ಯಶ್ ಮತ್ತು ರಾಧಿಕಾ ಪಂಡಿತ್ ಫೋಟೋ ಪಕ್ಕ ಕುಳಿತು ಯಥರ್ವ್‌ಗೆ ಮಾತು ಕಲಿಸ್ತಿದ್ದಾಳೆ ಅಕ್ಕ ಐರಾ
ಸ್ಟೂಡೆಂಟ್ ಈಗ ಟೀಚರ್, ನನ್ನ ಕೆಲಸ ಆಯ್ತು ಎಂದು ಕ್ಯಾಪ್ಶನ್ ಕೊಟ್ಟು ಮಕ್ಕಳ ಮುದ್ದಾದ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ ನಟಿ ರಾಧಿಕಾ ಪಂಡಿತ್. ಯಶ್ ಮತ್ತು ರಾಧಿಕಾ ಪಂಡಿತ್ ಫೋಟೋ ಪಕ್ಕ ಕುಳಿತು ಯಥರ್ವ್‌ಗೆ ಮಾತು ಕಲಿಸ್ತಿದ್ದಾಳೆ ಅಕ್ಕ ಐರಾ.
ಅಥರ್ವ್ ತಂದೆ ಯಶ್ ಮತ್ತು ಅಮ್ಮ ರಾಧಿಕಾ ಪಂಡಿತ್‌ನ ಗುರುತಿಸೋಕೆ ಪ್ರಯತ್ನಿಸ್ತಿದ್ರೆ ಅಕ್ಕ ಐರಾ ತಮ್ಮನನ್ನು ತಿದ್ದಿದ್ದಾಳೆ. ನಾನಾ, ಬಾಬಾ ಅನ್ನೊ ಪದಗಳನ್ನು ಮುದ್ದಾಗಿ ಹೇಳಿರೋ ಅಥರ್ವ್‌ಗೆ ಫೋಟೋದಲ್ಲಿ ರಾಧಿಕಾನ ತೋರಿಸಿ ಮಮ್ಮ ಎಂದು ಹೇಳ್ಕೊಟ್ಟಿದ್ದಾಳೆ ಐರಾ.
ಯಶ್ ಮಗನ ಹೆಸರು 'YATHARV'ಯಶ್;ಹೆಸರಿನೊಳಗೆ ಹೆಸರಿದೆ!
ಗೋಡೆಗೆ ಒರಗಿಸಿದ ಇಡಲಾಗಿರೋ ಫೋಟೋ ಪಕ್ಕ ಇಬ್ಬರು ಮಕ್ಕಳೂ ಕುಳಿತು ಫೋಟೋ ನೋಡ್ತಿರೋದು ವಿಡಿಯೋದಲ್ಲಿ ದಾಖಲಾಗಿದೆ. ಐರಾ ಕೈಯಲ್ಲಿ ಪುಟ್ಟದೊಂದು ಡಬ್ಬಿ ಹಿಡ್ಕೊಂಡು ಬಂದಾಗಾ ಅಥರ್ವ್ ದೃಷ್ಟಿ ಫೋಟೋದಿಂದ ಆಟದತ್ತ ಸರಿದಿದೆ.
ಫೊಟೋ ನೋಡ್ತಿದ್ದ ಅಥರ್ವ್ ತಟ್ಟಂತ ಐರಾ ಕೈಯಲ್ಲಿರೋ ಡಬ್ಬ ಎಳೆದಿದ್ದಾನೆ. ಇತ್ತ ಐರಾ ತನಗೂ ಬೇಕೆಂದು ತನ್ನತ್ತ ಎಳೆದಿದ್ದಾಳೆ. ಮಕ್ಕಳು ಪುಟ್ಟ ಕರಡಿಗೆಗಾಗಿ ಎಳೆದಾಡೋದು ವಿಡಿಯೋದಲ್ಲಿ ದಾಖಲಾಗಿದೆ.
