ಫೋನೇ ಬಳಸದ  ಸೂಪರ್​ಸ್ಟಾರ್​ ಅಜಿತ್​ 15 ಕೆಜಿ ತೂಕ ಕಳೆದುಕೊಂಡ ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ... 

ತಮಿಳು (Tamil) ಮಾತ್ರವಲ್ಲದೇ ಹಲವು ಭಾಷೆಗಳಲ್ಲಿ ಖ್ಯಾತಿ ಪಡೆದಿರುವ ನಟ ಅಜಿತ್ ಕುಮಾರ್​ ಕಳೆದ ಮೇ ತಿಂಗಳಿನಲ್ಲಿ 52 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಯಸ್ಸಿನಲ್ಲಿಯೂ ಟಾಲಿವುಡ್​ನಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ ನಟ ಅಜಿತ್​. ಸದ್ಯ ಇವರು, ತಮ್ಮ 62ನೇ ಚಿತ್ರ ‘ವಿದಾ ಮುಯರ್ಚಿ’ (Vidaa Muyarchi) ಸಿನಿಮಾದ ಮೇಕಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದ್ದು, ಮಾಗಿಳ್ ತಿರುಮೇನಿ ನಿರ್ದೇಶಿಸುತ್ತಿದ್ದಾರೆ. ಈ ಸಮಯದಲ್ಲಿ ಇವರ ವಿಶೇಷ ಫೋಟೋ ಒಂದು ವೈರಲ್​ ಆಗಿದೆ. ಅದೇನೆಂದರೆ ನಟ ತಮ್ಮ 15 ಕೆ.ಜಿ ತೂಕವನ್ನು ಇಳಿಸಿಕೊಂಡಿರುವ ವಿಷಯವದು.

ಹೌದು. ‘ವಿದ ಮುಯರ್ಚಿ’ ಸಿನಿಮಾದ ಆರಂಭಿಕ ಚಿತ್ರೀಕರಣಕ್ಕಾಗಿ ಅಜಿತ್ ಮತ್ತು ನಟಿಯರಾದ ತ್ರಿಷಾ ಮತ್ತು ಪ್ರಿಯಾ ಭವಾನಿ ಶಂಕರ್ ಅಜರ್‌ಬೈಜಾನ್‌ಗೆ ಹೋಗಿದ್ದ ಸಂದರ್ಭದಲ್ಲಿ ಇವರ ಚಿತ್ರಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಗುತ್ತಿವೆ. ಅಜಿತ್, ಅರ್ಜುನ್ ಮತ್ತು ಆರವ್ ಅಲ್ಲಿನ ರೆಸ್ಟೋರೆಂಟ್‌ನಲ್ಲಿ ಇರುವುದನ್ನು ಚಿತ್ರದಲ್ಲಿ ನೋಡಬಹುದು. ಇದರಲ್ಲಿ ಅಜಿತ್​ ಅವರು ಮೊದಲಿಗಿಂತಲೂ ಸಣ್ಣವರಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಬಹುತೇಕ ನಟರು ತಮ್ಮ ಚಿತ್ರಕ್ಕೆ ಹೊಂದಿಕೊಳ್ಳುವಂತೆ ತೂಕ ಹೆಚ್ಚಿಸಿಕೊಳ್ಳುವುದು, ಇಳಿಸಿಕೊಳ್ಳುವುದು, ಸಿಕ್ಸ್​ ಪ್ಯಾಕ್ ಮಾಡಿಕೊಳ್ಳುವುದು ಮಾಮೂಲು. ಅದರಂತೆಯೇ ತಮ್ಮ ಮುಂಬರುವ ಚಿತ್ರಕ್ಕಾಗಿ ನಟ 15 ಕೆ.ಜಿ ತೂಕ ಇಳಿಸಿಕೊಂಡಿದ್ದಾರಂತೆ!

10 ಕೋಟಿ ಆಫರ್​ ರಿಜೆಕ್ಟ್​ ಮಾಡಿದ ಅಲ್ಲು ಅರ್ಜುನ್​: ಇನ್ನಾದ್ರೂ ಬುದ್ಧಿ ಕಲೀರಿ ಅಂತ ಉಳಿದವರಿಗೆ ಫ್ಯಾನ್ಸ್​ ಕ್ಲಾಸ್​!

