ಸತೀಶ್‌ ನಾನು ಟಾಮ್ ಅಂಡ್ ಜೆರ್ರಿಯಂತೆ ಕಿತ್ತಾಡುತ್ತೇವೆ: ರಚಿತಾ ರಾಮ್‌

ಸತೀಶ್‌ ನೀನಾಸಂ, ರಚಿತಾ ರಾಮ್‌ ಜೋಡಿಯ ‘ಅಯೋಗ್ಯ 2’ ಚಿತ್ರಕ್ಕೆ ಮುಹೂರ್ತ ಆಗಿದೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡುವ ಮೂಲಕ ಚಿತ್ರಕ್ಕೆ ಶುಭ ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಆಗಿದೆ. 

Rachita Ram Sathish Ninasam starrer Ayogya 2 First Look Poster Out gvd

ಸತೀಶ್‌ ನೀನಾಸಂ, ರಚಿತಾ ರಾಮ್‌ ಜೋಡಿಯ ‘ಅಯೋಗ್ಯ 2’ ಚಿತ್ರಕ್ಕೆ ಮುಹೂರ್ತ ಆಗಿದೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡುವ ಮೂಲಕ ಚಿತ್ರಕ್ಕೆ ಶುಭ ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಆಗಿದೆ. ಈ ಸಂದರ್ಭದಲ್ಲಿ ಸತೀಶ್‌ ನೀನಾಸಂ, ‘ಈ ಚಿತ್ರ ನಿರ್ಮಿಸಲು ನಿರ್ಮಾಪಕರ ದೊಡ್ಡ ಪಟ್ಟಿಯೇ ಇತ್ತು. ಕೊನೆಗೆ ಮುನೇಗೌಡ ಅವರು ನಿರ್ಮಾಪಕರಾಗಿದ್ದಾರೆ. ಇದು ಪ್ರೇಕ್ಷಕರ ಸಿನಿಮಾ. ಅವರು ಗೆಲ್ಲಿಸಿದಕ್ಕೆ ಮುಂದುವರಿದ ಭಾಗ ಸೆಟ್ಟೇರುತ್ತಿದೆ’ ಎಂದರು.

ನಿರ್ದೇಶಕ ಮಹೇಶ್‌ ಕುಮಾರ್‌, ‘ಮೊದಲ ಭಾಗದ ಚಿತ್ರವನ್ನು ಬೇರೆ ಭಾಷೆಗಳಿಗೆ ಡಬ್‌ ಮಾಡಿದಾಗ ಉತ್ತಮ ಪ್ರತಿಕ್ರಿಯೆ ಬಂತು. ಹೀಗಾಗಿ ಈ ಬಾರಿ ಕನ್ನಡದ ಜತೆಗೆ ತೆಲುಗು, ತಮಿಳಿನಲ್ಲೂ ಚಿತ್ರೀಕರಣ ಮಾಡುತ್ತಿದ್ದೇವೆ. ಇದು ಪ್ಯಾನ್‌ ಇಂಡಿಯಾ ಸಿನಿಮಾ ಅಲ್ಲ. ಫ್ಯಾನ್ಸ್‌ ಇಂಡಿಯಾ ಸಿನಿಮಾ’ ಎಂದರು. ರಚಿತಾ ರಾಮ್‌, ‘ಇಲ್ಲೂ ಕೂಡ ನಾನು ಸತೀಶ್‌ ನೀನಾಸಂ ಟಾಮ್ ಅಂಡ್ ಜೆರ್ರಿಯಂತೆ ಕಿತ್ತಾಡುತ್ತೇವೆ. ನಮ್ಮ ಪಾತ್ರಗಳ ಮೂಲಕ ಕತೆ ಸಾಗುತ್ತದೆ’ ಎಂದರು. ಮಂಜು ಪಾವಗಡ ಚಿತ್ರಕ್ಕೆ ಜತೆಯಾಗಿದ್ದಾರೆ. ಮುನೇಗೌಡ ನಿರ್ಮಾಣದ ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ ಇದೆ. ಮಾಸ್ತಿ ಸಂಭಾಷಣೆ, ವಿಶ್ವಜಿತ್‌ ರಾವ್‌ ಛಾಯಾಗ್ರಹಣ ಹೊಣೆ ಹೊತ್ತಿದ್ದಾರೆ.

