ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್  ನಟನೆಯ ‘ಜೇಮ್ಸ್’ ಚಿತ್ರದ ಪ್ರಿ ರಿಲೀಸ್ ಈವೆಂಟ್‌ಗೆ ಅದ್ದೂರಿ ತಯಾರಿಗಳು ನಡೆಯುತ್ತಿವೆ. ಪುನೀತ್‌ರಾಜ್‌ಕುಮಾರ್ ಅವರ ಆಸೆಯಂತೆ ಹೊಸಪೇಟೆಯಲ್ಲಿ ಸಿನಿಮಾ ಬಿಡುಗಡೆಯ ಪೂರ್ವಭಾವಿ ಕಾರ್ಯಕ್ರಮ ನಡೆಯಲಿದೆ.  

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್’ (James) ಚಿತ್ರದ ಪ್ರಿ ರಿಲೀಸ್ ಈವೆಂಟ್‌ಗೆ ಅದ್ದೂರಿ ತಯಾರಿಗಳು ನಡೆಯುತ್ತಿವೆ. ಪುನೀತ್‌ ರಾಜ್‌ಕುಮಾರ್ ಅವರ ಆಸೆಯಂತೆ ಹೊಸಪೇಟೆಯಲ್ಲಿ (Hosapete ) ಸಿನಿಮಾ ಬಿಡುಗಡೆಯ ಪೂರ್ವಭಾವಿ ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ ಚಿತ್ರತಂಡ ದೊಡ್ಡ ಮಟ್ಟದಲ್ಲಿ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಈಗ ಬಂದಿರುವ ಮಾಹಿತಿ ಪ್ರಕಾರ ಮಾರ್ಚ್ 6ರಂದು ಕಾರ್ಯಕ್ರಮ ನಡೆಯಲಿದೆ ಎಂಬುದು. ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನೂ ಈ ಕಾರ್ಯಕ್ರಮಕ್ಕೆ ಟಾಲಿವುಡ್‌ನಿಂದ (Tollywood) ನಟರಾದ ಚಿರಂಜೀವಿ (Chiranjeevi), ಜ್ಯೂಎನ್‌ಟಿಆರ್ (Jr NTR) ಮುಂತಾದವರು ಆಗಮಿಸಲಿದ್ದಾರೆ ಎನ್ನುವ ಸುದ್ದಿಯೂ ಇದೆ. ಆದರೆ, ಚಿತ್ರತಂಡ ಮಾತ್ರ ಈ ಬಗ್ಗೆ ಅಧಿಕೃತವಾಗಿ ಹೇಳುತ್ತಿಲ್ಲ. ಬಹದ್ದೂರ್ ಚೇತನ್ ಕುಮಾರ್ (Chetan Kumar) ನಿರ್ದೇಶನದ, ಕಿಶೋರ್ ಪತ್ತಿಕೊಂಡ (Kishore Pathikonda) ನಿರ್ಮಾಣದ ಈ ಚಿತ್ರವನ್ನು ಪುನೀತ್‌ ರಾಜ್‌ಕುಮಾರ್ ಅವರ ಹುಟ್ಟುಹಬ್ಬಕ್ಕೆ (Birhday) ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆ ಆಗುತ್ತಿದೆ. ಈಗಾಗಲೇ ಬೇರೆ ಬೇರೆ ಭಾಷೆಗಳಿಗೂ ಚಿತ್ರವನ್ನು ಡಬ್ (Dubbing) ಮಾಡಲಾಗಿದೆ. 

Making of James Movie 2022: ಚಿತ್ರದ ಎಲ್ಲಾ ಫೈಟ್​ ಸೀನ್‌ಗಳು ಅಪ್ಪು ಸರ್ ಮೊಬೈಲ್​ನಲ್ಲಿತ್ತು: ಚೇತನ್‌ಕುಮಾರ್

ಹೀಗಾಗಿ ಚಿತ್ರದ ಪ್ರಿ ರಿಲೀಸ್ ಈವೆಂಟ್ ಅನ್ನು ಕೂಡ ಪ್ಯಾನ್ ಇಂಡಿಯಾ ಕಾರ್ಯಕ್ರಮವಾಗಿ ರೂಪಿಸಬೇಕ ಎಂಬುದು ಚಿತ್ರತಂಡದ ಗುರಿ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮಕ್ಕೆ ಬೇರೆ ಬೇರೆ ಭಾಷೆಗಳಿಂದಲೂ ತಾರೆಗಳು ಆಗಮಿಸುವ ಸಾಧ್ಯತೆಗಳಿವೆ. 'ಜೇಮ್ಸ್' ಚಿತ್ರದ 'ಪವರ್ ಪ್ಯಾಕ್ಡ್' 'ಟ್ರೇಡ್​ಮಾರ್ಕ್' (Trademark) ಹಾಡು ಮಹಾಶಿವರಾತ್ರಿ (Mahashivratri) ದಿನವಾದ ಮಾರ್ಚ್ 1ರಂದು ಬಿಡುಗಡೆಗೆಯಾಗಲಿದ್ದು, ಚಿತ್ರದಿಂದ ರಿಲೀಸ್‌ ಆಗುತ್ತಿರುವ ಮೊದಲ ಹಾಡು ಇದಾಗಿದೆ. ಬೆಳಗ್ಗೆ 11.11ಕ್ಕೆ 'ಟ್ರೇಡ್ ಮಾರ್ಕ್' ಹಾಡು ಪಿಆರ್​ಕೆ ಆಡಿಯೋ ಮೂಲಕ ಬಿಡುಗಡೆಯಾಗಲಿದೆ. ಮಾರ್ಚ್ 17ಕ್ಕೆ ಅಪ್ಪು ಹುಟ್ಟುಹಬ್ಬದ ದಿನ ಸಿನಿಮಾ ತೆರೆ ಮೇಲೆ ಬರಲಿದ್ದು, ಈ ಸಿನಿಮಾದಲ್ಲಿ ಅಪ್ಪುನನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.