ಅಷ್ಟಕ್ಕೂ ಅಜಿತ್​ ಅವರು, ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ತಾಧವು ಚಿತ್ರದಲ್ಲಿ ಗಡ್ಡವನ್ನು ಬೆಳೆಸಿದ್ದರು. ಮಾತ್ರವಲ್ಲದೇ ತೂಕವನ್ನೂ ಹೆಚ್ಚಿಸಿಕೊಂಡಿದ್ದರು. ಇದೀಗ ಮುಂಬರುವ ಚಿತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದಾರೆ. ತಾವು ತೂಕ ಇಳಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿರುವ ನಟ, ಮಾಂಸಹಾರ ತ್ಯಜಿಸಿರುವುದಾಗಿ ಹೇಳಿಕೊಂಡಿದ್ದಾರೆ. ತಾವು ಹೆಚ್ಚಾಗಿ ಮಾಂಸಾಹಾರವನ್ನೇ ಸೇವಿಸುತ್ತಿದ್ದು, ಈಗ ತೂಕ ಇಳಿಸಿಕೊಳ್ಳಲು ಸಸ್ಯಾಹಾರದ ಮೊರೆ ಹೋಗಿರುವುದಾಗಿ ಹೇಳಿದ್ದಾರೆ. ಹಸಿರೆಲೆ ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ ಅಗತ್ಯ ವ್ಯಾಯಾಮ ಮಾಡಿದ್ದರಿಂದ ತೂಕ ಇಳಿಸಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಅಷ್ಟಕ್ಕೂ ಇವರ ಕುರಿತು ಇನ್ನೊಂದು ಇಂಟರೆಸ್ಟಿಂಗ್ ವಿಷಯ ಇದೆ. ಅದೇನೆಂದರೆ, ಅಜಿತ್​ ಅವರು ಮೊಬೈಲ್​ ಫೋನ್​ ಬಳಸುವುದೇ ಇಲ್ಲ ಎನ್ನುವುದು. ಇವರ ಬಳಿ ಇದುವರೆಗೂ ಒಂದೇ ಒಂದು ಮೊಬೈಲ್​ ಫೋನ್​ ಇಲ್ಲ. ಇದು ಅವರಿಗೆ ಇಷ್ಟವಿಲ್ಲವಂತೆ. ಇವರನ್ನು ಯಾರಾದರೂ ಸಂಪರ್ಕಿಸುವುದಾದರೆ, ಅವರ ಆಪ್ತರ ಬಳಿ ಹೇಳಬೇಕಷ್ಟೇ. ಇದು ತುಂಬಾ ವಿಚಿತ್ರ ಎನಿಸಿದರೂ ನಿಜವೂ ಹೌದು. ನನಗೆ ಇದರಲ್ಲಿ ಆಸಕ್ತಿ ಇಲ್ಲ ಎನ್ನುತ್ತಾರೆ ನಟ. 

ಅರೆಬರೆ ಬೆತ್ತಲಾದ ರಶ್ಮಿಕಾಗಿಂತ ಪೂರ್ತಿ ನಗ್ನಳಾದ ತೃಪ್ತಿಗೆ ಇಷ್ಟು ಕಮ್ಮಿ ದುಡ್ಡಾ? ಮೋಸ ಅಂತಿದ್ದಾರೆ ಫ್ಯಾನ್ಸ್​

ಪೊನ್ನಿಯಿನ್ ಸೆಲ್ವನ್ ಪ್ರಚಾರದ ವೇಳೆ ಈ ಕುರಿತು ನಟಿ ತ್ರಿಶಾ ಕೂಡ ಮಾತನಾಡಿದ್ದರು. ಅಜಿತ್ ಕುಮಾರ್ ಹೆಸರನ್ನು ನಿಮ್ಮ ಮೊಬೈಲ್​ನಲ್ಲಿ ಏನೆಂದು ಸೇವ್ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ ಉತ್ತರ ಕೊಟ್ಟಾಗಲೇ ಅಜಿತ್​ ಅವರು ಫೋನ್​ ಬಳಸುವುದಿಲ್ಲ ಎನ್ನುವ ವಿಷಯ ಬಹಿರಂಗಗೊಂಡಿತ್ತು. ನಟಿ ತಮಗೆ ಕೇಳಿದ್ದ ಪ್ರಶ್ನೆಗೆ ಉತ್ತರವಾಗಿ ಅಜಿತ್ ತಮ್ಮ ಬಳಿ ಫೋನ್ ಹೊಂದಿಲ್ಲ ಎಂದಿದ್ದರು. ನಾನು ಅವರೊಂದಿಗೆ ಮಾತಾಬೇಕು ಅಂದ್ರೆ ಮೊದಲು ಅವರ ಆಪ್ತರನ್ನು ಸಂಪರ್ಕಿಸಬೇಕು ನಟಿ ಹೇಳಿದ್ದರು. ಅಜಿತ್ ಫೋನ್ ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ಅಜಿತ್ ಕುಮಾರ್ ಅವರು ಭಾರತದ ಐರನ್ ಮ್ಯಾನ್​ನಂತೆ ಎಂದು ನಟಿ ಹೇಳಿದ್ದರು. ಇದೀಗ ತೂಕ ಇಳಿಸಿಕೊಂಡು ಸುದ್ದಿಯಾಗಿದ್ದಾರೆ.