Asianet Suvarna News Asianet Suvarna News

ಪವಿತ್ರಾ ಗೌಡ ಹಳೆಯ ವಿಡಿಯೋ ಯಾಕಿಷ್ಟು ವೈರಲ್ ಆಗ್ತಿದೆ? ಅಂಥದ್ದು ಏನಿದೆ ಅದ್ರಲ್ಲಿ ನೋಡಿ..!

ಮಾಡೆಲಿಂಗ್ ಹಾಗೂ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದ ನಟ ಪವಿತ್ರಾ ಗೌಡ ಅವರಿಗೆ ಅವರೇ ಹೇಳಿದಂತೆ ಕನ್ನಡದ ಸ್ಟಾರ್ ನಟ ದರ್ಶನ್ ಜೊತೆ ಸ್ನೇಹವಾಗಿದೆ. ಅದು ಪ್ರೇಮಕ್ಕೆ ತಿರುಗಿ ಇಬ್ಬರೂ ಬಳಿಕ ಅನ್ಯೋನ್ಯವಾಗಿದ್ದರು ಎನ್ನಲಾಗಿದೆ...

Sandalwood actress Pavithra Gowda old video gets viral in social media srb
Author
First Published Sep 8, 2024, 9:53 PM IST | Last Updated Sep 8, 2024, 10:45 PM IST

ಸದ್ಯ ಕೊಲೆ ಕೇಸಿನಲ್ಲಿ ಆರೋಪಿಯಾಗಿರುವ ನಟಿ ಪವಿತ್ರಾ ಗೌಡ (Pavithra Gowda) ಅವರದೊಂದು ಹಳೆಯ ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಪವಿತ್ರಾ ಗೌಡ ಅವರು ಸಂದರ್ಶನವೊಂದರಲ್ಲಿ ಮೀಡಿಯಾ ಕ್ಯಾಮೆರಾಗಳ ಮುಂದೆ ಮಾತನಾಡುತ್ತಿದ್ದಾರೆ. ಅದರಲ್ಲಿ ಅವರು ' ನನ್ನ ಹೆಸರು ಪವಿತ್ರಾ ಅಂತ. ಐ ಆಮ್ ಫ್ರಂ ಬ್ಯಾಂಗಲೂರ್.. ಫಸ್ಟ್ ಮೂವಿ ಬಂದು ಅಗಮ್ಯ ಅಂತ ಮಾಡಿದ್ದೆ. ಅಂಡ್ ಸೆಕೆಂಡ್ ಮೂವಿ ಸಾಗುವ ದಾರಿಯಲ್ಲಿ ಅಂತ, ಅನೂಪ್ ಸಾರಾ ಗೋವಿಂದ್ಅವ್ರ ಜೊತೆ. 

ದಿಸ್ ಈಸ್ ಮೈ 4ತಹ ಮೂವಿ. ಥರ್ಡ್ ಮೂವಿ ಈಸ್ ಇನ್ ತಮಿಲ್, 54321 ಅಂತ.. ಈ ನಾಲ್ಕನೇ ಸಿನಿಮಾಗೆ 'ಬತ್ತಾಸ್' ಅಂತ ಟೈಟಲ್ ಇಟ್ಕೊಂಡು ಮಾಡ್ತಾ ಇದಾರೆ. ಇಟ್ಸ್ ಆಕ್ಚ್ಯುಲೀ ಸ್ಟೋರಿ ಈಸ್ ಲೈಕ್ ಸತ್ತಿರೋ ಮನೆಲ್ಲಿ ಹೇಗೆ ಲವ್ ಆಗುತ್ತೆ ಅಂತ..'ಎಂದಿದ್ದಾರೆ ಪವಿತ್ರಾ ಗೌಡ. ಈ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕಾರಣ, ಎಲ್ಲರಿಗೂ ಗೊತ್ತಿರುವಂತೆ ಇಮದು ನಟಿ ಪವಿತ್ರಾ ಗೌಡ ಅವರು ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದಾರೆ. 

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಎಂಗೇಜ್ಮೆಂಟ್ & ಮದುವೆ ಸುದ್ದಿ ಹಬ್ಬಿದ್ಯಾಕೆ?

