ಊಟ ಮಾಡ್ಸೋದೇ ದೊಡ್ಡ ಕಷ್ಟ: ತುಂಟ ರಾಯನ್ ಜೊತೆ ಮೇಘನಾ ರಾಜ್ ರೆಡಿ ಆಗೋದು ಹೀಗೆ
ಜೋಕ್ ಜೋಕ್ ಎಂದು ಹಾಸ್ಯ ಮಾಡುವ ರಾಯನ್ ರಾಜ್ ಸರ್ಜಾ ವಿಡಿಯೋ ವೈರಲ್. ಅಮ್ಮ ಮಗನ ಟಾಯ್ ಶಾಪಿಂಗ್ ಶುರು....
ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಮತ್ತು ಪುತ್ರ ರಾಯನ್ ರಾಜ್ ಸರ್ಜಾ ಟಾಯ್ ಶಾಪಿಂಗ್ ಮಾಡುವ ಪ್ಲ್ಯಾನ್ ಮಾಡಿದ್ದಾರೆ. ಎರಡು ಮೂರು ಗಂಟೆಗಳ ಕಾಲ ಹೊರ ಹೋಗಬೇಕು ಅಂದ್ರೆ ಹೇಗೆ ರೆಡಿಯಾಗಬೇಕು ಎಂದು ತಮ್ಮ ಫಾಲೋವರ್ಸ್‌ಗೆ ತೋರಿಸಿಕೊಟ್ಟಿದ್ದಾರೆ.
'ಈ ಸಲ ಸಿಂಪಲ್ ಮತ್ತು ಬೇಸಿಕ್ ಆಗಿರುವ ವಿಡಿಯೋ ಮಾಡಿರುವೆ. ರಾಯನ್ ಜೊತೆ ಟಾಯ್ ಸ್ಟೋರ್‌ಗೆ ಹೋಗಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿರುವೆ. ರಾಯನ್‌ಗಿಂತ ನಾನು ಟಾಯ್ ಸ್ಟೋರ್‌ಗೆ ಹೋಗಲು ಹೆಚ್ಚಿಗೆ ಖುಷಿಯಾಗಿರುವೆ. ಕೆಲವು ದಿನಗಳಿಂದ ರಾಯನ್‌ಗೆ ಪೆಂಗ್ವಿನ್ ತುಂಬಾ ಇಷ್ಟ ಆಗಿದೆ ಅದನ್ನು ತೆಗೆದುಕೊಂಡು ಬರಲು ನಾವು ಹೋಗುತ್ತಿದ್ದೀವಿ. ಮಗು ಜೊತೆಗಿದ್ದರೆ ಅಮ್ಮಂದಿರ ಕೈಯಲ್ಲಿ ಲಗೇಜ್ ಸ್ವಲ್ಪ ಕಡಿಮೆ ಇರಬೇಕು ಜೊತೆ ಕಂಫರ್ಟ್ ಆಗಿರುವ ಡ್ರೆಸ್ ಧರಿಸಬೇಕು. ಟಾಯ್ ಸ್ಟೋರ್‌ಗೆ ಮಕ್ಕಳನ್ನು ಕರೆದುಕೊಂಡು ಹೋದರೆ ಅವರು ಎಲ್ಲಾ ಕಡೆ ಜಂಪ್ ಮಾಡುತ್ತಿರುತ್ತಾರೆ ಹಾಗೂ ಹಾರುತ್ತಿರುತ್ತಾರೆ. ನಾವು ನಿಂಜಾ ಟರ್ಟಲ್ ರೀತಿ ರೆಡಿಯಾಗಿರಬೇಕು ಅವರನ್ನು ರಕ್ಷಣ ಮಾಡುವುದಕ್ಕೆ. ಈ ವಿಡಿಯೋದಲ್ಲಿ ಸಿಂಪಲ್ ಅಂಡ್ ಕಂಫರ್ಟ್ ಆಗಿರುವ ಡ್ರೆಸ್ ಧರಿಸುವೆ' ಎಂದು ಮೇಘನಾ ಮಾತನಾಡಿದ್ದಾರೆ.
ನಾನು ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಮರ ಚೆನ್ನಾಗಿದ್ದರೆ ಮಾತ್ರ ನೆರಳು ಕೊಡುವುದು: ಮೇಘನಾ ರಾಜ್
ಈ ವಿಡಿಯೋದಲ್ಲಿ ಬಿಗ್ ಹೈಲೈಟ್ ಆಗಿರುವುದು ರಾಯನ್ ರಾಜ್. 'ಟಾಯ್ ಶಾಪಿಂಗ್ ಮಾಡಲು ನಾನು ಡೆನಿಮ್ ಆನ್ ಡೆನಿಮ್ ಧರಿಸಿರುವೆ ಇದಕ್ಕೆ ಬ್ಲ್ಯಾಕ್ ಟೀ-ಶರ್ಟ್ ಧರಿಸಿರುವೆ. ತುಂಬಾ ಜೇಬು ಇದ್ದರೆ ಮೊಬೈಲ್ ಕಾರು ಕೀ ಇಟ್ಟುಕೊಳ್ಳಲು ಸುಲಭವಾಗುತ್ತದೆ' ಎಂದಿದ್ದಾರೆ ಮೇಘನಾ.
