Asianet Suvarna News Asianet Suvarna News

'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಟ್ರೇಲರ್ ರಿಲೀಸ್ ಮಾಡಿದ Vasishta Simha

ಎಂಎನ್ ಶ್ರೀಕಾಂತ್ ನಿರ್ದೇಶನದ 'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಚಿತ್ರದ ಟ್ರೇಲರ್ ಅನ್ನು ವಸಿಷ್ಠ ಸಿಂಹ ಮತ್ತು ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಬಿಡುಗಡೆ ಮಾಡಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಪ್ರೀತಿ, ಸಸ್ಪೆನ್ಸ್, ಆಕ್ಷನ್ ಒಳಗೊಂಡ ಈ ಟ್ರೇಲರ್‌ನ್ನು ನೋಡಬಹುದು.

Raghav Starrer Radha Searching Ramana Missing Triler Launched by Vasishta Simha gvd
Author
Bengaluru, First Published Feb 21, 2022, 1:00 PM IST

ಎಂಎನ್ ಶ್ರೀಕಾಂತ್ ನಿರ್ದೇಶನದ 'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' (Radha Searching Ramana Missing) ಚಿತ್ರದ ಟ್ರೇಲರ್ (Trailer) ಅನ್ನು ವಸಿಷ್ಠ ಸಿಂಹ (Vasishta Simha) ಮತ್ತು ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ (Bhaskar Rao) ಬಿಡುಗಡೆ ಮಾಡಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಪ್ರೀತಿ, ಸಸ್ಪೆನ್ಸ್, ಆಕ್ಷನ್ ಒಳಗೊಂಡ ಈ ಟ್ರೇಲರ್‌ನ್ನು ನೋಡಬಹುದು. ಕಾರ್ಯಕ್ರಮಕ್ಕೆ ಬಂದಿದ್ದ ಭಾಸ್ಕರ್ ರಾವ್, ‘ಸಿನಿಮಾ ಪವರ್‌ಫುಲ್ ಮಾಧ್ಯಮ. ಪ್ರಭಾವ ಬೀರುವ ಸಾಧ್ಯತೆ ಹೆಚ್ಚು. ಹಾಗಾಗಿ ಒಳ್ಳೆಯ ಸಂದೇಶ ನೀಡುವ ಸಿನಿಮಾಗಳನ್ನು ಮಾಡಬೇಕು. ರೌಡಿಸಂ ವೈಭವೀಕರಣ ಮಾಡಬಾರದು’ ಎಂದು ಹೇಳಿದರು.

ಸ್ಟಿಲ್ ಫೋಟೋಗ್ರಾಫರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಘವ (Raghav) ಈ ಚಿತ್ರದ ಮೂಲಕ ನಾಯಕ ನಟರಾಗಿದ್ದು, ಕಾಲೇಜ್ ಹುಡುಗನ ಪಾತ್ರದಲ್ಲಿ ರಾಘವ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಆಕ್ಟಿಂಗ್, ಡ್ಯಾನ್ಸ್ ಕಲಿತಿದ್ದಾರೆ. ತಿಂಗಳುಗಳ ಕಾಲ ಜಿಮ್ ನಲ್ಲಿ ವರ್ಕೌಟ್ ಮಾಡಿದ್ದಾರೆ. ಚಿತ್ರದಲ್ಲಿ 'ಪುಟ್ಟಕ್ಕನ ಮಕ್ಕಳು' (Puttakkana Makkalu) ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ (Sanjana Burli) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರದ್ದು ಆರ್ಕಿಟೆಕ್ಟ್ ವಿದ್ಯಾರ್ಥಿನಿಯಾಗಿ ಪಾತ್ರವಾಗಿದ್ದು, ಸಂಜನಾ ಒಂದಷ್ಟು ವಿಭಿನ್ನ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. 

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಯಮುನಾ ಶ್ರೀನಿಧಿ, ಗೋಪಿನಾಥ್‌ ಭಟ್‌,  ಚಿರಾಗ್, ಗುರು ಹೆಗ್ಡೆ ಸೇರಿದಂತೆ ಮುಂತಾದವರು ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಚಿತ್ರಕ್ಕೆ ವಿಶ್ವಜಿತ್ ರಾವ್ ಕ್ಯಾಮೆರಾ ಕೈ ಚಳಕವಿದ್ದು, ಉದ್ಯಮಿ ಯಶಸ್ವಿ ಶಂಕರ್ ಮತ್ತು ಅವರ ಪತ್ನಿ ಸವಿತಾ ಯಶಸ್ವಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನವನೀತ ಚಾರಿ ಸಂಗೀತ ಸಂಯೋಜನೆ ಹಾಗೂ ವಿಜೇತ್ ಚಂದ್ರ ಸಂಕಲನ ಹೊಣೆ ಹೊತ್ತಿದ್ದಾರೆ. ಸದ್ಯ ಚಿತ್ರದ ನಾಯಕಿ ಸಂಜನಾ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಜೊತೆಗೆ ಸಿನಿಮಾ ಕ್ಷೇತ್ರದಲ್ಲಿಯೂ ಬ್ಯುಸಿಯಾಗಿದ್ದು, ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 

