ಸಂಭಾವನೆ ಕಿರಿಕ್; ನಾಯಕಿಯರಿಗೆ ಯಾಕೆ ಮೋಸ ಆಗುತ್ತಿದೆ ಎಂದು ವಿವರಿಸಿದ ರಚಿತಾ ರಾಮ್
ಮಾರ್ಕೆಟ್ ಇದ್ರೆ ಸಂಭಾವನೆ ಸಿಗುತ್ತೆ, ನಾಯಕರಿಗೆ ಕೊಡುವ ಅರ್ಧದಷ್ಟು ನಾಯಕಿಯರಿಗೆ ಯಾಕೆ ಸಿಗುವುದಿಲ್ಲ ಎಂದು ಮಾತನಾಡಿದ ರಚಿತಾ ರಾಮ್.

ಸಾಮಾನ್ಯವಾಗಿ ಚಿತ್ರರಂಗದಲ್ಲಿ ಹೆಚ್ಚು ಚರ್ಚೆಯಾಗುವುದು ಸಂಭಾವನೆ ವಿಚಾರ. ಸಿನಿಮಾ ಹಿಟ್ ಆಯ್ತು ಅಂದ್ರೆ ಹೆಚ್ಚಾಯ್ತು, ಸಿನಿಮಾ ಫ್ಲಾಪ್ ಆಯ್ತು ಅಂದ್ರೆ ಮನೆಗೋದ್ರು ಎಂದು. ಸುಮಾರು 10 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ರಚಿತಾ ರಾಮ್ ಮೊದಲ ಸಲ ಸಂಭಾವನೆ ಬಗ್ಗೆ ಚರ್ಚೆ ಮಾಡಿದ್ದಾರೆ. ನಾಯಕಿಯರಿಗೆ ಮಾತ್ರ ಈ ಸಮಸ್ಯೆ ಇರುವುದು ಯಾಕೆಂದು ಪ್ರಶ್ನೆ ಮಾಡಿದ್ದಾರೆ.
'ಸಿನಿಮಾದಲ್ಲಿ ಮಾರ್ಕೆಟ್ ಅಂತ ಬರುತ್ತೆ. ಹೀರೋ ಆಗಿರಲಿ ಅಥವಾ ಹೀರೋಯಿನ್ ಆಗಿರಲಿ ಬ್ಯುಸಿನೆಸ್ ಹೇಗೆ ವರ್ಕ್ ಆಗುತ್ತೆ ಎನ್ನುವುದರ ಮೇಲೆ ಸಂಭಾವನೆ ನಿರ್ಧಾರವಾಗುತ್ತದೆ. ಪ್ರತಿಯೊಬ್ಬ ನಾಯಕಿ ಪ್ರತಿಯೊಂದು ಭಾಷೆಯಲ್ಲೂ ಹೇಳಿಕೊಳ್ಳುವ ಒಂದು ಸಮಸ್ಯೆ ಒಂದು ಪ್ರಶ್ನೆ ಹೀರೋಗಳಿಗೆ ಇಷ್ಟ ಅಂತ ಸಂಭಾವನೆ ಕೊಡುತ್ತೀರ ಹೀರೋಯಿನ್‌ಗಳಿಗೆ ಯಾಕೆ ಅದರ ಅರ್ಧದಷ್ಟು ಕೊಡುವುದಿಲ್ಲ? ಅವರ ಅರ್ಧದಷ್ಟು ಸಂಭಾವನೆ ಪಡೆಯುವ ಯೋಗ್ಯತೆ ನಮಗೆ ಇಲ್ವಾ? ಈ ಸಮಸ್ಯೆಗೆ ನಾನು ಸಿಂಪಲ್ ಆಗಿ ಉತ್ತರ ಕೊಡುವೆ' ಎಂದು ಸಂಭಾವನೆ ವಿಚಾರದಲ್ಲಿ ನಾಯಕಿಯರಿಗೆ ಆಗುವ ಗೊಂದಲದ ಬಗ್ಗೆ ರಚಿತಾ ರಾಮ್ ಸ್ಪಷ್ಟನೆ ಕೊಟ್ಟಿದ್ದಾರೆ.
