Asianet Suvarna News Asianet Suvarna News

ಪ್ರಭಾಸ್ ಹುಟ್ಟುಹಬ್ಬಕ್ಕೆ ರಾಧೆ ಶ್ಯಾಮ್ ಟೀಸರ್ ರಿಲೀಸ್

ವಿಕ್ರಮಾದಿತ್ಯ ಯಾರು? 23 ರಂದು ಅವರನ್ನು ಭೇಟಿ ಮಾಡಿ ಎಂದು ಚಿತ್ರದ ಟೀಸರ್ ಬಿಡುಗಡೆ ಬಗ್ಗೆ ಪ್ರಭಾಸ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Radhe Shyam Teaser Release For Prabhas Birthday
Author
Bangalore, First Published Oct 20, 2021, 2:27 PM IST
  • Facebook
  • Twitter
  • Whatsapp

ಟಾಲಿವುಡ್‌ (Tollywood) ಹ್ಯಾಂಡ್ಸಮ್ ಹೀರೋ, ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ಅಭಿನಯದ ಬಹು ನಿರೀಕ್ಷಿತ 'ರಾಧೆ ಶ್ಯಾಮ್' (Radhe Shyam) ಚಿತ್ರದ ಬಗ್ಗೆ ಗುಡ್‌ ನ್ಯೂಸ್‌ವೊಂದು ಸಿಕ್ಕಿದೆ. ಹೌದು! 'ರಾಧೆ ಶ್ಯಾಮ್' ಚಿತ್ರದ ಮೋಷನ್ ಪೋಸ್ಟರ್ ಹಾಗೂ ಟೀಸರ್‌ ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹವಾ ಸೃಷ್ಟಿಸಿದೆ. ಇದೀಗ ನಟ ಪ್ರಭಾಸ್ ಚಿತ್ರದ ಟೀಸರ್ (Teaser) ರಿಲೀಸ್ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ನಟ ಪ್ರಭಾಸ್ 'ಸಾಹೋ' (Saaho) ಚಿತ್ರದ ನಂತರ 'ರಾಧೆ ಶ್ಯಾಮ್' ಚಿತ್ರದಲ್ಲಿ ನಟಿಸುತ್ತಿದ್ದು, ವಿಕ್ರಮಾದಿತ್ಯ ಯಾರು? 23 ರಂದು ಅವರನ್ನು ಭೇಟಿ ಮಾಡಿ. ವಿವಿಧ ಭಾಷೆಗಳಲ್ಲಿ ಇಂಗ್ಲಿಷ್‌ ಉಪಶೀರ್ಷಿಕೆಗಳೊಂದಿಗೆ  'ರಾಧೆ ಶ್ಯಾಮ್' ಟೀಸರ್ ನೋಡಿ ಆನಂದಿಸಿ ಎಂದು ತಮ್ಮ ಪಾತ್ರದ ಆರು ಭಾಷೆಗಳಲ್ಲಿನ ಪೋಸ್ಟರ್‌ಗಳೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Prabhas (@actorprabhas)