ಮಾಡೆಲಿಂಗ್ ಹಾಗೂ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದ ನಟ ಪವಿತ್ರಾ ಗೌಡ ಅವರಿಗೆ ಅವರೇ ಹೇಳಿದಂತೆ ಕನ್ನಡದ ಸ್ಟಾರ್ ನಟ ದರ್ಶನ್ (Challenging Star Darshan) ಜೊತೆ ಸ್ನೇಹವಾಗಿದೆ. ಅದು ಪ್ರೇಮಕ್ಕೆ ತಿರುಗಿ ಇಬ್ಬರೂ ಬಳಿಕ ಅನ್ಯೋನ್ಯವಾಗಿದ್ದರು ಎನ್ನಲಾಗಿದೆ. ಪವಿತ್ರಾ ಗೌಡ ಅವರು ತಾವು ನಟ ದರ್ಶನ್ ಜೊತೆಗಿದ್ದ ಫೋಟೋವನ್ನು ಸ್ವತಃ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದರು ಅದು ಸಖತ್ ವೈರಲ್ ಆಗಿ ಸಾಕಷ್ಟು ಸುದ್ದಿಯಾಗಿತ್ತು. 

ಕೊಲೆಗೆ ಸಂಬಂಧಪಟ್ಟಂತೆ ಪೊಲೀಸರು ನೀಡಿರುವ ಚಾರ್ರ್ಜ ಶೀಟ್‌ನಲ್ಲಿ ಉಲ್ಲೇಖಿಸಿರುವಂತೆ, ನಟಿ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳಿಸಿದ್ದಾನೆ ಎನ್ನಲಾಗಿದೆ. ಅದನ್ನು ಪವಿತ್ರಾ ಪವನ್ ಎನ್ನುವವರ ಮೂಲಕ ನಟ ದಶ್ನ್ ಅವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅದಕ್ಕೆ ಅವನನ್ನು ಬೆಂಗಳೂರಿಗೆ ಕರೆಸಿ ಅವನನ್ನು ಪಟ್ಟಣಗೆರೆ ಶೆಡ್‌ನಲ್ಲಿ ಕೂಡು ಹಾಕಿಕೊಂಡು ದರ್ಶನ್ ಅಂಡ್ ಟೀಮ್ ಥಳಿಸಿದ್ದು, ಆತ ಅಸು ನೀಗಿದ್ದಾನೆ. 

ಸದ್ಯ ಪೊಲೀಸರು ನೀಡಿರುವ ಚಾರ್ಜ್‌ ಶೀಟ್ ಪ್ರಕಾರ, ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಒಟ್ಟೂ 17ಜನ ಆರೋಪಿಗಳು ಈ ಕೊಲೆ ಕೇಸಿನಲ್ಲಿ ವಿಚಾರಣಾಧೀನ ಖೈದಿಗಳಾಗಿ ರಾಜ್ಯದ ಬೇರೆ ಬೇರೆ ಜೈಲುಗಳಲ್ಲಿದ್ದಾರೆ. ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಮುಂದೆ ವಿಚಾರಣೆ ನಡೆಯಲಿದೆ. ಸದ್ಯ ಸಲ್ಲಿಸಿರುವ ಆರೋಪ ಪಟ್ಟಿ ಪ್ರಕಾರ ವಿಚಾರಣೆ ನಡೆದು, ಆರೋಪ-ಪ್ರತ್ಯಾರೋಪಗಳ ವಿಚಾರಣೆ ಸಾಗಲಿದ್ದು, ಬಳಿಕ ಕೋರ್ಟ್ ಅಪರಾಧಿಗಳ ಬಗ್ಗೆ ಘೋಷಣೆ ಮಾಡಲಿದೆ. 

'ಬಿಲ್ಲ ರಂಗ ಭಾಷ'ದಲ್ಲಿ ಸುದೀಪ್ ಪಾತ್ರ ಏಂಥದ್ದು? ನಿರ್ದೇಶಕ ಅನೂಪ್ ಭಂಡಾರಿ ಬಿಚ್ಚಿಟ್ಟ ಸೀಕ್ರೆಟ್ ನೋಡಿ!

ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಪಟ್ಟಂತೆ, ಒಟ್ಟೂ 3991 ಪುಟಗಳ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಮುಂದಿನ ಕ್ರಮವನ್ನು ಎದುರು ನೋಡಲಾಗುತ್ತಿದೆ. ಈಗಾಗಲೇ ಕೆಲವು ಆರೋಪಿಗಳು ಜಾಮೀನು ಸಲ್ಲಿಸಿದ್ದು, ಅದರಲ್ಲಿ ಕೆಲವರ ಜಾಮೀನು ಅರ್ಜಿ ವಿಚಾರಣೆ ಕೂಡ ನಡೆಯುತ್ತಿದೆ, ಕೆಲವರದ್ದು ನಡೆಯಬೇಕಿದೆ. ಒಟ್ಟಿನಲ್ಲಿ, ಈ ಹಂತದಲ್ಲಿ ನಟಿ ಪವಿತ್ರಾ ಗೌಡ ಅವರ ಈ ಹಳೆಯ ವಿಡಿಯೋ ವೈರಲ್ ಆಗುತ್ತಿದೆ. 

Latest Videos
Follow Us:
Download App:
  • android
  • ios