ಕತೆ ಕೇಳಿದಾಗಲೇ ಎಕ್ಸೈಟ್ ಆಗಿದ್ದೆ: 6 ವರ್ಷಗಳ ಹಿಂದೆ ರಿಲೀಸ್‌ ಆದ ಸತೀಶ್‌ ನೀನಾಸಂ ಹಾಗೂ ರಚಿತಾ ರಾಮ್‌ ಜೋಡಿಯ ಸೂಪರ್‌ಹಿಟ್‌ ‘ಅಯೋಗ್ಯ’ ಸಿನಿಮಾದ ಎರಡನೇ ಭಾಗ ಸೆಟ್ಟೇರಲು ಸಜ್ಜಾಗಿದೆ. ಅಯೋಗ್ಯ ಸಿನಿಮಾದ ಮುಂದುವರಿದ ಕತೆಯುಳ್ಳ ಈ ಸಿನಿಮಾದಲ್ಲೂ ಸತೀಶ್‌ ಹಾಗೂ ರಚಿತಾ ನಾಯಕ, ನಾಯಕಿ ಆಗಿ ನಟಿಸುತ್ತಿದ್ದಾರೆ. ಆ ಸಿನಿಮಾ ನಿರ್ದೇಶಿಸಿದ್ದ ಮಹೇಶ್‌ ಅವರೇ ಈ ಚಿತ್ರದ ನಿರ್ದೇಶಕ. ಅರ್ಜುನ್‌ ಜನ್ಯ ಸಂಗೀತ ನಿರ್ದೇಶನದ, ಎಂ ಮುನೇಗೌಡ ನಿರ್ಮಾಣದ ಈ ಸಿನಿಮಾ. ಈ ಕುರಿತು ನೀನಾಸಂ ಸತೀಶ್, ‘ನಾನು ಈ ಕತೆ ಕೇಳಿದಾಗಲೇ ಎಕ್ಸೈಟ್ ಆಗಿದ್ದೆ. ಒಂದು ವರ್ಷ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಲಾಗಿದೆ. 

ಮದಗಜ ಮಹೇಶ್ ಸಾರಥ್ಯದಲ್ಲಿ ಮತ್ತೆ 'ಅಯೋಗ್ಯ'ರಾಗಲು ಹೊರಟ ಸತೀಶ್-ರಚಿತಾ!

ಮೊದಲನೇ ಭಾಗದಲ್ಲಿ ಇದ್ದ ವಾತಾವರಣದಲ್ಲಿಯೇ ಕತೆ ನಡೆಯುತ್ತದೆ. ಆದರೆ ಎರಡನೇ ಭಾಗ ಎಂದಾಗ ಪ್ರೇಕ್ಷಕರ ನಿರೀಕ್ಷೆ ಜಾಸ್ತಿಯೇ ಇರುತ್ತದೆ. ಅದಕ್ಕೆ ತಕ್ಕಂತೆ ಗುಣಮಟ್ಟವೂ ಚೆನ್ನಾಗಿರಬೇಕು. ಅದನ್ನೆಲ್ಲಾ ಪ್ಲಾನ್ ಮಾಡಿದ್ದೇವೆ. ಬಜೆಟ್ ಕೂಡ ದೊಡ್ಡದಾಗಿದೆ. ಚೆನ್ನಾಗಿ ಮಾಡಿ ಅಂತ ನಿರ್ಮಾಪಕ ಮುನೇಗೌಡರು ಹೇಳಿದ್ದಾರೆ. ಗೆದ್ದೇ ಗೆಲ್ತೀವಿ ಎಂಬ ವಿಶ್ವಾಸದಲ್ಲಿ ನಿಮ್ಮ ಮುಂದೆ ಬರುತ್ತೇವೆ’ ಎಂದು ಹೇಳಿದರು. ಈ ಮಧ್ಯೆ ‘ಅಶೋಕ ಬ್ಲೇಡ್’ ಚಿತ್ರದ ಚಿತ್ರೀಕರಣವೂ ಜನವರಿಯಲ್ಲಿ ಆರಂಭವಾಗಲಿದೆ ಎಂದು ಸತೀಶ್ ನೀನಾಸಂ ತಿಳಿಸಿದ್ದಾರೆ. ಈ ಚಿತ್ರದ ಸಂಕಲನಕಾರರಾಗಿದ್ದ ಮನು ಶೇಡ್ಗಾರ್ ‘ಅಶೋಕ ಬ್ಲೇಡ್’ ನಿರ್ದೇಶನದ ಹೊಣೆ ಹೊತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

Latest Videos
Follow Us:
Download App:
  • android
  • ios