ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಒರು ಅಡಾರ್ ಲವ್ ಚಿತ್ರದ ನಂತರ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಈ ಸಿನಿಮಾ ನಂತರ ಇವರ ಸ್ಟಾರ್ ಬದಲಾಯಿತು ಎಂದರೆ ತಪ್ಪಾಗಲಿಕ್ಕಿಲ್ಲ. 

ಆಟೋರಾಜ ಶಂಕರ್‌ ನಾಗ್‌ ಚಿತ್ರಮಂದಿರಕ್ಕೆ ಮತ್ತೆ ಜೀವ!

ಇದೀಗ ಹೊಸ ಸುದ್ದಿ ಮೂಲಕ ಮತ್ತೊಮ್ಮೆ ಅಭಿಮಾನಿಗಳಿಗೆ ಸರ್ಪ್ರೆಸ್ ಕೊಟ್ಟಿದ್ದಾರೆ. ಪ್ರಿಯಾ ಲವ್ ಹ್ಯಾಕರ್ಸ್ ಜೊತೆ ಸೇರಿಕೊಂಡು ಸೈಬರ್ ಕ್ರೈಮ್ ನಲ್ಲಿ ಭಾಗಿಯಾಗಿದ್ದಾರೆ. ಅರೇ ಪ್ರಿಯಾ ಹೀಗ್ಯಾಕೆ ಮಾಡಿದ್ರು ಎಂದು ಯೋಚಿಸ್ತಿದ್ದೀರಾ? ಗಾಬರಿಯಾಗಬೇಡಿ. ಲವ್ ಹ್ಯಾಕರ್ಸ್ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕಮಲ್ ಹಾಸನ್ ಪುತ್ರಿ ಮದುವೆಗೆ ಬಿತ್ತು ಪ್ರೇಮಿಯಿಂದ ಬಿಗ್ ಬ್ರೀಕ್ ?

ಇದು ಪ್ರಿಯಾ ಅವರ ಎರಡನೇ ಬಾಲಿವುಡ್ ಸಿನಿಮಾ. ಇನ್ನು ಲವ್ ಹ್ಯಾಕರ್ಸ್ ಎನ್ನುವ ಸಿನಿಮಾ ಬಗ್ಗೆ ನೋಡುವುದಾದರೆ ಚಿತ್ರದ ಟೈಟಲ್ಲೇ ಹೇಳುವಂತೆ ಇದು ಸೈಬರ್ ಬಗ್ಗೆ ಇರುವ ಸಿನಿಮಾ. ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಹ್ಯಾಕಿಂಗ್ ಜಾಸ್ತಿಯಾಗುತ್ತಿದೆ. ಈ ಹ್ಯಾಕಿಂಗ್ ಸುತ್ತ ನಡೆಯುವ ಕಥೆಯನ್ನು ಇಟ್ಟುಕೊಂಡು ಮಾಡಿದ ಸಿನಿಮಾ ಇದು. ಸೈಬರ್ ಸುಳಿಗೆ ಸಿಲುಕಿದ ಹುಡುಗಿಯೊಬ್ಬಳು ಹೇಗೆ ಅದರಿಂದ ಹೊರ ಬರುತ್ತಾಳೆ ಎಂಬುದೇ ಈ ಚಿತ್ರದ ತಿರುಳು. 

ಬಾಲಿವುಡ್ ನಲ್ಲಿ ಇದು ಪ್ರಿಯಾರ ಎರಡನೇ ಚಿತ್ರ. ಶ್ರೀದೇವಿ ಬಂಗ್ಲೋ ಸಿನಿಮಾದ ನಂತರ ಲವ್ ಹ್ಯಾಕರ್ಸ್ ಜೊತೆ ಸೇರಿಕೊಂಡಿದ್ದಾರೆ.