ಮಲ್ಟಿ ಟ್ಯಾಲೆಂಟೆಡ್ ಆ್ಯಕ್ಟರ್ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದರು. ಆದರೆ ಅದೆಲ್ಲಾ ಸಿನಿಮಾಗಳ ಬಗ್ಗೆ ಆದರೆ ಈಗ ರಿಯಲ್ ಲೈಫ್ ರಿಲೇಶನ್‌ಶಿಪ್‌ ಬಗ್ಗೆ.

ಕೆಲ ವರ್ಷಗಳಿಂದ ಶೃತಿ ಹಾಗೂ ಮೈಖೇಲ್ ಕೋರ್ಸೆಲ್ ಲವ್ ಮಾಡುತ್ತಿದ್ದು ಸದಾ ಇಟಲಿಗೆ ಪ್ರಯಾಣ ಮಾಡಿ ಮೈಖೇಲ್‌ನನ್ನು ಭೇಟಿ ಮಾಡುತ್ತಿದ್ದರು. ಇನ್ನು ಕೆಲ ದಿನಗಳಲ್ಲಿ ಹಸೆಮಣೆ ಏರಲಿದ್ದಾರೆ ಎನ್ನುವ ಮಾತು ಹರಿದಾಡುತ್ತಿತ್ತು. ಅದರ ಕೆಲ ಮೂಲಗಳ ಪ್ರಕಾರ ನಿಶ್ಚಯವಾದ ಮದುವೆ ಮುರಿದು ಬಿದ್ದಿದೆ. ಇದರ ಬಗ್ಗೆ ಸ್ವತಃ ಮೈಖೇಲ್ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ಉತ್ತರ ನೀಡಿದ್ದಾರೆ.

 

'ಲೈಫ್‌ ನಮ್ಮಿಬ್ಬರನ್ನು ವಿರುದ್ಧ ಹಾದಿಯಲ್ಲಿ ತಂದು ನಿಲ್ಲಿಸಿದೆ. ಆದುದರಿಂದ ನಾವು ಒಬ್ಬಂಟಿಯಾಗಿ ನಡೆಯುವುದೇ ಉತ್ತಮವೆಂದೆನಿಸಿದೆ. ಬಟ್ ಶೃತಿ ತನ್ನ ಜೀವನದಲ್ಲಿ ಎಂದಿಗೂ ಬೆಸ್ಟ್ ವ್ಯಕ್ತಿ ಹಾಗೂ ಸ್ಪೆಷಲ್ ವ್ಯಕ್ತಿ. ಲವ್ ಯೂ ' ಎಂದು ಟ್ಟೀಟ್ ಮಾಡಿದ್ದಾರೆ.

ಈ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಿ ಶೃತಿಯನ್ನು ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ. 'ನಾನು ಇನ್ನು ಮದುವೆಯಾಗಬೇಕು ಎಂದು ಅನಿಸಿಲ್ಲ ಮನಸ್ಸಿನಲ್ಲಿ ನಾನು ರೆಡಿ ಎಂದು ಅನಿಸಿದಾಗ ಆಗುವೆ ' ಎಂದು ಹೇಳಿಕೊಂಡಿದ್ದರು.