ಪಾಸಿಟಿವ್ ಅಥವಾ ನೆಗೆಟಿವ್ ಒಟ್ಟಾರೆ ಸುದ್ದಿಯಲ್ಲಿರುವೆ: ಟ್ರೋಲ್ ಮತ್ತು ಮದುವೆ ಬಗ್ಗೆ ರಚಿತಾ ರಾಮ್ ಉತ್ತರ
'ನಮ್ಮ ಭಾಷೆಯಲ್ಲಿ ಮಾಲಾಶ್ರೀ ಮೇಡಂ ಅವರಿಗೆ ನಾಯಕರಷ್ಟೇ ಸಂಭಾವನೆ ಕೊಡುತ್ತಿದ್ದರು. ರಿಯಾಲಿಟಿ ಶೋವೊಂದರಲ್ಲಿ ನಾಯಕಿ ಲಕ್ಷ್ಮಿ ಅಮ್ಮ ಅವರ ಜೊತೆ ಮಾತನಾಡುವಾಗ ತಿಳಿಯಿತ್ತು ಅವರಿಗೆ ಬಾಂಬ್ ಆಗಿ ಸಂಭಾವನೆ ಪಡೆಯುತ್ತಿದ್ದರು. ಅತಿ ಹೆಚ್ಚು ಸಂಭಾವನೆ ಪಡೆದ ನಟಿಯಲ್ಲಿ ಪಟ್ಟಿಯಲ್ಲಿ ಲಕ್ಷ್ಮಿ ಅಮ್ಮ ಇದ್ದರು. ಆಗ ಅವರು ಒಂದು ಮಾತು ಹೇಳಿದ್ದರು ನಿನ್ನ ಕೆಲಸ ನೀನು ಮಾಡು ನಿನ್ನ ಮಾರ್ಕೆಟ್ ಹೇಗಿರುತ್ತದೆ ನಿರ್ಮಾಪಕರು ಹಾಗೆ ನಿನಗೆ ಸಂಭಾವನೆ ಕೊಡುತ್ತಾರೆ' ಎಂದು ರಚಿತಾ ರಾಮ್ ಮಾತನಾಡಿದ್ದಾರೆ.
'ನಾನು ಮಹಿಳಾ ಪ್ರಧಾನ ಸಿನಿಮಾವನ್ನು ಆಯ್ಕೆ ಮಾಡಿಕೊಂಡು ಅಭಿನಯಿಸಿದ್ದಾಗ ಸಿನಿಮಾ ಚೆನ್ನಾಗಿ ಓಪನಿಂಗ್ ಪಡೆದುಕೊಂಡು ತುಂಬಾ ಚೆನ್ನಾಗಿ ಹಿಟ್ ಕಲೆಕ್ಷನ್ ಮಾಡಿ ಬಂಡವಾಳ ಹಾಕಿದವರಿಗೆ 5 ಪಟ್ಟು ಹೆಚ್ಚು ಗಳಿಸಿದ್ದರೆ ಮುಂದಿನ ಚಿತ್ರಕ್ಕೆ ಖಂಡಿತಾ ಸಂಭಾವನೆ ಹೆಚ್ಚಿಸಿಕೊಳ್ಳುವೆ. ನನ್ನ ಸಿನಿಮಾ ಹಿಟ್ ಆದ್ಮೇಲೆ ಪೇಪರ್‌ನಲ್ಲಿ ಸಾಕ್ಷಿ ಬಂದ ಮೇಲೆ ನಾನು ಸಂಭಾವನೆ ಡಿಮ್ಯಾಂಡ್ ಮಾಡುವುದು. ಏನೂ ಮಾಡದೆ ನಮಗೆ ಕೊಡುತ್ತಿಲ್ಲ ಪೇಮೆಂಟ್ ಕೊಡುತ್ತಿಲ್ಲ ಹಾಗೆ ಹೀಗೆ ಎಂದು ಹೇಳಬಾರದು. ಅನುಷ್ಕಾ ಶೆಟ್ಟಿ, ನಯನತಾರಾ, ಮಂಜು