ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಪ್ರಶಸ್ತಿ ಘೋಷಣೆ ಆಗಿದೆ. ನಿರ್ಮಾಪಕ ಎನ್‌ ಕುಮಾರ್‌, ಹಿರಿಯ ಪತ್ರಕರ್ತ ಬಾಬು ಕೃಷ್ಣಮೂರ್ತಿ ಅವರು ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ, ಗಾಯಕಿ ಇಂದು ವಿಶ್ವನಾಥ್‌ ಅವರು ಡಾ.ರಾಜ್‌ಕುಮಾರ್‌ ಪ್ರಶಸ್ತಿ, ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರು ಭಾರತಿ ವಿಷ್ಣುವರ್ಧನ್‌ ನೀಡುವ ಆರ್‌.ಶೇಷಾದ್ರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶಿವಣ್ಣ, ರಕ್ಷಿತ್ ಶೆಟ್ಟಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ..! 

ರಾಘವೇಂದ್ರ ಚಿತ್ರವಾಣಿಯ ಸ್ಥಾಪಕ, ಹಿರಿಯ ಸಿನಿಮಾ ಪ್ರಚಾರಕರ್ತ ಡಿ.ವಿ. ಸುಧೀಂದ್ರ ಅವರ ಹುಟ್ಟುಹಬ್ಬ ದಿನವಾದ ಜ.25ರಂದು ಸಂಜೆ 5ಕ್ಕೆ ಮಲ್ಲೇಶ್ವರಂ ರೇಣುಕಾಂಬ ಸ್ಟುಡಿಯೋದಲ್ಲಿ ಸಂಸ್ಥೆಯ 44ನೇ ವಾರ್ಷಿಕೋತ್ಸವ ಮತ್ತು 20ನೇ ಪ್ರಶಸ್ತಿ ಸಮಾರಂಭ ಪ್ರದಾನ ನಡೆಯಲಿದ್ದು, ಅಂದು ವಿಜೇತರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಸುಧೀಂದ್ರ ವೆಂಕಟೇಶ್‌ ತಿಳಿಸಿದ್ದಾರೆ. ಪ್ರತೀ ವರ್ಷ 11 ಪ್ರಶಸ್ತಿ ನೀಡುತ್ತಿದ್ದ ಸಂಸ್ಥೆ ಈ ವರ್ಷ ಕೊರೋನಾ ಕಾರಣ 4 ಪ್ರಶಸ್ತಿ ಮಾತ್ರ ನೀಡುತ್ತಿದೆ.

ಟಿಬೆಟ್ ಧರ್ಮಗುರು ದಲೈ ಲಾಮಾಗೆ ಭಾರತ ರತ್ನ ನೀಡಲು ಶೇ.62 ಭಾರತೀಯರ ಬೆಂಬಲ!