ಆದರೂ ಕೆಲ ಅಭಿ​ಮಾ​ನಿ​ಗಳು ಹುಟ್ಟುಹಬ್ಬಕ್ಕೆ ವಿಶ್‌ ಮಾಡಲು ಮಾ.17ರಂದು ಬೆಳ​ಗ್ಗೆಯೇ ಬೆಂಗ​ಳೂ​ರಿನ ಸದಾ​ಶಿ​ವ​ನ​ಗ​ರ​ದ​ಲ್ಲಿ​ರುವ ಪುನೀ​ತ್‌​ರಾಜ್‌​ಕು​ಮಾರ್‌ ನಿವಾ​ಸಕ್ಕೆ ಆಗ​ಮಿ​ಸಿದ್ದು ಕಂಡು ಬಂತು. ಹೀಗೆ ಬರು​ತ್ತಿದ್ದ ಅಭಿ​ಮಾ​ನಿ​ಗ​ಳನ್ನು ಚದು​ರಿ​ಸುವ ಕೆಲ​ಸ ಮಾಡು​ತ್ತಿ​ದ್ದರು ಪೊಲೀಸ್‌ ಸಿಬ್ಬಂದಿ.

ಹೀಗೆ ಕೊರೋ​ನಾಗೂ ಕ್ಯಾರೆ ಎನ್ನದೆ ತಮ್ಮ ನೆಚ್ಚಿನ ನಟ​ನನ್ನು ನೋಡಲು ಮನೆಗೆ ಬಂದಿದ್ದ ಅಭಿ​ಮಾ​ನಿ​ಗ​ಳಿಗಿ ನಿರಾಸೆ ಎದು​ರಾ​ಯಿತು. ಯಾಕೆಂದರೆ ಮಾ.16ರ ರಾತ್ರಿಯೇ ಪುನೀತ್‌ ರಾಜ್‌​ಕು​ಮಾರ್‌ ಹೊರಗೆ ಹೋಗಿ​ದ್ದರು. ಪುನೀತ್‌ ರಾಜ್‌​ಕು​ಮಾರ್‌ ಮನೆ​ಯಲ್ಲಿ ಇಲ್ಲ​ದ್ದನ್ನು ಕಂಡು ಅಭಿ​ಮಾ​ನಿ​ಗಳು ಬೇಸ​ರ​ದಿಂದ ಮರ​ಳು​ತ್ತಿ​ದ್ದರು. ಕೆಲ​ವರು ಕೇಕ್‌ ತಂದಿ​ದ್ದರು. ಅವ​ರಿಗೆ ಪುನೀತ್‌ ಮನೆ​ಯಲ್ಲಿ ಇಲ್ಲ ಎಂದು ಹೇಳು​ವುದೇ ಪೊಲೀ​ಸ​ರಿಗೆ ದೊಡ್ಡ ಸವಾಲು ಆಗಿತ್ತು. ಈ ಕಾರ​ಣ​ಕ್ಕೆ ಪುನೀತ್‌ ರಾಜಕುಮಾರ್‌ ಜನ್ಮ ದಿನಕ್ಕೆ ಮನೆ ಮುಂದೆ ಯಾವ ಸಂಭ್ರ​ಮವೂ ಕಾಣ​ಲಿಲ್ಲ. ಕೊರೋನಾ ಎಫೆಕ್ಟ್ನಿಂದ ಅಭಿ​ಮಾ​ನಿ​ಗ​ಳಿ​ಗೆ ತೊಂದರೆ ಆಗಬಾ​ರದು ಎನ್ನುವ ಕಾರ​ಣಕ್ಕೆ ಮನೆ​ಯಲ್ಲೂ ಇಲ್ಲದೆ ಹೊರ ಊರಿಗೆ ಹೋಗಿ​ದ್ದರು ಪುನೀತ್‌.

ಈ ಕೆಲಸಕ್ಕಾಗಿ ಸಂಭಾವನೆಯನ್ನೇ ಪಡೆಯದ ಅಪ್ಪು, ನಿಜಕ್ಕೂ ಗ್ರೇಟ್!

