Asianet Suvarna News Asianet Suvarna News

ಲಕ್ಷ್ಮೀ ಪಾತ್ರದಲ್ಲಿ ರಮ್ಯಾ, ಡಾ.ರಾಜ್ ಪಾತ್ರದಲ್ಲಿ ಅಪ್ಪು; ನೆರವೇರಿಲ್ಲ ಪುನೀತ್ 'ನಾ ನಿನ್ನ ಮರೆಯಲಾರೆ' ಕನಸು

ಡಾ.ರಾಜ್ ಕುಮಾರ್ ಮತ್ತು ಲಕ್ಷ್ಮೀ ನಟನೆಯ ನಾ ನಿನ್ನ ಮರೆಯಲಾರೆ ಸಿನಿಮಾವನ್ನು ಮಾಡಬೇಕೆನ್ನುವುದು ಅಪ್ಪು ದೊಡ್ಡ ಆಸೆಯಾಗಿತ್ತು. ಆದರೆ ಆ ಕನಸು ಕನಸಾಗೆ ಉಳಿಯಿತು.   

puneeth rajkumar had a dream recreat naa ninna mareyalare film with ramya sgk
Author
First Published Sep 9, 2022, 10:06 AM IST

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಹೊಂದಿ ಒಂದು ವರ್ಷವೇ ಕಳೆಯುತ್ತಾ ಬಂತು. ಆದರೂ ಅಭಿಮಾನಿಗಳಿಗೆ ಅಪ್ಪು ಇನ್ನಿಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಪ್ರತಿ ದಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ನೆನೆಯುತ್ತಾರೆ. ಪ್ರತಿದಿನ ಸ್ಮರಣೆ ಮಾಡುತ್ತಾರೆ. ಪವರ್ ಸ್ಟಾರ್ ಇದ್ದದ್ದರೆ ಯಾವೆಲ್ಲಾ ಸಿನಿಮಾಗಳನ್ನು ಮಾಡುತ್ತಿದ್ದರು, ಏನೆಲ್ಲ ಕನಸುಗಳನ್ನು ಕಂಡಿದ್ದರು. ಆದರೆ ಅಪ್ಪು ಕಂಡ ಕನಸು ನನಸಾಗುವ ಮೊದಲೇ ಇಹಲೋಕ ತ್ಯಜಿಸಿದರು. ಅಭಿಮಾನಿಗಳ ಪಾಲಿನ ದೇವರಾಗಿರುವ ಅಪ್ಪು ಕಂಡ ಕನಸುಗಳಲ್ಲಿ ತನ್ನ ತಂದೆ ಡಾ. ರಾಜ್ ಕುಮಾರ್ ಅವರ ಕ್ಲಾಸಿಕ್ ಹಿಟ್ ನಾ ನಿನ್ನ ಮರೆಯಲಾರೆ ಸಿನಿಮಾವನ್ನು ರಿ ಕ್ರಿಯೇಟ್ ಮಾಡುವುದು. ಹೌದು, ಡಾ.ರಾಜ್ ಕುಮಾರ್ ಮತ್ತು ಲಕ್ಷ್ಮೀ ನಟನೆಯ ನಾ ನಿನ್ನ ಮರೆಯಲಾರೆ ಸಿನಿಮಾವನ್ನು ಮಾಡಬೇಕೆನ್ನುವುದು ಅಪ್ಪು ದೊಡ್ಡ ಆಸೆಯಾಗಿತ್ತು. ಆದರೆ ಆ ಕನಸು ಕನಸಾಗೆ ಉಳಿಯಿತು.  

ಈ ಬಗ್ಗೆ ನಟಿ ರಮ್ಯಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಾ ನಿನ್ನ ಮರೆಯಲಾರೆ 1976ರಲ್ಲಿ ಬಿಡುಗಡೆಯಾಯಿತು.  ಸೂಪರ್ ಹಿಟ್  ಸಿನಿಮಾ ನಾ ನಿನ್ನ ಮರೆಯಲಾರೆ ಪ್ರೇಕ್ಷಕರ ಫೇವರಿಟ್​ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರಕ್ಕೆ ಇಂದಿಗೂ ಸ್ಥಾನವಿದೆ. ಈ ಸಿನಿಮಾವನ್ನು ಈಗಿನ ಕಾಲಕ್ಕೆ ತಕ್ಕಂತೆ ರೀಕ್ರಿಯೇಟ್​ ಮಾಡಬೇಕು ಎಂಬುದು ಪುನೀತ್​ ರಾಜ್​ಕುಮಾರ್​ ಅವರ ದೊಡ್ಡ ಆಸೆಯಾಗಿತ್ತು. ಲಕ್ಷ್ಮಿ ಮಾಡಿದ್ದ ಪಾತ್ರದಲ್ಲಿ ರಮ್ಯಾ, ಅಣ್ಣಾವ್ರ ಪಾತ್ರದಲ್ಲಿ ಪುನೀತ್​ ಬಣ್ಣ ಹಚ್ಚಬೇಕಿತ್ತು. ಆದರೆ ಆ ಕನಸು ಕನಸಾಗಿಯೇ ಉಳಿಯುದಿದ್ದು ಬೇಸರದ ಸಂಗತಿ. ಈ ವಿಚಾರವನ್ನು ಡಾರ್ಲಿಂಗ್ ಕೃಷ್ಣ ಬಹಿರಂಗ ಪಡಿಸಿದ್ದಾರೆ. 

