ಕನ್ನಡಪ್ರಭ ಸಿನಿವಾರ್ತೆ ಇಲ್ಲಿವರೆಗೂ ನಿರ್ಮಾಪಕರಾಗಿದ್ದ ಪುಷ್ಕರ್ ಮಲ್ಲಿಕಾರ್ಜು ಈಗ ಸಿನಿಮಾ ವಿತರಕರಾಗುತ್ತಿದ್ದಾರೆ.  

ಬೆಂಗಳೂರಿನ ಸಿನಿಮಾ ನಗರಿ ಎಂದೇ ಗುರುತಿಸಿಕೊಂಡಿರುವ ಗಾಂಧಿನಗರದಲ್ಲಿ ಹೊಸದಾಗಿ ಸಿನಿಮಾ ಕಛೇರಿ ತೆರೆದಿದ್ದಾರೆ. ನಟ ರಕ್ಷಿತ್ ಶೆಟ್ಟಿ ಅವರು ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ನೂತನ ಸಿನಿಮಾ ವಿತರಣಾ ಕಛೇರಿಯನ್ನು ಉದ್ಘಾಟನೆ ಮಾಡಿದರು.

ರಾಜ್ ಮೊಮ್ಮಗನ ಜೊತೆ ’ಬಾಕ್ಸರ್’ ಹೊಡೆದ ಆಶಿಕಾ ರಂಗನಾಥ್ ಅಕ್ಕ!

ಆರ್ಕಿಟೆಕ್ ಉಲ್ಲಾಸ್ ಅವರು ರೂಪಿಸಿರುವ ಈ ಕಛೇರಿಯ ವಿನ್ಯಾಸವನ್ನು ಬಂದಿದ್ದ ಗಣ್ಯರು ಮೆಚ್ಚಿಕೊಂಡರು. ಗಾಂಧಿನಗರದಲ್ಲಿರುವ ಫ್ರೀಡಂ ಪಾರ್ಕ್ ಎದುರುಗಿನ ವೆಟ್ರಾ ಹೌಸ್‌ನ ಮೂರನೇ ಮಹಡಿಯಲ್ಲಿ ಈ ನೂತನ ಕಛೇರಿ ಆರಂಭಗೊಂಡಿಸಿದೆ.

View post on Instagram

ನಟರಾದ ನಿಖಿಲ್‌ಕುಮಾರ್, ಶರಣ್, ವಿನಯ್ ರಾಜ್ ಕುಮಾರ್, ಹಿರಿಯರಾದ ರಾಘವೇಂದ್ರ ರಾಜ್ ಕುಮಾರ್, ನಿರ್ದೇಶಕ ಹೇಮಂತ್ ರಾವ್, ಸಿಂಪಲ್ ಸುನಿ, ವಿತರಕ ಜಯಣ್ಣ, ನಟಿ ಆಶಿಕಾ ರಂಗನಾಥ್ ಸೇರಿದಂತೆ ಚಿತ್ರರಂಗದ ಹಲವರು ಆಗಮಿಸಿ ಪುಷ್ಕರ ಅವರ ಸಿನಿಮಾ ವಿತರಣೆ ಸಂಸ್ಥೆಗೆ ಶುಭ ಕೋರಿದರು. ಸದ್ಯಕ್ಕೆ ಪುಷ್ಕರ್ ಹಾಗೂ ರಕ್ಷಿತ್ ಶೆಟ್ಟಿ ಅವರ ಕಾಂಬಿನೇಷನ್ನ ಚಿತ್ರಗಳ ಪೈಕಿ ‘ಅವನೇ ಶ್ರೀಮನ್ನಾರಾಯಣ’ ಇದೇ ವರ್ಷ ತೆರೆಗೆ ಬರುತ್ತಿದೆ. ಆ ನಂತರ ‘ಭೀಮಸೇನಾ ನಳಮಹಾರಾಜ’, ‘ಅವತಾರಪುರುಷ’, ವಿನಯ್ ರಾಜ್‌ಕುಮಾರ್ ನಟನೆಯ ಚಿತ್ರ ತೆರೆಗೆ ಬರಲಿದೆ.