ವಾರಿಯರ್ ಮತ್ತು ನಮ್ಮ ನಟಿ ರಮ್ಯಾ ಅವರಿಗೂ ಕೂಡ ಹೆಚ್ಚಿಗೆ ಸಂಭಾವನೆ ಕೊಟ್ಟಿದ್ದಾರೆ. ವಿಶಿಷ್ಟ ರೀತಿಯಲ್ಲಿ ನಮ್ಮ ಪ್ರತಿಭೆಯನ್ನು ಜನರಿಗೆ ತೋರಿಸಿದಾಗ ಕೊಡುತ್ತಾರೆ. ಸೂಪರ್ ಸ್ಟಾರ್‌ಗಳ ಜೊತೆ ಸಿನಿಮಾ ಮಾಡುವುದು ಗೋಲ್ಡ್ ಮೆಡಲ್ ಜೊತೆ ಕೆಲಸ ಮಾಡಿದ ಹಾಗೆ ನಮಗಿರುವ ಮೆಡಲ್ ಅದು ಒಂಟಿಯಾಗಿ ಪ್ರತಿಭೆ ತೋರಿಸಿದಾಗ ನಮಗೆ ಒಳ್ಳೆಯ ಅವಕಾಶ ಸಿಗುತ್ತದೆ' ಎಂದು ಹೇಳಿದ್ದಾರೆ.
ದೇವಸ್ಥಾನ ಅಥವಾ ಮನೆಯಲ್ಲಿ ಮದುವೆಯಾಗಲು ಒಪ್ಪಿದರೆ ಮಾತ್ರ ಹುಡುಗ ಓಕೆ: ರಚಿತಾ ರಾಮ್
'ನನ್ನ 10 ವರ್ಷಗಳ ಸಿನಿ ಜರ್ನಿಯಲ್ಲಿ ನಾನು ಆಯ್ಕೆ ಮಾಡಿಕೊಂಡ ಸಿನಿಮಾಗಳಲ್ಲಿ ತುಂಬಾ ಕಷ್ಟ ಪಟ್ಟ ಪಾತ್ರ ಅಂದ್ರೆ ಆಯುಷ್ಮಾನ್ ಭವ ಚಿತ್ರದ್ದು. ಪಿ ವಾಸು ಅವರು ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದ್ದು ದೊಡ್ಡ ಚಾಲೆಂಜ್ ಆಗಿತ್ತು. ಎಲ್ಲಾ ಲೆಜೆಂಟ್‌ಗಳಿಗೆ ನಿರ್ದೇಶನ ಮಾಡಿರುವ ವಾಸು ಸರ್ ಜೊತೆ ಕೆಲಸ ಮಾಡಿ ಅವರಿಂದ ಸೈ ಹೇಳಿಸಿಕೊಳ್ಳುವುದು ಸುಲಭವಲ್ಲ. ಆ ಸಿನಿಮಾದಲ್ಲಿ ಇದ್ದವರೆಲ್ಲಾ ಲೆಜೆಂಡ್‌ಗಳು. ಸುಹಾಸಿನಿ ಮೇಡಂ ಜೊತೆ ಮಾಡಿದ ಸೀನ್ ಚಾಲೆಂಜ್‌ಗೆ ದೊಡ್ಡ ಜಾಲೆಂಜ್ ಆಗಿತ್ತು. ಎಷ್ಟು ಟೇಕ್ ತೆಗೆದುಕೊಳ್ಳುತ್ತೀವಿ ಅನ್ನೋದು ಮುಖ್ಯವಲ್ಲ ಆದರೆ ಎಷ್ಟು ಪರ್ಫೆಕ್ಟ್ ಆಗಿ ಬರುತ್ತದೆ ಅನ್ನೋದು ಮುಖ್ಯ' ಎಂದಿದ್ದಾರೆ ರಚ್ಚು.