ಕೊನೆಗೂ ಗುಡ್ ನ್ಯೂಸ್ ಕೊಟ್ಟ ರಮ್ಯಾ; ಮತ್ತೆ ಚಿತ್ರರಂಗಕ್ಕೆ ಮೋಹಕತಾರೆ ವಾಪಾಸ್

ಪುನೀತ್​ ರಾಜ್​ಕುಮಾರ್​ ಸದ್ಯ ಲಕ್ಕಿ ಮ್ಯಾನ್​ ಸಿನಿಮಾ ಮೂಕ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಡಾರ್ಲಿಂಗ್​ ಕೃಷ್ಣ ಹೀರೋ ಆಗಿ ನಟಿಸಿರುವ ಲಕ್ಕಿ ಮ್ಯಾನ್ ಸಿನಿಮಾ ಇಂದು (ಸೆಪ್ಟಂಬರ್ 9) ರಿಲೀಸ್ ಆಗಿದೆ. ಈ ಸಿನಿಮಾ ಬಿಡುಗಡೆ ಸಮಯದಲ್ಲಿ ಸಿನಿಮಾ ಎಕ್ಸ್​ಪ್ರೆಸ್​ ಗೆ ನೀಡಿದ ಸಂದರ್ಶನದಲ್ಲಿ ಅವರು ‘ನಾ ನಿನ್ನ ಮರೆಯಲಾರೆ’ ರೀ-ಕ್ರಿಯೇಟ್​ ವಿಚಾರದ ಬಗ್ಗೆ ಹೇಳಿದ್ದಾರೆ. ಅಪ್ಪು ಈ ರೀತಿ ಕನಸು ಕಂಡಿದ್ದರು ಎಂದು ಬಹಿರಂಗ ಪಡಿಸಿದ್ದರು.

Puneeth Rajkumar Lucky Man ಒಪ್ಪದಿದ್ದರೆ ಈ ಚಿತ್ರ ಮಾಡುತ್ತಿರಲಿಲ್ಲ: ನಾಗೇಂದ್ರ ಪ್ರಸಾದ್‌

ಈ ಬಗ್ಗೆ ರಮ್ಯಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ಇದು ನಿಜ. ಅಪ್ಪು ಮತ್ತು ನಾನು ಈ ವಿಷಯದ ಬಗ್ಗೆ ಮಾತನಾಡಿದ್ದೆವು. ಅವರನ್ನು ನಾವು ತುಂಬ ಮಿಸ್​ ಮಾಡಿಕೊಳ್ಳುತ್ತೇವೆ’ ಎಂದು ರಮ್ಯಾ ಟ್ವೀಟ್​ ಮಾಡಿದ್ದಾರೆ. ಅಲ್ಲದೇ, ‘ಲಕ್ಕಿ ಮ್ಯಾನ್​’ ಚಿತ್ರತಂಡಕ್ಕೆ ಹಾಗೂ ಡಾರ್ಲಿಂಗ್​ ಕೃಷ್ಣ ಅವರಿಗೆ ರಮ್ಯಾ ಶುಭ ಹಾರೈಸಿದ್ದಾರೆ. ‘ಅಭಿ’, ‘ಅರಸು’, ‘ಆಕಾಶ್​’ ಸಿನಿಮಾದಲ್ಲಿ ರಮ್ಯಾ ಮತ್ತು ಪುನೀತ್​ ಜೊತೆಯಾಗಿ ನಟಿಸಿದ್ದರು. ಇಬ್ಬರ ನಡುವೆ ಉತ್ತಮ ಸ್ನೇಹ ಮನೆ ಮಾಡಿತ್ತು. ತೆರೆಮೇಲೆ ಇಬ್ಬರ ಕೆಮಿಸ್ಟ್ರಿ ಕೂಡ ಅಭಿಮಾನಿಗಳ ಮನಗೆದ್ದಿತ್ತು. ಅಲ್ಲದೆ ರಮ್ಯಾ ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾಗಲಿ ಎಂದುಸಹ ಪುನೀತ್​ ಬಯಸಿದ್ದರು. ಇದೀಗ ರಮ್ಯಾ ಮತ್ತೆ ಪಾವಾಸ್ ಆಗಿದ್ದಾರೆ.  

Follow Us:
Download App:
  • android
  • ios