ಇತ್ತೀಚೆಗೆ ಅವರು ಹಾಡಿದ್ದು ‘ಅಲ್ಲೇಡ್ರಾಅಲ್ಲೇ ಬಹುಮಾನ’ ಚಿತ್ರಕ್ಕಾಗಿ. ತ್ರಿವೇಣಿ ಕೃಷ್ಣ ಹಾಗೂ ಶೌರ್ಯ ಜೋಡಿಯಾಗಿ ಅಭಿನಯಿಸಿರುವ ಚಿತ್ರವಿದು.

ಈ ಚಿತ್ರದಲ್ಲಿ ಬರುವ ‘ನಾಚಿಕೆಯು ಇನ್ನು ನನ್ನೆದುರು ಏಕೆ ಈ ಪ್ರಾಯ ಚಾಟಿ ಬೀಸಲು’ ಎಂದು ಸಾಗುವ ಹಾಡಿಗೆ ಪುನೀತ್‌ ರಾಜ್‌ಕುಮಾರ್‌ ಧ್ವನಿಯಾಗಿದ್ದಾರೆ. ಅಪ್ಪು ಕಂಠದಲ್ಲಿ ಈ ರೊಮ್ಯಾಂಟಿಕ್‌ ಹಾಡು ಚೆನ್ನಾಗಿ ಮೂಡಿ ಬಂದಿದ್ದು, ಕೇಳುಗರಿಗೆ ತುಂಬಾ ಇಷ್ಟವಾಗುತ್ತದೆಂಬ ನಂಬಿಕೆ ಚಿತ್ರತಂಡದ್ದು. ಈ ಹಾಡನ್ನು ಕುಲುಮನಾಲಿ, ಹಿಮಾಚಲ ಪ್ರದೇಶದ ಸುತ್ತಮುತ್ತ ಕಿರಣ್‌ ಹಂಪಾಪುರ ಹಾಗೂ ಸತೀಶ್‌ ರಾಜೇಂದ್ರನ್‌ ಛಾಯಾಗ್ರಾಹಣದಲ್ಲಿ, ನಾಗರಾಜ್‌ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಣ ಮಾಡಲಾಗಿದೆ.

ಪಂಚ್‌ ಶಕ್ತಿ ಕಿರುಚಿತ್ರ ಶೀಘ್ರದಲ್ಲೇ ಬಿಡುಗಡೆ!

ರತ್ನತೀರ್ಥ ಈ ಚಿತ್ರದ ನಿರ್ದೇಶಕರು. ಬಿಜೆ ಪ್ರಶಾಂತ್‌ ಈ ಚಿತ್ರ ನಿರ್ಮಿಸಿದ್ದಾರೆ. ರಘು ಶಾಸ್ತ್ರಿ ಸಾಹಿತ್ಯ ಬರೆದಿದ್ದು, ವಿಜಯರಾಜ್‌ ಸಂಗೀತ ನೀಡಿದ್ದಾರೆ. ಶಂಕರ್‌ ಅಶ್ವತ್‌್ಥ, ರಘು ರಾಮನಕೊಪ್ಪ, ಕುರಿಬಾಂಡ್‌ ರಂಗಸ್ವಾಮಿ, ವಿಜಯ್‌ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.