Kichcha Sudeep: ಅಭಿಮಾನಿಗಳಿಗೆ ಡಬಲ್ ಗುಡ್​ನ್ಯೂಸ್ ನೀಡಿದ 'ವಿಕ್ರಾಂತ್ ರೋಣ'

ಈ ಹಿಂದೆ ಅವರು 'ವೀಕೆಂಡ್‌' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ತಮಿಳಿನಲ್ಲಿ ಈಶ್ವರ್‌ ಕೊಟ್ಟಾವೆ ನಿರ್ದೇಶನದ ಮಹಿಳಾ ಪ್ರಧಾನಯುತವಾದ ಹೊಸ ಚಿತ್ರದಲ್ಲಿ ಸಂಜನಾ ನಟಿಸಿದ್ದು, ಬ್ಲ್ಯಾಕ್‌ ಮೆಜಿಷಿಯನ್‌ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಪಾಸಿಟಿವ್‌ ಮತ್ತು ನೆಗೆಟಿವ್‌ ಶೇಡ್‌ ಇವೆಯಂತೆ. ಅರವಿಂದ್‌ ಕೌಶಿಕ್‌ ನಿರ್ದೇಶನದ ಸ್ಟೀಲ್‌ ಪಾತ್ರೆ ಸಾಮಾನು ಚಿತ್ರದಲ್ಲೂ, ನಿಸಾರ್‌ ಅಹಮ್ಮದ್‌ ನಿರ್ದೇಶನದ ಸ್ನೇಹರ್ಷಿ ಎಂಬ ಚಿತ್ರದಲ್ಲಿ ಇನ್‌ಸ್ಪೆಕ್ಟರ್‌ ಪಾತ್ರದಲ್ಲಿ ಸಂಜನಾ ಬುರ್ಲಿ ನಟಿಸಿದ್ದಾರೆ. ಇನ್ನು ಸಂಜನಾ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು, ಏಕಕಾಲಕ್ಕೆ ಶಿಕ್ಷಣ, ಸಿನಿಮಾ ಕಡೆಯೂ ಗಮನ ನೀಡುತ್ತಿದ್ದಾರೆ.



ನವಿಲುಗರಿ ಆಡಿಯೋ ಬಿಡುಗಡೆ: ವೃತ್ತಿಯಲ್ಲಿ ಲಾಯರ್‌ ಆಗಿರುವ ಆನಂದ್‌ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುವ ಜತೆಗೆ ನಾಯಕನಾಗಿಯೂ ನಟಿಸಿರುವ ಚಿತ್ರ ನವಿಲುಗರಿ (Navilugari). ಇವರ ಪತ್ನಿ ಸಾರಿಕ ಚಿತ್ರವನ್ನು ನಿರ್ಮಿಸಿದ್ದಾರೆ. ನೆ ಲ ನರೇಂದ್ರ ಬಾಬು ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದು ಹಿರಿಯ ಸಾಹಿತಿ ಪ್ರೊ.ದೊಡ್ಡರಂಗೇಗೌಡ. ಚಿತ್ರದ ಹಾಡುಗಳು ಚೆನ್ನಾಗಿ ಮೂಡಿಬಂದಿವೆ. ಜನರು ಇಷ್ಟಪಡುವ ಸಿನಿಮಾ ಮಾಡಿದಾಗ ಮಾತ್ರ ನಿರ್ಮಾಪಕರಿಗೆ ಹಣ ಬರುತ್ತದೆ. 

ರಾಯರ ಪವಾಡದಿಂದ ಹಳ್ಳಿಹುಡುಗನಾಗಿದ್ದ ನಾನಿಂದು ನವರಸನಾಯಕನಾದೆ: Jaggesh

ಅಂಥದ್ದೇ ಕತೆ ಇದರಲ್ಲಿ ಇದೆಯೆಂದು ನಂಬಿದ್ದೇನೆ. ಚಿತ್ರರಂಗಕ್ಕೆ ಹೊಸಬರು ಬರಬೇಕು. ಆಗಲೇ ಹೊಸ ಹೊಸ ಅವಿಷ್ಕಾರಗಳು ಬರುತ್ತವೆ ಎಂದು ಪ್ರೊ. ದೊಡ್ಡರಂಗೇಗೌಡ ಅಭಿಪ್ರಾಯಪಟ್ಟರು. ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವ ಪ್ಲಾನ್‌ ನಿರ್ಮಾಪಕರದ್ದು. ನಿರ್ಮಾಪಕರ ಈ ನಡೆಯನ್ನು ನೆ ಲ ನರೇಂದ್ರಬಾಬು ಮೆಚ್ಚಿಕೊಂಡರು. ಚಿತ್ರಕ್ಕೆ ಪೀಟರ್‌ .ಎಂ.ಜೋಸೆಫ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ಕೋಟೆ ಪ್ರಭಾಕರ್‌ ಕೂಡ ಮುಖ್ಯ ಪಾತ್ರ ಮಾಡಿದ್ದಾರೆ.

Follow Us:
Download App:
  • android
  • ios