ವಿಜಯಪುರ ಜಿಲ್ಲೆಗೆ ತಂದೆ ಜೊತೆ ಬಂದು ಹಾಡಿದ್ದ ಪುನೀತ್
* 2004ರಲ್ಲಿ ವಿಜಯಪುರದಲ್ಲಿ ನಡೆದ ಸಂಗೀತ ಸಂಜೆಯಲ್ಲಿ ಹಾಡಿದ್ದ ಪುನೀತ್
* ಪುನೀತ್ ಅಭಿಮಾನಿ ಆತ್ಮಹತ್ಯೆಗೆ ಯತ್ನ
* ಪುನೀತ್ ನಿಧನದಿಂದ ಕರುನಾಡಿಗೆ ನಷ್ಟ
ವಿಜಯಪುರ(ಅ.31): ಹೃದಯಾಘಾತದಿಂದ(Heart Attack) ನಿಧನ ಹೊಂದಿದ ಕನ್ನಡ ಚಿತ್ರರಂಗದ ಮೇರು ನಟ ಪುನೀತ್‌ರಾಜಕುಮಾರ ಅವರ ವಿಜಯಪುರ ಜಿಲ್ಲೆಯ ನಂಟು ಅವಿನಾಭಾವ. ಪುನೀತ್ ರಾಜಕುಮಾರ(Puneeth Rajkumar) ಅವರು ತಮ್ಮ ತಂದೆಯವರ ಜೊತೆಗೂಡಿ ವಿಜಯಪುರಕ್ಕೆ ಆಗಮಿಸಿ ಸಂಗೀತ ಸಂಜೆಯಲ್ಲಿ ಹಾಡುಗಳನ್ನು ಹಾಡಿ ಜನರ ಮನ ರಂಜಿಸಿದ್ದರು. ಮತ್ತೆ ಎರಡನೇ ಬಾರಿಗೆ ಪುನೀತ್ ರಾಜಕುಮಾರ ಅವರು ಜಿಲ್ಲೆಗೆ ಆಗಮಿಸುತ್ತಾರೆ ಎಂಬ ಜನರ ಆಶಾಗೋಪುರ ಕಳಚಿ ಬಿದ್ದಿದೆ.
"
ಸದ್ಭಾವನೆ ಟ್ರಸ್ಟ್ ವತಿಯಿಂದ ಡಾ. ರಾಜಕುಮಾರ(Dr Rajkumar) ಅವರನ್ನು 2004ರ ಮಾ.14 ರಂದು ವಿಜಯಪುರದ(Vijayapura) ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕಿಕ್ಕಿರಿದ ಅಭಿಮಾನಿ ದೇವರುಗಳ ಸನ್ನಿಧಿಯಲ್ಲಿ ಸಂಗೀತ ಸಂಜೆ(Music Concert) ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದು ಅಭೂತಪೂರ್ವ ಯಶಸ್ವಿ ಕಂಡಿತ್ತು. ಅವರ ತಂದೆಯವರ ಜೊತೆಗೆ ಪುನೀತ್ ರಾಜಕುಮಾರ ಕೂಡಾ ಆಗಮಿಸಿದ್ದರು. ಆಗ ಪುನೀತ್ ರಾಜಕುಮಾರ ಸಹ ವೀರಕನ್ನಡಿಗ ಚಿತ್ರದ ‘ಜೀವ ಕನ್ನಡ-ದೇಹ ಕನ್ನಡ’ ಎಂಬ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ್ದನ್ನು ವಿಜಯಪುರದ ಪುನೀತ ಅವರ ಅಭಿಮಾನಿಗಳು(Fans) ಇನ್ನೂ ಮರೆತಿಲ್ಲ.
ಅಪ್ಪು ವಿ ಮಿಸ್ ಯೂ, ವಿ ಲವ್ ಯೂ: ಕುಟುಂಬಸ್ಥರು ಕಣ್ಣೀರು
ಇಂತಹ ಕಾರ್ಯಕ್ರಮವನ್ನು ಮತ್ತೆ ಆಯೋಜನೆ(Organization) ಮಾಡಬೇಕು ಎಂಬ ಉದ್ದೇಶದಿಂದ ಸಂಜಯ ಸಬರದ ಕಳೆದ ತಿಂಗಳುಗಳ ಹಿಂದಷ್ಟೇ ಪುನೀತ್ ರಾಜಕುಮಾರ ಅವರನ್ನು ಭೇಟಿ ಮಾಡಿದ್ದರು. 2004ರಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮವನ್ನು ಸ್ಮರಿಸಿಕೊಂಡ ಅವರು ‘ಪುನಃ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡೋಣ, ನಮ್ಮ ತಂದೆಯವರು ಅಭಿಮಾನಿ ದೇವರುಗಳು ನೀಡುವ ಈ ಅಪೂರ್ವ ಉಡುಗೊರೆಯನ್ನು ಮುಂದುವರೆಸಿಕೊಂಡು ಹೋಗೋಣ, ಈ ಕಾರ್ಯ ವಿಜಯಪುರದಿಂದಲೇ ಪುನರಾಂಭಗೊಳ್ಳಲಿ ಎಂದು ಅತಿ ಆಸಕ್ತಿಯಿಂದ ಮಾತನಾಡಿದ್ದರು. ಇದಕ್ಕೆ ನಾವು ಕಾರ್ಯಕ್ರಮ ಆಯೋಜನೆಗೆ ಮಾನಸಿಕವಾಗಿ ಸಿದ್ಧವಾಗುತ್ತಿದ್ದೆವು. ಆದರೆ ವಿಧಿಯಾಟ ಪುನೀತ್ ರಾಜಕುಮಾರ ಅವರನ್ನು ಇನ್ನಿಲ್ಲದಂತೆ ಮಾಡಿರುವುದು ದುಃಖದ ಸಂಗತಿ ಎಂದು ಸಂಜಯ ಸಬರದ ಕಣ್ಣೀರು ಹರಿಸಿದರು.
ಕನ್ನಡಾಭಿಮಾನ(Kannada) ಮೂಡಿಸುವ ಚಿತ್ರಗಳನ್ನು ಮಾಡಿದ ಪುನೀತ್ ರಾಜಕುಮಾರ ಕನ್ನಡ ರಾಜ್ಯೋತ್ಸವ(Kannada Rajyotsava) ಇನ್ನೂ ಎರಡು ದಿನಗಳಿರುವಾಗಲೇ ಇಹಲೋಕ ತ್ಯಜಿಸಿದ್ದಾರೆ. ವಿಜಯಪುರದಲ್ಲಿಯೂ ಪುನೀತ್ ರಾಜಕುಮಾರ ಅವರಿಗೆ ವಿವಿಧ ಸಂಘಟನೆಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿವೆ.
ಪುನೀತ್ ನಿಧನ: ಅಭಿಮಾನಿ ಆತ್ಮಹತ್ಯೆಗೆ ಯತ್ನ
ಪವರ್ ಸ್ಟಾರ್(Power Star) ಪುನೀತ್ ರಾಜಕುಮಾರ ಕಾಲಿಕ ನಿಧನದ(Death) ಹಿನ್ನೆಲೆ ಮನನೊಂದು ಅಭಿಮಾನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದೇವರಹಿಪ್ಪರಗಿ ಪಟ್ಟಣದಲ್ಲಿ ಶನಿವಾರ ನಡೆದಿದೆ. ಶರಣಪ್ಪ ಅಮೋಘಿ ಬಿಸನಾಳ (24) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಶರಣಪ್ಪ ಬಿಸನಾಳ ಈತ ಪುನೀತ್ ಅವರ ಅಭಿಮಾನಿಯಾಗಿದ್ದು, 40 ಡಯಾಬಿಟಿಸ್(Diabetes) ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷಯ ತಿಳಿದ ತಕ್ಷಣ ಕುಟುಂಬಸ್ಥರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ(Government Hospital) ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಬಿಎಲ್‌ಡಿಇ ಖಾಸಗಿ ಆಸ್ಪತ್ರೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ದೇವರಹಿಪ್ಪರಗಿ ಪೊಲೀಸ್(Police) ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪತಿಗೆ ಪೂಜೆ ಸಲ್ಲಿಸಿದ ಅಶ್ವಿನಿ; ಮಂಗಳವಾರ ಹಾಲು-ತುಪ್ಪ ಕಾರ್ಯ
