Dr Rajkumar ಅಂತ್ಯಸಂಸ್ಕಾರದ ಮರುದಿನ ಹೊಸ ಕಾರ್‌ ಪೂಜೆಗೆ ಲೀಲಾವತಿ ದೇವಸ್ಥಾನಕ್ಕೆ ಹೋದ್ರು : NR Ramesh

ಖ್ಯಾತ ನಟಿ ಲೀಲಾವತಿ ಅವರ ವೈಯಕ್ತಿಕ ವಿಷಯಗಳ ಬಗ್ಗೆ ಅನೇಕರಿಗೆ ಗೊಂದಲ ಇದೆ. ಡಾ ರಾಜ್‌ಕುಮಾರ್‌ಗೂ ಲೀಲಾವತಿಗೂ ಸಂಬಂಧ ಇದೆ ಅಂತ ಕೆಲವರು ಅಂದುಕೊಂಡಿದ್ದರು. ಇದೆಲ್ಲ ಸುಳ್ಳು ಎಂದು ನಿರ್ಮಾಪಕ ಎನ್‌ಆರ್‌ ರಮೇಶ್‌ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. .
 

producer nr ramesh speaks about leelavathi dr rajkumar relationship

ನಟಿ ಲೀಲಾವತಿ ಅವರ ಪತಿ ಮಹಾಲಿಂಗ ಭಾಗವತ, ವಿನೋದ್‌ ರಾಜ್‌ ತಂದೆ ಮಹಾಲಿಂಗ ಭಾಗವತ ಎಂದು ನಿರ್ಮಾಪಕ ಎನ್‌ ಆರ್‌ ರಮೇಶ್‌ ಅವರು ಮಾಧ್ಯಮದ ಮುಂದೆ ಬಂದು ದಾಖಲೆಸಮೇತ ಮಾತನಾಡಿದ್ದಾರೆ. ಕಳೆದ 50 ವರ್ಷಗಳಿಂದ ಡಾ ರಾಜ್‌ಕುಮಾರ್‌ಗೆ ಅಂಟಿಕೊಂಡಿದ್ದ ಕಳಂಕವನ್ನು ಅವರು ತೊಡೆದು ಹಾಕುವ ಕೆಲಸ ಮಾಡಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಪತ್ರಕರ್ತ ಬಿ ಗಣಪತಿ ಅವರಿಗೆ ನೀಡಿದ ಯುಟ್ಯೂಬ್‌ ವಿಡಿಯೋ ಸಂದರ್ಶನದಲ್ಲಿ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.

ಎನ್‌ ಆರ್‌ ರಮೇಶ್‌ ಏನಂದ್ರು?
“ಮಹಾಲಿಂಗ ಭಾಗವತರ ಮೂರನೇ ಪತ್ನಿಯೇ ಲೀಲಾವತಿ. ಈ ವಿಷಯವನ್ನು ಅವರು ಎಲ್ಲಿಯೂ ರಿವೀಲ್‌ ಮಾಡಿಲ್ಲ. ಬೇರೆ ಬೇರೆ ಉದ್ದೇಶಕ್ಕೆ ಈ ವಿಷಯವನ್ನು ಮುಚ್ಚಿಟ್ಟರು. ಮಹಾಲಿಂಗ ಅವರ ಆಸ್ತಿ ಲೀಲಾವತಿಗೆ ಸಿಕ್ಕಿದೆ” ಎನ್‌ಆರ್‌ ರಮೇಶ್‌ ಅವರು ಹೇಳಿದ್ದಾರೆ. 


ವಿದೇಶಿ ಪ್ರವಾಸ ಮಾಡಲ್ಲ 
“ವೈಯಕ್ತಿಕ ವಿಷಯಗಳ ಬಗ್ಗೆ ಲೀಲಾವತಿ ಅವರು ಗೌಪ್ಯತೆ ಕಾಯ್ದುಕೊಂಡಿದ್ದರು. ಬೇರೆ ಬೇರೆ ಉಪಯೋಗ ಪಡೆಯಲು, ಬೇರೆ ಬೇರೆ ರಾಜ್ಯದಲ್ಲಿ ಗೊಂದಲ ಮೂಡಿಸಲು ಲೀಲಾವತಿ ಅವರು ಈ ರೀತಿ ಮಾಡಿದ್ದಾರೆ. ಮದ್ರಾಸ್‌ನಲ್ಲಿದ್ದ ಜಮೀನು ಮಾರಿ, ಸೋಲದೇವನಹಳ್ಳಿಯಲ್ಲಿ ಜಮೀನು ಖರೀದಿ ಮಾಡಿ ಮನೆ ಕಟ್ಟಿಕೊಂಡು ನೆಲೆಸಿದ್ದಾರೆ. ವಿನೋದ್‌ ರಾಜ್‌ ಯಾಕೆ ಮದುವೆ ಆಗಿಲ್ಲ ಎನ್ನುವ ಪ್ರಶ್ನೆ ಎಲ್ಲರಿಗೂ ಕಾಡಿತ್ತು. 2021ರವರೆಗೆ ವಿನೋದ್‌ ರಾಜ್‌ ಅವರು ಎಲ್ಲಿಯೂ ಮದುವೆ ಆಗಿದೆ ಅಂತ ಹೇಳಿರಲಿಲ್ಲ. ಆಗ ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು ಅವರು ದಾಖಲೆಗಳ ಸಮೇತ ವಿನೋದ್‌ ರಾಜ್‌ಗೆ ಮದುವೆಯಾಗಿದ್ದು ಮಗ ಕೂಡ ಇದ್ದಾನೆ ಎನ್ನೋದನ್ನು ರಿವೀಲ್‌ ಮಾಡಿದ್ದರು. ಆಧಾರ್‌ ಕಾರ್ಡ್‌ನ್ನು ಜನರು ನೋಡುತ್ತಾರೆ ಅಂತ ವಿನೋದ್‌ ರಾಜ್‌ ಅವರು ವಿದೇಶಿ ಪ್ರವಾಸ ಮಾಡುತ್ತಿರಲಿಲ್ಲ. ಲೀಲಾವತಿ ಅವರು ಎಲ್ಲ ಕಡೆ ಸಾಕು ತಂದೆಯ ಹೆಸರನ್ನು ತೋರಿಸುತ್ತಾರೆ” ಎನ್‌ಆರ್‌ ರಮೇಶ್‌ ಅವರು ಹೇಳಿದ್ದಾರೆ. 

