Asianet Suvarna News Asianet Suvarna News

ಸಿನಿಮಾ ರಿಲೀಸ್‌ಗೆ ಚಿತ್ರತಂಡಗಳ ಪೈಪೋಟಿ; ಯಾರು ಮೊದಲು, ಯಾರು ಕೊನೆ..

ಅನ್‌ಲಾಕ್‌ ಆಗುತ್ತಿದ್ದಂತೆ ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್ ಮಾಡುತ್ತಿರುವ ನಿರ್ಮಾಪಕರು. ಯಾರ ಸಿನಿಮಾ ಫಸ್ಟ್ ರಿಲೀಸ್‌ ಆದ್ರೆ ಕಲೆಕ್ಷನ್ ಸೂಪರ್?

Producers in hurry to finalise release date for Kannada big budget films vcs
Author
Bangalore, First Published Jun 26, 2021, 9:37 AM IST
  • Facebook
  • Twitter
  • Whatsapp

ಒಂದು ಕಡೆ ಶೂಟಿಂಗ್ ಕೆಲಸಗಳು, ಮತ್ತೊಂದು ಕಡೆ ಪೋಸ್‌ಟ್ ಪ್ರೊಡಕ್ಷನ್ ಕೆಲಸಗಳ ನಡುವೆ ಬಿಡುಗಡೆಯ ದಿನ ಬುಕಿಂಗ್ ಕೂಡ ಜೋರಾಗಿದೆ. ಶೂಟಿಂಗ್ ಮುಗಿಸಿಕೊಂಡಿರುವ ಸಿನಿಮಾಗಳು ಯಾವ ದಿನ ತೆರೆಗೆ ಬರಬೇಕು, ಬೇರೆ ಚಿತ್ರಗಳ ಪೈಪೋಟಿ ಇವೆಯೇ, ಮಳೆ ಇರುತ್ತದೆಯೇ ಎಂಬಿತ್ಯಾದಿ ಲೆಕ್ಕಾಚಾರಗಳನ್ನು ಹಾಕಿಕೊಂಡೇ ತಮ್ಮ ಚಿತ್ರಗಳನ್ನು ಇಂಥ ದಿನ, ಇಂಥ ತಿಂಗಳು ಬಿಡುಗಡೆ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡುತ್ತಿದ್ದಾರೆ. ಆ ಮೂಲಕ ಬಿಡುಗಡೆ ದಿನಾಂಕಗಳನ್ನು ಪರೋಕ್ಷವಾಗಿ ಬ್ಲಾಕ್ ಮಾಡಿಕೊಳ್ಳುತ್ತಿವೆ.

ಸದ್ಯ ಈಗಿನ ಲೆಕ್ಕಾಚಾರದ ಪ್ರಕಾರ ಶಿವರಾಜ್‌ಕುಮಾರ್ ‘ಭಜರಂಗಿ 2’ ಹಾಗೂ ಸುದೀಪ್ ಅವರ ‘ವಿಕ್ರಾಂತ್ ರೋಣ’ ಚಿತ್ರಗಳು ಆಗಸ್ಟ್‌ ತಿಂಗಳಲ್ಲಿ ಬರುವ ಸಾಧ್ಯತೆಗಳಿವೆ. ನಂತರ ದುನಿಯಾ ವಿಜಯ್ ‘ಸಲಗ’, ‘ಕೋಟಿಗೊಬ್ಬ 3’ ಚಿತ್ರಗಳನ್ನು ಯಾವಾಗ ತೆರೆಗೆ ತರಬೇಕು ಎನ್ನುವ ಲೆಕ್ಕಾಚಾರಗಳು ಆ ಚಿತ್ರಗಳ ನಿರ್ಮಾಪಕರು ಹಾಕುತ್ತಿದ್ದಾರೆ.

ಈ ಚಿತ್ರಗಳ ಜತೆಗೆ ರಮೇಶ್ ಅರವಿಂದ್ ಅವರ ‘100’, ಗಣೇಶ್ ನಟನೆಯ ‘ಗಾಳಿಪಟ 2’, ಸತೀಶ್ ನೀನಾಸಂ ಅವರ ‘ಪೆಟ್ರೋಮ್ಯಾಕ್ಸ್’ ಚಿತ್ರಗಳೂ ಸಹ ಶೂಟಿಂಗ್ ಮುಗಿಸಿವೆ. ಈ ಚಿತ್ರಗಳ ನಿರ್ಮಾಪಕರು ಕೂಡ ತಮ್ಮ ಚಿತ್ರಮಂದಿರಗಳಿಗೆ ಬರುವ ಮುಹೂರ್ತದ ದಿನಕ್ಕಾಗಿ ಕಾಯುತ್ತಿದ್ದು, ಯಾವ ದಿನ, ಯಾವ ತಿಂಗಳು ತಮ್ಮ ಚಿತ್ರಗಳಿಗೆ ಬುಕ್ ಮಾಡಿಕೊಳ್ಳಬೇಕು ಎನ್ನುವ ಯೋಚನೆಯಲ್ಲಿದ್ದಾರೆ.

Follow Us:
Download App:
  • android
  • ios