ಪುನೀತ್ ರಾಜಕುಮಾರ ಅವರ ನಿಧನಕ್ಕೆ ಇಂಡಿ ಪಟ್ಟಣದಲ್ಲಿ ಅಭಿಮಾನಿಗಳು ಶ್ರದ್ಧಾಂಜಲಿ ಸಭೆ ನಡೆಸಿದರು
ಪುನೀತ್ ನಿಧನದಿಂದ ಕರುನಾಡಿಗೆ ನಷ್ಟ
ಕನ್ನಡ ಚಿತ್ರರಂಗದ(Sandalwood) ಪವರ್‌ಸ್ಟಾರ್ ಪುನೀತ್‌ರಾಜಕುಮಾರ ಅವರು ಅಕಾಲಿಕ ನಿಧನ ಹೊಂದಿರುವ ನಿಮಿತ್ತ ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಭಿಮಾನಿಗಳು ಹಾಗೂ ಇಂಡಿ ತಾಲೂಕಿನ ಸಮಸ್ತ ನಾಗರಿಕರ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಸಿ, ಪುನೀತ್ ರಾಜಕುಮಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿಕೋರಿ ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ಅನೀಲ ಜಮಾದಾರ, ದೇವೇಂದ್ರ ಕುಂಬಾರ, ಕಾಂಗ್ರೆಸ್‌ಯುವ ಘಟಕದ ಅಧ್ಯಕ್ಷ ಅವಿನಾಶ ಬಗಲಿ, ಧರ್ಮು ವಾಲಿಕಾರ, ಅನೀಲಗೌಡ ಬಿರಾದಾರ, ಪುನೀತ್ ರಾಜಕುಮಾರ ನಿಧನದಿಂದ ಕರುನಾಡಿಗೆ(Karnataka) ತುಂಬಲಾರದ ನಷ್ಟವಾಗಿದೆ. ಕನ್ನಡ ಚಿತ್ರರಂಗಕ್ಕೆ ಅಷ್ಟೇ ಅಲ್ಲದೆ,ನಾಡಿಗೆ ನಷ್ಟವಾಗಿದೆ. ಚಿತ್ರರಂಗದಲ್ಲಿ ಧ್ರುವತಾರೆಯಂತೆ ಇದ್ದಿರುವ ಅವರು, ಕೇವಲ ಚಿತ್ರರಂಗಕ್ಕೆ ಸೀಮಿತವಾಗಿರದೇ, ಸಮಾಜ ಸೇವೆಯಲ್ಲಿಯೂ(Social service) ತೆರೆಮರೆಯ ಕಾಯಿಂತೆ ಕೆಲಸ ಮಾಡಿ ಹಲವು ಕುಟುಂಬಗಳಿಗೆ ಆಶ್ರಯದಾತನಾಗಿದ್ದರು. ಚಿತ್ರರಂಗದ ಮೂಲಕ ಎಷ್ಟೇ ಎತ್ತರಕ್ಕೆ ಬೆಳೆದರು ಪ್ರತಿಯೊಬ್ಬರ ಜತೆ ಹಸನ್ಮುಕಿಯಾಗಿ ಬೆರೆಯುವ ವ್ಯಕ್ತಿಯಾಗಿದ್ದರು. ನಾಡು, ನುಡಿ ವಿಷಯದಲ್ಲಿ ಅನೇಕ ಸಲಹೆ,ಸೂಚನೆಗಳನ್ನು ನೀಡುತ್ತಿದ್ದು, ತಂದೆಯ ಮಾರ್ಗದಲ್ಲಿ ನಡೆದು ಕನ್ನಡ ನಾಡು,ನುಡಿ ಕಟ್ಟುವಲ್ಲಿ ಶ್ರಮಿಸಿದ್ದಾರೆ. ಅವರ ಅಗಲಿಕೆ ಕನ್ನಡನಾಡಿಗೆ ತುಂಬಲಾರದ ನಷ್ಟವಾಗಿದೆ. ಭಗವಂತ(God) ಅವರ ಕುಟುಂಬಕ್ಕೆ ದುಖ ಭರಿಸುವ ಶಕ್ತಿ ನೀಡಲಿ,ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸಂತಾಪ(Condolences) ಸೂಚಿಸಿದರು.
ಈ ವೇಳೆ ಜಟ್ಟೆಪ್ಪ ರವಳಿ, ಭೀಮನಗೌಡ ಪಾಟೀಲ, ಬುದ್ದುಗೌಡ ಪಾಟೀಲ,ಮಹೇಶ ಹೊನ್ನಬಿಂದಗಿ, ಸಿದ್ದು ಬೆಲ್ಯಾಳ,ಸೋಮಶೆಖರ ದೇವರ, ಇಲಿಯಾಸ ಬೊರಾಮಣಿ, ಹುಚ್ಚಪ್ಪ ತಳವಾರ, ರಾಜು ಕುಲಕರ್ಣಿ,ಜಹಾಂಗಿರ ಸೌದಾಗರ, ಶ್ರೀಶೈಲ ಪೂಜಾರಿ, ಯಮುನಾಜಿ ಸಾಳುಂಕೆ, ಸಂಜೀವ ಪವಾರ,ಸುನೀಲಗೌಡ ಬಿರಾದಾರ, ಉಮೇಶ ದೇಗಿನಾಳ, ಶಿವು ಬಿಸನಾಳ, ಸುಧೀರ ಕರಕಟ್ಟಿ ಸೇರಿದಂತೆ ಅಭಿಮಾನಿಗಳು ಶ್ರದ್ದಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.