ಚಂದ್ರು ಅವರ ಮಾತನ್ನು ಕೇಳಿಸಿಕೊಂಡ ಕೆಲವರು 'ಕನ್ನಡಕ್ಕೆ ಇಂಥ ನಿರ್ಮಾಪಕರು ಹಾಗೂ ನಿರ್ದೇಶಕರ ಅಗತ್ಯವಿದೆ ಎಂದರೆ, ಇನ್ನೂ ಹಲವರು 'ಸೋಲೋದಕ್ಕಿಂತ ಸಿನಿಮಾ ಗೆಲ್ಲಬೇಕು, ಆಗ ಇಡೀ ಇಂಡಸ್ಟ್ರಿಗೆ ಇನ್ನೂ ಹೆಚ್ಚಿನ...
ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆಯ ಕಬ್ಜ (Kabzaa) ಸಿನಿಮಾ ಸೋತಿದೆ ಎಂಬುದು ಗೊತ್ತೇ ಇದೆ. ಈ ಕಬ್ಜ ಸಿನಿಮಾದ ನಿರ್ದೇಶಕರು ಹಾಗೂ ನಿರ್ಮಾಪಕರು ಆರ್ ಚಂದ್ರು. ಅವರು ಈ ಸಿನಿಮಾವನ್ನು ಭಾರೀ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದರು R Chandru. ಆದರೆ, ಸಿನಿಮಾ ಗೆಲ್ಲಲಿಲ್ಲ, ಆದರೆ ಸೋಲು ಬಂಡವಾಳ ಹೂಡಿದ್ದ ಚಂದ್ರು ಅವರನ್ನು ಕಂಗೆಡಿಸಲಿಲ್ಲ. ಕಾರಣವನ್ನು ಅವರೇ ಹೇಳಿದ್ದಾರೆ ಕೇಳಿ.. ನಿಜವಾಗಯೂ ಈ ಚಂದ್ರು ಗ್ರೇಟ್ ಅಂತೀರಾ?
ಯಾರೋ ಅಮೆರಿಕಾದವ್ರು ಪ್ರಯತ್ನ ಪಟ್ರು ಅಂತ ಇಂಡಿಯಾದವ್ರು ಪ್ರಯತ್ನ ಪಡಬಾರ್ದಾ? ನಾನೂ ಪ್ರಯತ್ನಪಟ್ಟೆ ನನ್ನದೇ ಹಣದಿಂದ.. ಲ್ಯಾಂಡಿಂಗ್ ವೇಳೆ ಚಿಕ್ಕ ಕ್ರಾಶ್ಆಗಿದೆ, ನಾಟ್ ಎ ಫೆಲ್ಯೂರ್.. ಕ್ರಾಶ್, ಬಟ್ ದೆರ್ ಈಸ್ ಎ ರೋಡ್.. ಚಂದ್ರಯಾನ 2 ಸಕ್ಸಸ್ ಆಯ್ತಲ್ಲ, ದೆಟ್ ಈಸ್ ಕಾಲ್ಡ್ ಆರ್‌ಸಿ ಸ್ಟುಡಿಯೋಸ್. ಐದು ಸಿನಿಮಾಗಳು ಬರುತ್ತೆ, ಎನ್‌ಎಂ ಸುರೇಶಣ್ಣ ಹೇಳಿದ ಹಾಗೆ ಇಂಡಸ್ಟ್ರಿಗೆ ಒಳ್ಳೇದ್ರೀ, ನಮಗೆಲ್ಲ..
ಉಪೇಂದ್ರ ಬಗ್ಗೆ ಶಿವಣ್ಣ 'ಓಂ' ರಿಲೀಸ್‌ಗೂ ಮೊದಲು ಹೇಳಿದ್ದ ಮಾತು ವೈರಲ್, ಸುಮ್ನೇ ಏನಲ್ಲ!