ರೊಮ್ಯಾಂಟಿಕ್​ ಕಥಾ ಹೊಂದಿರುವ ಈ ಚಿತ್ರದಲ್ಲಿ ಪ್ರಭಾಸ್, ವಿಕ್ರಮಾದಿತ್ಯ ಎಂಬ ಲವರ್​ ಬಾಯ್ (Lover Boy)​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಪೂಜಾ ಹೆಗ್ಡೆ ಪ್ರೇರಣಾ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇತ್ತೀಚೆಗಷ್ಟೇ ಪ್ರಭಾಸ್, ಪೂಜಾ ಹೆಗ್ಡೆ ಹುಟ್ಟುಹಬ್ಬದ ಪ್ರಯುಕ್ತ ಅವರ ಫೋಟೋವಿರುವ  ಪೋಸ್ಟರ್‌ನ್ನು (Poster) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು 'ಹುಟ್ಟು ಹಬ್ಬದ ಶುಭಾಶಯಗಳು ಪೂಜಾ' ಎಂದು ವಿಶ್ ಮಾಡಿದ್ದರು. ಈ ಪೋಸ್ಟರ್​​ನಲ್ಲಿ ಬಿಳಿ ಬಣ್ಣದ ಡ್ರೆಸ್​ನಲ್ಲಿ ಪೂಜಾ ಮಿಂಚಿದ್ದರು. ಒಟ್ಟಿನಲ್ಲಿ ಪ್ರಭಾಸ್ ತಮ್ಮ ಹುಟ್ಟುಹಬ್ಬದ ಪ್ರಯುಕ್ತ 'ರಾಧೆ ಶ್ಯಾಮ್' ಟೀಸರ್ ನೀಡುವ ಮೂಲಕ ಅವರ ಅಭಿಮಾನಿಗಳಿಗೆ ವಿಶೇಷವಾದ ಉಡುಗೊರೆ ನೀಡುತ್ತಿದ್ದಾರೆ.

 

ರಾಧಾ ಕೃಷ್ಣ ಕುಮಾರ್ (Radha Krishna Kumar) ನಿರ್ದೇಶನವಿರುವ ಈ ಚಿತ್ರಕ್ಕೆ ಭೂಷಣ್ ಕುಮಾರ್, ವಂಶಿ ಮತ್ತು ಪ್ರಮೋದ್ ನಿರ್ಮಾಣ ಮಾಡಿದ್ದಾರೆ. ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜನೆ, ಮನೋಜ್ ಪರಮಹಂಸ ಛಾಯಾಗ್ರಹಣ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಚಿತ್ರಕ್ಕಿದೆ.  ಸಚಿನ್ ಖೇಡೇಕರ್, ಭಾಗ್ಯಶ್ರೀ, ಕುನಾಲ್ ರಾಯ್ ಕಪೂರ್, ಸತ್ಯನ್, ಪ್ರಿಯದರ್ಶಿ, ಮುರಳಿ ಶರ್ಮಾ, ಸಶಾ ಚೆಟ್ರಿ, ರಿದ್ಧಿ ಕುಮಾರ್ ಸೇರಿದಂತೆ ಇತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ಮತ್ತು ಚಿತ್ರದ ಚಿತ್ರೀಕರಣ ಇದುವರೆಗೆ ಹೈದರಾಬಾದ್, ಟುರಿನ್ (ಇಟಲಿ) ಮತ್ತು ಜಾರ್ಜಿಯಾದಲ್ಲಿ ನಡೆದಿದೆ. 'ರಾಧೆ ಶ್ಯಾಮ್' ಚಿತ್ರವು 2022ರ ಜನವರಿ 14ರ ಸಂಕ್ರಾಂತಿ ಹಬ್ಬದಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ. 

ಪ್ರಭಾಸ್ 25ನೇ ಸಿನಿಮಾ ಶೀಘ್ರದಲ್ಲೇ ಎನೌನ್ಸ್: ಫ್ಯಾನ್ಸ್ ಖುಷ್

ಇನ್ನು ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಸಲಾರ್' (Salaar) ಚಿತ್ರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳುತ್ತಿದ್ದಾರೆ.  ಶ್ರುತಿ ಹಾಸನ್ (Shruti Haasan) ಪ್ರಭಾಸ್‌ಗೆ ಜೋಡಿಯಾಗಿದ್ದು, ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ವಿಲನ್‌ ಆಗಿ ಮಿಂಚುತ್ತಿರುವ ಜಗಪತಿ ಬಾಬು (Jagapati Babu) ಈ ಚಿತ್ರದಲ್ಲಿ ಖಡಕ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಮತ್ತು ಚಿತ್ರದಲ್ಲಿರುವ ಸ್ಪೆಷಲ್ ಹಾಡಿಗೆ ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ (Katrina Kaif) ಹೆಜ್ಜೆ ಹಾಕುತ್ತಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ.

"

Follow Us:
Download App:
  • android
  • ios