ದಿನೆ ದಿನೇ ಸಿಕ್ಕಾಪಟ್ಟೆ ಹ್ಯಾಡ್ಸಂ ಆಗುತ್ತಿರುವ ನಟ ಪ್ರಜ್ವಲ್ ದೇವರಾಜ್‌, ಬ್ಯಾಕ್ ಟು ಬ್ಯಾಕ್ ವಿಭಿನ್ನ ಚಿತ್ರ ಕಥೆಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅದರಲ್ಲೂ ಪಕ್ಕಾ ಸ್ವಮೇಕ್‌ ಚಿತ್ರಗಳಿಗೆ ಕನ್ನಡದ ನಟಿಯರೇ ಬೇಕೆಂಬ ಹುಡುಕಾಟ ಶುರು ಮಾಡಿದ್ದಾರೆ.

ಮೂರು ಶೇಡ್‌ನಲ್ಲಿ ಪ್ರಜ್ವಲ್ ದೇವರಾಜ್‌; 'ಅಬ್ಬರ'ಕ್ಕೆ ಶಿವಣ್ಣ ಬೆಂಬಲ! 

ನಿರ್ದೇಶಕ ಗುರುದತ್ ಗಾಣಿ ಹಾಗೂ ಪ್ರಜ್ವಲ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಈಗಾಗಲೇ ನಿರ್ದೇಶಕರು ಅದಿತಿ ಪ್ರಭುದೇವ ಹಾಗೂ ಆಶಿಕಾ ರಂಗನಾಥ್‌ ಅವರನ್ನು ಸಂಪರ್ಕಿದ್ದಾರೆ. ಇನ್ನು ಕಥೆ ಕೇಳಿ ಮೆಚ್ಚಿಕೊಂಡಿದ್ದು, ಗ್ರೀನ್ ಸಿಗ್ನಲ್‌ ಕೊಡುವುದೊಂದೇ ಬಾಕಿ ಇದೆ. 

ಬಿಗ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಕುಮಾರ್ ಬಂಡವಾಳ ಹಾಕುತ್ತಿದ್ದಾರೆ. ಅಪ್ಪಟ ಕನ್ನಡ ಸಿನಿಮಾದಲ್ಲಿ ನಮ್ಮೆಲ್ಲರ ಪ್ರೀತಿಯ ಡೈನಾಮಿಕ್ ಸ್ಟಾರ್ ದೇವರಾಜ್‌ ಆನ್‌ ಸ್ಕ್ರೀನ್‌ನಲ್ಲಿ ತಂದೆಯಾಗಿ ಅಭಿನಯಿಸಲಿದ್ದಾರೆ. ಹೊಸ ವರ್ಷದಲ್ಲಿ ಚಿತ್ರತಂಡ ಸಿನಿಮಾ ಶೂಟಿಂಗ್ ಆರಂಭಿಸಬೇಕೆಂದು ಸಿದ್ಧತೆ ಮಾಡಿಕೊಳ್ಳುತ್ತಿದೆ. 

ಡೈನಾಮಿಕ್ ಪ್ರಿನ್ಸ್‌ ಜೊತೆ 'ವೀರಂ' ಚಿತ್ರಕ್ಕಾಗಿ ಒಂದಾದ ರಚಿತಾ ರಾಮ್! 

ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗಿರುವ ಅದಿತಿ ಪ್ರಭುದೇವಾ ಕೈಯಲ್ಲಿ ಮೂರು ಸಿನಿಮಾಗಳಿವೆ. ನಟಿ ಆಶಿಕಾ ಸದ್ಯಕ್ಕೆ ಮದಗಜ ಚಿತ್ರ ರಿಲೀಸ್‌ಗೆ ರೆಡಿಯಾಗುತ್ತಿದ್ದಾರೆ. ಒಟ್ಟಿನಲ್ಲಿ ಇಬ್ಬರು ಕನ್ನಡ ನಟಿಯಲ್ಲಿ ಯಾರೇ ಪ್ರಿನ್ಸ್‌ಗೆ ಜೋಡಿಯಾದರೂ ಖುಷಿಯನ್ನು ಎನ್ನುತ್ತಾರೆ ಅಭಿಮಾನಿಗಳು.