ನಾನು ಗೌಡರ ಜೊತೆ ಸೇರ್ಕೊಂಡು ರಿಯಲ್ ಎಸ್ಟೇಟ್ ಮಾಡ್ಬಹುದು, ಆದ್ರೆ ಅದಲ್ಲ.. ದೇವ್ರು ನಮ್ಮನ್ನ ತಂದು ಹಾಕಿದಾರೆ ಇಲ್ಲಿರು ಅಂತ.. ಒಂದು ಸಿನಿಮಾ ಮಾಡಿದಾಗ, ಅದು ಒಂದು ಕೋಟಿದಾಗ್ಲೀ ನೂರು ಕೋಟಿದಾಗ್ಲೀ ಅದನ್ನು ಸಿನಿಮಾ ಇಂಡಸ್ಟ್ರಿಯವ್ರು ಎಲ್ರೂ ಊಟ ಮಾಡ್ತಾರೆ.. ಸೋ, ಹಾಗಾಗಿ ಆ ಬಗ್ಗೆ.. ' ಎಂದಿದ್ದಾರೆ ನಿರ್ದೇಶಕರಾದ ಆರ್ ಚಂದ್ರು. ಇಷ್ಟು ಕಥೆ ಕೇಳಿದ ಮೇಲೆ ಅವ್ರು ಯಾವುದರ ಬಗ್ಗೆ ಮಾತನ್ನಾಡಿದ್ದಾರೆ ಅಂತ..!
ಹೌದು, ನಿಮ್ಮ ಊಹೆ ನಿಜ.. ಅವ್ರು ತಮ್ಮ ನಿರ್ಮಾಣ ಹಾಗೂ ನಿರ್ದೇಶನದ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಕಬ್ಜ' ಸಿನಿಮಾ ಬಗ್ಗೆ ಮಾತನ್ನಾಡಿದ್ದಾರೆ. ಆ ಸಿನಿಮಾ ಕನ್ನಡದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿತ್ತು. ಆಗಷ್ಟೇ ಕನ್ನಡದ ಕೆಜಿಎಫ್ ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತ್ತು, ಭಾರೀ ಕಲೆಕ್ಷನ್ ದಾಖಲಿಸಿತ್ತು. ಆದರೆ, ಉಪ್ಪಿ-ಚಂದ್ರು ಜೋಡಿಯ ಕಬ್ಜ ಕನ್ನಡವೂ ಸೇರಿದಂತೆ ಇಡೀ ಜಗತ್ತಿನ ಪ್ರೇಕ್ಷಕರ ನಿರೀಕ್ಷೆ ಸುಳ್ಳುಮಾಡಿದೆ.
ಆರತಿಗೂ ಪುಟ್ಟಣ್ಣಗೂ ಮಧ್ಯೆ ಬಂದ ಮಂತ್ರಿ..! ಆದ್ರೆ ಆ ಮಂತ್ರಿಯೂ ಕೈ ತಪ್ಪಿ ಹೋಗಿ ಆಮೇಲೇನಾಯ್ತು!
ಕಬ್ಜ ಸಿನಿಮಾ ಸೋತ ಬಳಿಕ, ಕನ್ನಡದ ನಿರ್ದೇಶಕ ಹಾಗೂ ಕಬ್ಜ ನಿರ್ದೇಶಕ-ನಿರ್ಮಾಪಕ ಆರ್ ಚಂದ್ರು ಅವರು ಈ ಮೇಲಿನ ಮಾತುಗಳನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಚಂದ್ರು ಅವರ ಮಾತನ್ನು ಕೇಳಿಸಿಕೊಂಡ ಕೆಲವರು 'ಕನ್ನಡಕ್ಕೆ ಇಂಥ ನಿರ್ಮಾಪಕರು ಹಾಗೂ ನಿರ್ದೇಶಕರ ಅಗತ್ಯವಿದೆ ಎಂದರೆ, ಇನ್ನೂ ಹಲವರು 'ಸೋಲೋದಕ್ಕಿಂತ ಸಿನಿಮಾ ಗೆಲ್ಲಬೇಕು, ಆಗ ಇಡೀ ಇಂಡಸ್ಟ್ರಿಗೆ ಇನ್ನೂ ಹೆಚ್ಚಿನ ಲಾಭ-ಸಹಾಯ ಆಗುತ್ತೆ' ಎಂದಿದ್ದಾರೆ.
