ಈ ಪ್ರೀತಿ ಒಂಥರಾ…ಹಾಡು ಹಾಡಿದ ಡಿಂಪಲ್ ಕ್ವೀನ್… ಮಧುರ ಕಂಠಕ್ಕೆ ಫ್ಯಾನ್ಸ್ ಫಿದಾ! ನೀವೂ ಕೇಳಿ
ತಮ್ಮ ಅದ್ಭುತ ನಟನೆಯಿಂದ ಕನ್ನಡಿಗರ ಫೇವರಿಟ್ ನಟಿಯಾಗಿ ಗುರುತಿಸಿಕೊಂಡಿರುವ ಡಿಂಪಲ್ ಕ್ವೀನ್ ರಚಿತಾ ರಾಮ್, ಕಂಚಿನ ಕಂಠದ ಗಾಯಕಿ ಅನ್ನೋದು ಗೊತ್ತಾ? ಇಲ್ಲಿದೆ ರಚಿತಾ ಹಾಡಿದ ವಿಡೀಯೋ ತುಣುಕು.
ಚಂದನವನದ ಜನಪ್ರಿಯ ನಟಿಯರಲ್ಲಿ ಒಬ್ಬರು ಡಿಂಪಲ್ ಕ್ವೀನ್ ರಚಿತಾ ರಾಮ್ (Rachitha Ram). ಅರಸಿ ಧಾರಾವಾಹಿ ಮೂಲಕ ನಟನೆಗೆ ಎಂಟ್ರಿ ಕೊಟ್ಟ ರಚಿತಾ ರಾಮ್, ಮೊದಲ ಸಿನಿಮಾದಲ್ಲೇ ದರ್ಶನ್ ತೂಗುದೀಪ್ ಗೆ ನಾಯಕಿಯಾಗಿ ನಟಿಸಿದ್ದರು. ಬುಲ್ ಬುಲ್ ಸಿನಿಮಾ ಸಿಕ್ಕಾಪಟ್ಟೆ ಹಿಟ್ ಆದ ನಂತರ ಹಲವು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡ ನಟಿ ರಚಿತಾ ರಾಮ್. ಅರಸಿ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದ ಹುಡುಗಿ, ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದೆ ತಡ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತೆ, ಒಂದಾದ ಮೇಲೆ ಒಂದು ಹಿಟ್ ಚಿತ್ರಗಳನ್ನು ನೀಡುವ ಮೂಲಕ ಅದ್ಭುತ ನಟಿ ಎಂದು ಹೆಸರು ಗಳಿಸಿರುವ ಬೆಡಗಿ ರಚಿತಾ ರಾಮ್.
ರಜಿನಿಕಾಂತ್ ಜೊತೆ ನಟಿಸಲು ಚೆನ್ನೈಗೆ ಹಾರಿದ ರಚಿತಾ ರಾಮ್; ಎಲ್ಲ ಬಿಟ್ಟು ತಮಿಳಿಗೆ ಹೋಗಿದ್ದಕ್ಕೆ ಕನ್ನಡಿಗರಿಗೆ ಬೇಸರ
ಸ್ಟಾರ್ ಹೀರೋಗಳ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ಪಡೆದುಕೊಂಡ ರಚಿತಾ ರಾಮ್, ದರ್ಶನ್ ತೂಗುದೀಪ್, ಕಿಚ್ಚ ಸುದೀಪ್ (Kiccha Sudeep), ಪುನೀತ್ ರಾಜಕುಮಾರ್, ಶ್ರೀಮುರಳಿ, ಗೋಲ್ಡನ್ ಸ್ಟಾರ್ ಗಣೇಶ್, ದುನಿಯಾ ವಿಜಯ್, ಉಪೇಂದ್ರ, ರಮೇಶ್ ಅರವಿಂದ್, ಧ್ರುವ ಸರ್ಜಾ, ಸತೀಶ್ ನೀನಾಸಂ ನಂತಹ ಸ್ಟಾರ್ ನಟರ ಜೊತೆ ನಾಯಕಿಯಾಗಿ ನಟಿಸಿದ್ದರು. ಯಾವುದೇ ಪಾತ್ರಕ್ಕೂ ಜೀವ ತುಂಬುವ, ಅದ್ಭುತವಾಗಿ ಡ್ಯಾನ್ಸ್ ಮಾಡುವ, ಇವರು ಭರತನಾಟ್ಯ ಕಲಾವಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ರಚಿತಾ ರಾಮ್ ಉತ್ತಮ ಗಾಯಕಿ ಅನ್ನೋದು ನಿಮಗೆ ಗೊತ್ತಾ? ಹೌದು, ರಚಿತಾ ರಾಮ್ ಅದ್ಭುತ ಗಾಯಕಿ ಕೂಡ ಹೌದು, ಇತ್ತೀಚಿಗೆ ನಟಿ ಹಾಡಿರುವ ಒಂದು ವಿಡೀಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು, ಕೀರ್ತಿ ರಾಮ್ ಇನ್’ಸ್ಟಾಗ್ರಾಂ ಪೇಜ್ (Instagram Page)ನಿಂದ ವಿಡಿಯೋ ಅಪ್ ಲೋಡ್ ಆಗಿದ್ದು, ಈ ವಿಡಿಯೋದಲ್ಲಿ ರಚಿತಾ ರಾಮ್, ಈ ಪ್ರೀತಿ ಒಂಥರಾ ಕಚಗುಳಿ, ಆ ಸೂರ್ಯ ತಾಗಲಿ ಚಳಿ ಚಳಿ, ನಿರಂತರ ನಶೆಯಿದು, ಇದೇನಿದು ಜಾದೂ ತಿಳಿಯದು ಎಂದು ಕಿಚ್ಚ ಸುದೀಪ್ ಸಿನಿಮಾದ ಹಾಡನ್ನು ತಮ್ಮ ಮಧುರ ಕಂಠದಲ್ಲಿ ಅದ್ಭುತವಾಗಿ ಹಾಡಿದ್ದಾರೆ. ಹಾಡಿದ ನಾಲ್ಕು ಸಾಲುಗಳು ಸಖತ್ ವೈರಲ್ ಆಗುತ್ತಿದ್ದು, ಡಿಂಪಲ್ ಕ್ವೀನ್ ಅದ್ಭುತ ನಟಿ , ಡ್ಯಾನ್ಸರ್ ಮಾತ್ರ ಅಲ್ಲ, ಗಾಯಕಿ ಕೂಡ ಹೌದು ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ. ನೀವು ಕೂಡ ಹಾಡಿನ ವಿಡೀಯೋ ಕೇಳಿ ಹೇಗಿದೆ ಅಂತ ತಿಳಿಸಿ.
ಕನ್ನಡಿಯೇ ನಾಚುವಂತೆ ಸಿಂಗಾರ ಮಾಡಿಕೊಂಡ ಡಿಂಪಲ್ ಕ್ವೀನ್… ಬೇಗ ಮದ್ವೆ ಆಗಮ್ಮ ಅಂತಿದ್ದಾರೆ ಫ್ಯಾನ್ಸ್!
ಇನ್ನು ಕರಿಯರ್ ಬಗ್ಗೆ ಹೇಳೋದಾದರೆ ರಚಿತಾ ರಾಮ್ ಸದ್ಯದ ಬ್ಯುಸಿ ನಟಿ, ಯಾಕಂದ್ರೆ ಇನ್ನೆರಡು ವರ್ಷಕ್ಕೆ ಆಗುವಷ್ಟು ಸಿನಿಮಾಗಳು ರಚಿತಾ ಕೈಯಲ್ಲಿದೆ. ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮಿ ಆರ್ ಹೇಟ್ ಮೀ, ಅಯೋಗ್ಯ 2, ಸಂಜು ವೆಡ್ಸ್ ಗೀತಾ 2 (Sanju weds Geetha 2) , ಕಲ್ಟ್, ರಾಚಯ್ಯ ಹಾಗೂ ಕೂಲಿ ಸಿನಿಮಾಗಳಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ರಜನಿಕಾಂತ್ ಅಭಿನಯದ ಕೂಲಿ ಚಿತ್ರದಲ್ಲಿ ರಚಿತಾ ನೆಗೆಟೀವ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.