'ನಾನು ಮೊದಲು ರೆಡಿಯಾಗಿ ಆನಂತರ ರಾಯನ್‌ನ ರೆಡಿ ಮಾಡುವುದು. ನಾವುಬ್ಬರೂ ಒಟ್ಟಿಗೆ ತಿಂಡಿ ಮತ್ತು ಊಟ ಮಾಡುವುದು. ಒಟ್ಟಿಗೆ ತಿನ್ನುವುದರಲ್ಲಿ ಖುಷಿ ಇದೆ. ರಾಯನ್‌ಗೆ ತಿನಿಸಿದ ನಂತರ ನಾನು ತಿನ್ನಲು ಆಗುವುದಿಲ್ಲ ಏಕೆಂದರೆ ಅವರೇ 2 ಗಂಟೆ ತೆಗೆದುಕೊಳ್ಳುತ್ತನೆ. ಮಕ್ಕಳಿಗೆ ಊಟ ತಿನ್ನಿಸುವುದು ದೊಡ್ಡ ಕೆಲಸ ಎಲ್ಲ ತಾಯಂದಿರು ಒಪ್ಪಿಕೊಳ್ಳುತ್ತಾರೆ ತುಂಬಾ ಕಷ್ಟ ಆಗುತ್ತದೆ. ನಾನು ಎಷ್ಟು ಕಷ್ಟ ಪಡಬೇಕು ನೀವು ನೋಡಿ. ಟಾಯ್ ಸ್ಟೋರ್‌ಗೆ ಹೋಗುವ ಖುಷಿಯಲ್ಲಿ ರಾಯನ್ ಕಡಿಮೆ ಊಟ ಮಾಡಿದ್ದಾನೆ . ಈಗ ಶೂ ಹಾಕಿದ ತಕ್ಷಣ ಒಂದು ನಿಮಿಷವೂ ಕಾಯುವುದಿಲ್ಲ. ಶೂ ಹಾಕಿದ ತಕ್ಷಣ ಹೊರಡಬೇಕು ಎಂದು ರಾಯನ್‌ಗೆ ಅರ್ಥವಾಗುತ್ತದೆ ಅವನೇ ಹೋಗಿ ಬಾಗಿಲಿನಲ್ಲಿ ನಿಂತಿರುತ್ತಾನೆ' ಎಂದು ಪುತ್ರ ರಾಯನ್‌ನ ಮೇಘನಾ ರೆಡಿ ಮಾಡುತ್ತಾರೆ.
ಮೇಘನಾ ರಾಜ್ ವಯಸ್ಸೆಷ್ಟು, ಮಾತೃಭಾಷೆ ಯಾವುದು; ಗೂಗಲ್‌ನಲ್ಲಿ ಅಭಿಮಾನಿಗಳು ಹುಡುಕಿರುವ ಪ್ರಶ್ನೆಗೆ ಉತ್ತರ ಕೊಟ್ಟ ನಟಿ
ಕ್ಯಾಮೆರಾ ಎದುರು ಮೇಘನಾ ಮಾತನಾಡುತ್ತಿರುವಾಗ ರಾಯನ್ ಹೋಗಿ ತನ್ನ ಬೈಕ್ ಮೇಲೆ ಕುಳಿತುಕೊಂಡು ಸೌಂಡ್ ಮಾಡುತ್ತಾನೆ. 'ನನ್ನ ಕಾರಿನಲ್ಲಿ ನಾನು ಹೊರಡುವೆ ಅವನ ಗಾಡಿಯಲ್ಲಿ ರಾಯನ್ ಬರುತ್ತಾನೆ'ಎಂದು ಮೇಘನಾ ಜೋಕ್ ಮಾಡಿದ್ದಾರೆ. 'ರಾಯನ್ ಜೊತೆ ಹೆಚ್ಚಿಗೆ ವಿಡಿಯೋ ಮಾಡಿ, ಚೋಟಾ ಚಿರು ನೋಡಲು ಖುಷಿಯಾಗುತ್ತಿದೆ,ಈ ವಿಡಿಯೋ ನೋಡಿ ನಾನೇ ಖುಷಿಯಾಗಿರುವೆ ಹಾಗೂ ಮುದ್ದಾಗ ಮಗು' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.