ಡಾ ರಾಜ್‌ಕುಮಾರ್‌ ಹೆಸರಿಗೆ ಮಸಿ ಬಳಿಯಬೇಡಿ
“ಡಾ ರಾಜ್‌ಕುಮಾರ್‌ ಅವರು ಅಗ್ನಿಯಷ್ಟೇ ಪವಿತ್ರವಾಗಿ ಜೀವನ ಮಾಡಿದವರು. 2006 ಏಪ್ರಿಲ್‌ 12ರಂದು ರಾಜ್‌ಕುಮಾರ್‌ ನಿಧನರಾಗುತ್ತಾರೆ. ಅಭಿಮಾನಿ ದೇವರುಗಳಿಂದ ಅಂತ್ಯಸಂಸ್ಕಾರ ಮಾಡಿಸಿಕೊಂಡ ಏಕೈಕ ವ್ಯಕ್ತಿ ಡಾ ರಾಜ್‌ಕುಮಾರ್.‌ ಲೀಲಾವತಿ-ವಿನೋದ್‌ ರಾಜ್‌ ಅವರು ಹೊಸ ಬೆಂಜ್‌ ಕಾರ್‌ ಖರೀದಿ ಮಾಡಿ, ಅದನ್ನು ಬಿ ಸರೋಜಾ ದೇವಿ ಮನೆಯಲ್ಲಿ ಇಟ್ಟಿರುತ್ತಾರೆ. ಏಪ್ರಿಲ್‌ 8ರಂದು ತಿರುಪತಿಗೆ ಹೋಗಿ ಅವರು ಮುಡಿ ಕೊಟ್ಟು ಚೆನ್ನೈಗೆ ಹೋಗುತ್ತಾರೆ. ಅಣ್ಣಾವ್ರ ನಿಧನದ ವಿಷಯ ತಿಳಿದು ಬೆಂಗಳೂರಿಗೆ ಬರುತ್ತಾರೆ. ಅಣ್ಣಾವ್ರ ಅಂತ್ಯಸಂಸ್ಕಾರ ಮಾಡಿದ ಮರುದಿನ ಯಾರಾದರೂ ಪತ್ನಿಯರು ದೇವಸ್ಥಾನಕ್ಕೆ ಹೋಗುತ್ತಾರಾ? ಹೋಗೋದಿಲ್ಲ. ಆದರೆ ಲೀಲಾವತಿ, ವಿನೋದ್‌ ರಾಜ್‌ ಅವರು ಕಬ್ಬನ್‌ ಪಾರ್ಕ್‌ ವೆಹಿಕಲ್‌ ಗಣೇಶ ದೇವಸ್ಥಾನದಲ್ಲಿ ಪೂಜೆ ಮಾಡಿಸ್ತಾರೆ. ಇದರಿಂದಲೇ ರಾಜ್‌ಕುಮಾರ್‌ಗೂ, ಲೀಲಾವತಿ ಅವರಿಗೂ ಸಂಬಂಧ ಇಲ್ಲ ಎನ್ನೋದು ಗೊತ್ತಾಗತ್ತೆ” ಎಂದು ಎನ್‌ಆರ್‌ ರಮೇಶ್‌ ಅವರು ಹೇಳಿದ್ದಾರೆ. 

“ಡಾ ರಾಜ್‌ಕುಮಾರ್‌ ಅವರ ಬಗ್ಗೆ ಯಾರೇ ಏನೇ ಅಸಂಬಂದ್ಧ ಹೇಳಿಕೆ ಕೊಟ್ಟರೂ ಮಾನನಷ್ಟ ಮೊಕದ್ದಮೆ ಹೂಡುವೆ. ವಿನೋದ್‌ ರಾಜ್‌ ಅವರು ಕೂಡ ಅಸಂಬದ್ಧ ಮಾತು ಆಡಬಾರದು” ಎಂದು ಎನ್‌ಆರ್‌ ರಮೇಶ್‌ ಅವರು ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios