ನವೀನ್‌ ದ್ವಾರಕಾನಾಥ್‌ ನಿರ್ದೇಶನ ಹಾಗೂ ನವೀನ್‌ ರಾವ್‌ ನಿರ್ಮಾಣದ ಸಿನಿಮಾ ಇದು. ಸದ್ಯದಲ್ಲೇ ಚಿತ್ರಕ್ಕೆ ಶೂಟಿಂಗ್‌ ಆರಂಭವಾಗಲಿದೆ.

‘ಕಳೆದ ಹಲವು ವರ್ಷಗಳಿಂದ ಸಾಕ್ಷ್ಯ ಚಿತ್ರಗಳನ್ನು ಮಾಡುತ್ತಿದ್ದೆ., ನಾಟಕ, ರಂಗಭೂಮಿಯಲ್ಲಿಯೂ ತೊಡಗಿಸಿಕೊಂಡಿದ್ದೆ. ಈಗ ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದೇನೆ. ನಾನು ಮತ್ತು ನಿರ್ಮಾಪಕರು ಬಾಲ್ಯದ ಸ್ನೇಹಿತರು. ಒಂದು ವರ್ಷದ ಹಿಂದೆಯೇ ಹುಟ್ಟಿಕೊಂಡ ಕತೆ ಇದು. ಈಗ ಅದು ಅದ್ದೂರಿಯಾಗಿ ಚಾಲನೆ ತೆಗೆದುಕೊಳ್ಳುತ್ತಿದೆ’ ಎಂದರು ನಿರ್ದೇಶಕರು.

ಆದಿ ವಿತ್ ನಿಧಿಮಾ; ಇದು 'ದಿಯಾ'-'ಲವ್‌ ಮಾಕ್ಟೇಲ್' ಕಾಂಬಿನೇಷನ್! 

ಇತ್ತೀಚಿನ ದಿನಗಳಲ್ಲಿ ಏನೇ ಕೆಲಸ ಮಾಡಬೇಕೆಂದರೂ ಆರಂಭದಲ್ಲಿ ನಾವು ಅದಕ್ಕೆ ಸಂಬಂಧಪಟ್ಟಂತೆ ನೋಂದಣಿ ಮಾಡಿಸಲೇಬೇಕು. ಹಾಗೆ ನೋಂದಣಿ ಮಾಡಿಸಿಕೊಳ್ಳುವವರ ಕತೆಯಾಗಿದ್ದರಿಂದ ಚಿತ್ರಕ್ಕೆ ‘ಫಾರ್‌ ರಿಜಿಸ್ಪ್ರೇಷನ್‌’ ಎನ್ನುವ ಹೆಸರು ಇಡಲಾಗಿದೆಯಂತೆ. ತಬಲ ನಾಣಿ ಅವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿರುವುದು ವಿಶೇಷ. ಜತೆಗೆ ಚಿತ್ರದಲ್ಲಿ ಒಂದು ಮುಖ್ಯ ಪಾತ್ರ ಕೂಡ ಮಾಡುತ್ತಿದ್ದಾರೆ.

ಒಳ್ಳೆಯ ನಟಿ ಅನ್ನಿಸಿಕೊಳ್ಳುವುದೇ ನನ್ ಕನಸು; ಮಿಂಚು ಕಂಗಳ ಮಿಲನ ನಾಗರಾಜ್ 

ಚಿತ್ರದ ನಾಯಕಿ ಮಿಲನ ನಾಗರಾಜ್‌ ಚಿತ್ರದ ಶೀರ್ಷಿಕೆ ಕೇಳಿಯೇ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರಂತೆ. ಸದ್ಯದ ಜನರೇಷನ್‌ ಕತೆ ಹೊಂದಿಕೆ ಆಗುತ್ತದೆ. ಇಡೀ ತಂಡವೂ ಒಂದು ಕಾರ್ಪೋರೇಟ್‌ ತಂಡದ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂಬುದು ಮಿಲನಾ ನಾಗರಾಜ್‌ ಮಾತುಗಳು. ಸುಧಾರಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ರಾಘು ರಾಮನಕೊಪ್ಪ ಮುಂತಾದವರು ಚಿತ್ರದ ಇತರೆ ಪಾತ್ರಧಾರಿಗಳು. ವಿವೇಕ್‌ ಕ್ಯಾಮೆರಾ, ಹರೀಶ್‌ ಸಂಗೀತ ಮಾಡಿದ್ದಾರೆ. ಚೇತನ್‌ ಕುಮಾರ್‌, ಕವಿರಾಜ್‌, ನಾಗಾರ್ಜುನ್‌ ಶರ್ಮಾ ಹಾಡುಗಳಿಗೆ ಸಾಹಿತ್ಯ ರಚನೆ ಮಾಡಿದ್ದಾರೆ.