'ಜೇಮ್ಸ್' ಚಿತ್ರತಂಡದಿಂದ ಈಗಾಗಲೇ ಎರಡು ಹೊಸ ಸುದ್ದಿಗಳು ಹೊರ ಬಂದಿವೆ. ಅಪ್ಪು ಹುಟ್ಟಿದ ದಿನದಂದೇ ಈ ಸಿನಿಮಾ ರಿಲೀಸ್ ಪಕ್ಕಾ ಎಂದು ಘೋಷಣೆ ಮಾಡಿದೆ. ಅದಕ್ಕೂ ಮುನ್ನ ಟ್ರೇಲರ್ (Trailer) ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. 'ಜೇಮ್ಸ್' ಚಿತ್ರದ ಮೊದಲ ಸಾಂಗ್​ ಬಿಡುಗಡೆ ಮಾಡುತ್ತಿದ್ದೇವೆ. 'ಟ್ರೇಡ್​ಮಾರ್ಕ್'​ ಹಾಡನ್ನು 5 ಗಾಯಕರು ಹಾಡಿದ್ದಾರೆ. ಫೋಟೋ ಮೇಲೆ ಲಿರಿಕ್ಸ್​ ಹಾಕಿ ರಿಲೀಸ್​ ಮಾಡುವ ಹಾಗೆ ರೆಗ್ಯುಲರ್​ ಆಗಿ ಇದನ್ನು ರಿಲೀಸ್ ಮಾಡಲ್ಲ. ತುಂಬ ವಿಶೇಷವಾದ ಕಲಾವಿದರು ಇದರಲ್ಲಿ ಪರ್ಫಾರ್ಮ್​ ಮಾಡಿದ್ದಾರೆ. ಅದರ ಜೊತೆಗೆ ಮೇಕಿಂಗ್​ ವಿಡಿಯೋ ಕೂಡ ಇರಲಿದೆ.

Puneeth James Teaser: 'ಜೇಮ್ಸ್ ಸಿನಿಮಾ ಮಾಸ್ಟರ್‌ಪೀಸ್​ ಸಿನಿಮಾವಾಗುತ್ತೆ' ಎಂದ ಡಾರ್ಲಿಂಗ್ ಪ್ರಭಾಸ್!

ಮಾ.1ರಂದು ಎಲ್ಲ ಮಾಹಿತಿ ತಿಳಿಯಲಿದೆ. ಇದು ಪವರ್​ಫುಲ್​ ರ್ಯಾಪ್​ ಸಾಂಗ್​. ಅಭಿಮಾನಿಗಳಿಗೆ ಇದು ಹೆಚ್ಚು ಇಷ್ಟ ಆಗಲಿದೆ' ಎಂದು ನಿರ್ದೇಶಕ ಚೇತನ್​ ಕುಮಾರ್ ಹೇಳಿದ್ದು, ಈ ಮೂಲಕ ಅಭಿಮಾನಿಗಳ​ ಕುತೂಹಲವನ್ನು ಹೆಚ್ಚಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯಲ್ಲಿಯೂ ಈ ಹಾಡು ಬಿಡುಗಡೆಯಾಗಲಿದೆ. 'ಜೇಮ್ಸ್‌' ಸಿನಿಮಾವನ್ನು ಹೋಸಪೇಟೆ, ಗೋವಾ (Goa), ಹೈದರಾಬಾದ್ (Hyderabd) ಮತ್ತು ಕಾಶ್ಮೀರದಲ್ಲಿ (Kashmir) ಚಿತ್ರೀಕರಿಸಲಾಗಿದೆ. ಪುನೀತ್‌ಗೆ ನಾಯಕಿಯಾಗಿ ಕಾಲಿವುಡ್‌ ನಟಿ ಪ್ರಿಯಾ ಆನಂದ್ (Priya Anand) ನಟಿಸುತ್ತಿದ್ದಾರೆ. 'ಸ್ಟೈಲಿಶ್ ವಿಲನ್ (Vilain) ಪಾತ್ರದಲ್ಲಿ ಹಿರಿಯ ತಮಿಳು ನಟ ಶರತ್ ಕುಮಾರ್ (Sarathkumar) ಕಾಣಿಸಿಕೊಂಡಿದ್ದಾರೆ.