ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಪುಕ್ಸಟ್ಟೆಲೈಫು ಚಿತ್ರದ ಪ್ರಮೋಷನಲ್‌ ವಿಡಿಯೋಗೆ ಭಾರಿ ಮೆಚ್ಚುಗೆ

‘ಪುಕ್ಸಟ್ಟೆಲೈಫು, ಪುರುಸೊತ್ತೇ ಇಲ್ಲ’ ಸಿನಿಮಾ ಸೆ.24 ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರದ ಪ್ರೊಮೋಷನ್‌ಗಾಗಿ ಸಂಚಾರಿ ವಿಜಯ್‌ ಅವರ ಅನಿಮೇಶನ್‌ ವೀಡಿಯೋ ಮಾಡಲಾಗಿದೆ.

ಸ್ವರ್ಗಲೋಕದಲ್ಲಿರುವ ಸಂಚಾರಿ ವಿಜಯ್‌ ಅವರು ಡಾ. ರಾಜ್‌ ಕುಮಾರ್‌, ವಿಷ್ಣುವರ್ಧನ್‌, ಅಂಬರೀಶ್‌, ಶಂಕರ್‌ನಾಗ್‌, ಬಿ ವಿ ಕಾರಂತ್‌, ಗಿರೀಶ್‌ ಕಾರ್ನಾಡ್‌ ಮತ್ತಿತರರ ಸಮ್ಮುಖದಲ್ಲಿ ತಾನು ನಾಯಕನಾಗಿರುವ ‘ಪುಕ್ಸಟ್ಟೆಲೈಫ್‌’ ಚಿತ್ರದ ಬಿಡುಗಡೆಯ ಸುದ್ದಿ ತಿಳಿಸುತ್ತಾರೆ.

ಧ್ರುವ ಸರ್ಜಾ ಚಿತ್ರಕ್ಕೆ ಇದುವರೆಗೆ ಸಿನಿಮಾದಲ್ಲಿ ನಟಿಸಿರದ ನಾಯಕಿ ಹುಡುಕಾಟ

ಇದಕ್ಕೆ ಹಿರಿಯ ನಟರು ಬೆಂಬಲ ನೀಡುವಂತೆ ವಿಡಿಯೋ ಚಿತ್ರಿಸಲಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಆಗಿದೆ. ಅರವಿಂದ ಕುಪ್ಲೀಕರ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾಗರಾಜ್‌ ಸೋಮಯಾಜಿ ನಿರ್ಮಿಸಿದ್ದಾರೆ.

‘ಪುಕ್ಸಟ್ಟೆಲೈಫು’ ಚಿತ್ರದ ಟ್ರೇಲರ್‌ ಬಿಡುಗಡೆ ಸುದ್ದಿಗೋಷ್ಠಿಯಲ್ಲಿ ಸಂಚಾರಿ ವಿಜಯ್‌ ಎಂಬ ಹೆಸರಿದ್ದ ಕುರ್ಚಿ ಮಧ್ಯಭಾಗದಲ್ಲಿತ್ತು. ತೆರೆಯ ಮೇಲೆ ಮೂಡಿದ ಟ್ರೇಲರ್‌ನಲ್ಲಿ ವಿಜಯ್‌ ನಟನೆ ವಿಜೃಂಭಿಸಿತ್ತು. ಕಾರ್ಯಕ್ರಮದುದ್ದಕ್ಕೂ ಆ ಖಾಲಿಯ ಕುರ್ಚಿ ಸೃಷ್ಟಿಸಿದ ಶೂನ್ಯ ಒಂದೆಡೆ, ಅವರೊಂದಿಗಿನ ನೆನಪಿನ ಫಲಕು ಮತ್ತೊಂದೆಡೆ.

ಪದ್ಮಶ್ರೀ ಪುರಸ್ಕೃತ ಕಲಾವಿದೆ ಬಿ ಜಯಶ್ರೀ, ‘ವಿಜಯ್‌ ಚೇತನ ಆಗಿದ್ದಾರೆ ಅಂದುಕೊಂಡು, ಅವರ ಹೆಸರಲ್ಲಿ ಒಳ್ಳೊಳ್ಳೆ ಕೆಲಸ ಮಾಡೋಣ’ ಎಂದಿದ್ದರು.

ರಂಗಾಯಣ ರಘು, ‘ಸಂಚಾರಿ ವಿಜಯ್‌ ಯಾವ ರೀತಿ ಪಾತ್ರದೊಳಗೆ ಪಾತ್ರವಾಗುತ್ತಿದ್ದ ಅಂದರೆ ಆತನ ನಟನೆಯ ‘ಅವನಲ್ಲ, ಅವಳು’ ಚಿತ್ರ ನೋಡಿ ದೆಹಲಿಯ ರಾಷ್ಟ್ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದವರೊಬ್ಬರು ತೃತೀಯ ಲಿಂಗಿಯೊಬ್ಬರಿಂದಲೇ ಈ ನಟನೆ ಮಾಡಿಸಲಾಗಿದೆ ಅಂತ ವಾದಕ್ಕೆ ನಿಂತಿದ್ದರು. ಕೊನೆಗೆ ಆ ಹುಡುಗ ನಮ್ಮ ಸಂಚಾರಿ ತಂಡದವನು, ತೃತೀಯ ಲಿಂಗಿಯಲ್ಲ ಅಂತ ಮನದಟ್ಟು ಮಾಡಲು ಸಾಕಾಗಿ ಹೋಯ್ತು’ ಎಂದಿದ್ದರು.