ಶಿವರಾಜ್‌ಕುಮಾರ್‌ ಸಿನಿಜರ್ನಿಯಲ್ಲಿ ಇದು ಹಲವು ಕಾರಣಕ್ಕೆ ಸಾಕಷ್ಟುಕುತೂಹಲ ಮೂಡಿಸಿದ ಚಿತ್ರ. ಕಾಲಿವುಡ್‌ ನಿರ್ದೇಶಕ ರವಿ ಅರಸು ಆ್ಯಕ್ಷನ್‌ ಕಟ್‌ ಹೇಳುತ್ತಿರುವುದರ ಜತೆಗೆ ಚೆನ್ನೈ ಮೂಲದ ಪ್ರತಿಷ್ಟಿತ ಚಿತ್ರ ನಿರ್ಮಾಣ ಸಂಸ್ಥೆ ಸತ್ಯಜ್ಯೋತಿ ಫಿಲಂಸ್‌ ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿದೆ. ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ಜೋಡಿಯಾಗಿ ‘ರಾಜಕುಮಾರ’ ಚಿತ್ರದ ಖ್ಯಾತಿಯ ಬಹುಭಾಷೆ ನಟಿ ಪ್ರಿಯಾ ಆನಂದ್‌ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಇದೊಂದು ವಿಭಿನ್ನವಾದ ಕತೆ. ನಡೆಯುವುದು 1995ರಲ್ಲಿ. ಆರ್‌ಡಿಎಕ್ಸ್‌ ಅಂದ್ರೆ ಬಾಂಬ್‌ ಅಥವಾ ರೆಡ್‌, ಡರ್ಟಿ ಅಂತ. ಕತೆ ಒಬ್ಬ ಪೊಲೀಸ್‌ ಮೂಲಕ ಸಾಗುತ್ತದೆ. ನಾನೇ ಇಲ್ಲಿ ಆ ಪೊಲೀಸ್‌ ಪಾತ್ರಧಾರಿ.- ಶಿವರಾಜ್‌ ಕುಮಾರ್‌

'ರಾಜಕುಮಾರ'ನಿಗೆ ರಾಣಿಯಾಗಿ ಮಿಂಚಿದ ಪ್ರಿಯಾ ರಿಯಲ್ ಲೈಫ್‌ ಹೀರೋ ಯಾರು?

ಬಾಲಿವುಡ್‌ ನಟ ರಾಜ್‌ವೀರ್‌ ಸಿಂಗ್‌ ಹಾಗೂ ಕಾಲಿವುಡ್‌ ನಟ ಪವನ್‌ ಈ ಚಿತ್ರದ ಪ್ರಮುಖ ಖಳನಟರು. ಚರಣ್‌ರಾಜ್‌ ಸಂಗೀತ ನೀಡುತ್ತಿದ್ದು, ಕಾಲಿವುಡ್‌ ಛಾಯಾಗ್ರಾಹಕ ಶರವಣ ಚಿತ್ರಕ್ಕೆ ಕ್ಯಾಮರಾ ಹಿಡಿಯಲು ಸಜ್ಜಾಗಿದ್ದಾರೆ. ಕನ್ನಡದ ಜತೆಗೆ ಈ ಚಿತ್ರವನ್ನು ತಮಿಳು ಹಾಗೂ ತೆಲುಗಿನಲ್ಲೂ ತರುವ ಆಲೋಚನೆ ಚಿತ್ರತಂಡಕ್ಕಿದೆ. ಸದ್ಯಕ್ಕೆ ಕನ್ನಡದ ಮೇಲೆಯೇ ಚಿತ್ರತಂಡ ಹೆಚ್ಚು ಫೋಕಸ್‌ ಮಾಡಿದೆ.