.

ಫಲಪುಷ್ಪದಲ್ಲಿ ಅರಳಿದ ಡಾ| ರಾಜ್‌, ಪುನೀತ್‌ ಜೀವನ:

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ನಟ ಸಾರ್ವಭೌಮ ಡಾ ರಾಜ್‌ಕುಮಾರ್‌ ಮತ್ತು ನಟ ಪುನೀತ್‌ರಾಜ್‌ ಕುಮಾರ್‌ ಅವರ ಜೀವನದ ಪುಟಗಳನ್ನು ಮತ್ತೊಮ್ಮೆ ಮೆಲಕು ಹಾಕುವ ಅನುಭವ ನೀಡಲಿದೆ. ಪುನೀತ್‌ ರಾಜ್‌ಕುಮಾರ್‌(Puneet Rajkumar) ಅವರು ಬಾಲ್ಯದಿಂದ ಸಿನಿಮಾಗಳಲ್ಲಿ ಗುರುತಿಸಿಕೊಂಡ ಪ್ರಮುಖ ಚಿತ್ರಗಳ ವಿವರ ಇರಲಿದ್ದು, ಈ ಇಬ್ಬರೂ ಮೇರು ನಟರು ಸಿನಿಮಾ ರಂಗದಲ್ಲಿ ಸಾಧನೆಗಳನ್ನು ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ಸಯೋಗದಲ್ಲಿ ನಡೆದಿದೆ.

ಡಾ. ರಾಜ್‌ಕುಮಾರ್‌ ಅವರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿದ್ದರು. ಜತೆಗೆ ಚಲನಚಿತ್ರವೊಂದರಲ್ಲಿ ರಾಘವೇಂದ್ರ ಸ್ವಾಮಿಗಳ ಪಾತ್ರವನ್ನು ನಿಭಾಯಿಸಿದ್ದರು. ಇದನ್ನು ಬಿಂಬಿಸವಂತಹ ಬೃಂದಾವನ ಮತ್ತು ಅದರ ಮುಂದೆ ಕುಳಿತಿರುವ ಸನ್ನಿವೇಶವನ್ನು ಸೃಷ್ಟಿಸಲಾಗಿದೆ. ಅಲ್ಲದೆ, ಬೇಡರ ಕಣ್ಣಪ್ಪನಾಗಿ ಅವತರಿಸಿರುವ ಡಾ. ರಾಜ್‌ಕುಮಾರ್‌ ಶಿವಲಿಂಗದ ಮೇಲೆ ಕಾಲನ್ನಿಡುವ ದೃಶ್ಯವು ಪುಷ್ಪಾಲಂಕೃತವಾಗಿದೆ. ಅಲ್ಲದೆ, ಗಾಜಿನ ಮನೆಯ ಸುತ್ತಲು ಡಾ.ರಾಜ್‌ ಕುಮಾರ್‌ ಮತ್ತು ಪುನೀತ್‌ ರಾಜ್‌ ಕುಮಾರ್‌ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಹಾಕಲಾಗಿದ್ದು.

Follow Us:
Download App:
  • android
  • ios