ಘಟಾನುಘಟಿ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಇರುವ ಕತೆಗಾರ ಪ್ರವೀಣ್‌ ಕುಮಾರ್‌ ನಿರ್ದೇಶನದ ಸಿನಿಮಾ ಇದು.

ಒಲವು ಸಿನಿಮಾ ತಂಡ ನಿರ್ಮಿಸಿರುವ ಈ ಚಿತ್ರದ ಟೈಟಲ್‌ ಘೋಷಣೆ ಆಗಿರಲಿಲ್ಲ. ಚಿತ್ರರಂಗದ ಗಣ್ಯರಾದ ಗಿರೀಶ್‌ ಕಾಸರವಳ್ಳಿ, ಬಿ ಸುರೇಶ್‌, ಯೋಗರಾಜ್‌ ಭಟ್‌, ಎಂಕೆ ಸುಬ್ರಹ್ಮಣ್ಯ, ಅಭಯ್‌ ಸಿಂಹ, ಮಹೇಶ್‌ ರಾವ್‌ ಸೇರಿದಂತೆ ಆರು ಮಂದಿ ಟೈಟಲ್‌ ಲಾಂಚ್‌ ಮಾಡಿದರು. ಈ ಆರು ಮಂದಿ ಜೊತೆಯೂ ನಿರ್ದೇಶಕ ಪ್ರವೀಣ್‌ ಕುಮಾರ್‌ ಕೆಲಸ ಮಾಡಿದ್ದಾರೆ. ಹಾಗಾಗಿ ಇದೊಂಥರಾ ಗುರು ವಂದನಾ ಕಾರ್ಯಕ್ರಮದಂತೆಯೂ ಇದೆ ಎಂದು ಯೋಗರಾಜ್‌ ಭಟ್‌ ತಮಾಷೆ ಮಾಡಿದರು.

'ಕ್ರಿಟಿಕಲ್‌ ಕೀರ್ತನೆಗಳು' ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ! 

ಹರಿಶರ್ವಾ, ದೀಪಿಕಾ ಆರಾಧ್ಯ, ಧರ್ಮಣ್ಣ, ಮಹೇಶ್‌ ಬಂಗ್‌, ಭೂಮಿಕಾ ರಘು, ಡಾ. ಮನೋನ್ಮಣಿ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಎಲ್ಲರೂ ಈಗ ಬಳ್ಳಾರಿ ಭಾಷೆ ಕಲಿಯುತ್ತಿದ್ದಾರೆ. ಈ ಸಿನಿಮಾದ ಪ್ರತೀ ಫ್ರೇಮಿನಲ್ಲೂ ಪ್ರತೀ ಸೌಂಡಿನಲ್ಲೂ ಬಳ್ಳಾರಿ ಕಾಣಿಸಬೇಕು ಎಂದು ಸಂಗೀತ ನಿರ್ದೇಶಕ ಕಿರಣ್‌ ರವೀಂದ್ರನಾಥ್‌, ಛಾಯಾಗ್ರಾಹಕ ಪ್ರವೀಣ್‌ ಯೋಜನೆ ರೂಪಿಸುತ್ತಿದ್ದಾರೆ.

ಹಿರಿಯ ನಿರ್ದೇಶಕರು ಆಶೀರ್ವದಿಸಿದ್ದಾರೆ. ಹೊಸ ಹುಡುಗರ ತಂಡ ಹುರುಪಿನಿಂದ ಕೆಲಸ ಆರಂಭಿಸಿದೆ. ಬಳ್ಳಾರಿ ಫ್ಲೇವರಿನ ಸಿನಿಮಾ ಪ್ರೀತಿಯಿಂದ ತಯಾರಾಗಲಿದೆ.