ಆದರೂ ಬೆಳ​ಗ್ಗಿ​ನಿಂದಲೇ ಕಾಯು​ತ್ತಿದ್ದ ಅಪ್ಪು ಅಭಿ​ಮಾ​ನಿ​ಗ​ಳಿಗೆ ಪುನೀತ್‌ ಕುಟುಂಬದ ಸದ​ಸ್ಯರು ನಂದಿನ ಬ್ರಾಂಡ್‌ನ ಮೈಸೂರು ಪಾಕ್‌ ನೀಡಿದರು. ಪುನೀ​ತ್‌​ರಾ​ಜ್‌​ಕು​ಮಾರ್‌ ಅವ​ರನ್ನು ನೋಡಿಯೇ ಹೋಗು​ವು​ದಾಗಿ ವೀಲ್‌ ಚೇರ್‌​ನಲ್ಲಿ ಬಂದಿದ್ದ ವಿಶೇಷ ಅಭಿ​ಮಾ​ನಿ ತೇಜಸ್‌ ಅವ​ರಿಗೆ ಪುನೀತ್‌ ದರ್ಶನ ಸಿಗ​ಲಿಲ್ಲ.

ಸಣ್ಣ ವಯಸ್ಸಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಪುನೀತ್ ಮಗಳು ದೃತಿ...

ಇಂಟರ್‌ನೆಟ್‌ನಲ್ಲಿ ಪುನೀತ್‌ ಹವಾ

ಸೋಷಿಯಲ್‌ ಮೀಡಿಯಾದಲ್ಲಿ ಮಾತ್ರ ಪುನೀತ್‌ ಹುಟ್ಟುಹಬ್ಬ ಜೋರಾಗಿಯೇ ನಡೆಯಿತು. ಯುವರತ್ನ ಡೈಲಾಗ್‌ ಟೀಸರ್‌ಗೆ ಭಾರಿ ಮೆಚ್ಚುಗೆ ದೊರೆಯಿತು. ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸಿದರು. ಮಾಜಿ ಪ್ರಧಾನಮಂತ್ರಿ ಎಚ್‌ ಡಿ ದೇವೇ​ಗೌಡ, ರಾಜ​ಕಾ​ರಣಿ ವಿಜ​ಯೇಂದ್ರ, ನಟ​ರಾದ ಶಿವ​ರಾ​ಜ್‌​ಕು​ಮಾರ್‌, ದರ್ಶನ್‌, ಸುದೀಪ್‌, ಜಗ್ಗೇಶ್‌, ಶ್ರೀಮು​ರಳಿ, ಗಣೇಶ್‌, ನೆನ​ಪಿ​ರಲಿ ಪ್ರೇಮ್‌, ತಮಿಳು ನಟ ಆರ್ಯ, ಡಾಲಿ ಧನಂಜಯ್‌, ನಿರ್ದೇ​ಶಕರಾದ ಜೋಗಿ ಪ್ರೇಮ್‌, ಪ್ರಶಾಂತ್‌ ನೀಲ್‌, ಸಂತೋಷ್‌ ಆನಂದ್‌ರಾಮ್‌, ಸಿಂಪಲ್‌ ಸುನಿ, ನಟಿ ರಕ್ಷಿತಾ ಪ್ರೇಮ್‌, ನಿರ್ಮಾ​ಪಕ ವಿಜಯ್‌ ಕಿರ​ಗಂದೂ​ರು, ಕೆ ಪಿ ಶ್ರೀಕಾಂತ್‌, ‘ಯುವ​ರ​ತ್ನ’ ಚಿತ್ರದ ನಾಯಕಿ ಸಯ್ಯೇಷಾ ಸೇರಿ​ದಂತೆ ಹಲ​ವರು ಪವರ್‌ಸ್ಟಾರ್‌ ಹುಟ್ಟುಹಬ್ಬಕ್ಕೆ ಶುಭ ಕೋರಿ​ದರು. ಜತೆಗೆ ಅಭಿ​ಮಾ​ನಿ​ಗಳು ಕೂಡ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಪುನೀತ್‌ ಅಪ​ರೂ​ಪದ ಫೋಟೋ​ಗ​ಳನ್ನು ಹಂಚಿ​ಕೊ​ಳ್ಳುವ ಮೂಲಕ ಹುಟ್ಟುಹಬ್ಬಕ್ಕೆ ವಿಶ್‌ ಮಾಡಿ​ದರು.

"