‘ಸಿನಿಮಾ ಬರಗಾಲದಲ್ಲಿ ಅಬ್ಬರಿಸಲು ರೆಡಿಯಾಗಿ ಬಂದಿದ್ದೀವಿ. ಮೂರು ಪಾತ್ರ ಐದು ಶೇಡ್‌ನಲ್ಲಿ ನಿಮ್ಮ ಮುಂದೆ ಬರಲಿದ್ದೇನೆ’ ಹೀಗಂದವರು ಪ್ರಜ್ವಲ್ ದೇವರಾಜ್.
ಶೂಟಿಂಗ್ ಮುಗಿಸಿ ತೆರೆಗೆ ಬರಲು ಸಿದ್ಧವಾಗಿರುವ ‘ಅಬ್ಬರ’ ಚಿತ್ರತಂಡ ಪ್ರೆಸ್‌ಮೀಟ್ ಕರೆದಿತ್ತು. ಮೂವರು ಹೀರೋಯಿನ್‌ಗಳ ನಡುವೆ ಕೊಂಚ ಟೆನ್ಶನ್‌ನಲ್ಲಿ ಕೂತಿದ್ದರು ಪ್ರಜ್ವಲ್. ಸದ್ಯಕ್ಕೆ ಮೂರು ಸಿನಿಮಾಗಳ ಸರದಾರನಾಗಿರುವ ಅವರಿಗೆ ಟೆನ್ಶನ್ ಸಹಜವೇ ಏನೋ?
‘ಅಬ್ಬರ ಅನ್ನೋ ಟೈಟಲ್ ನೋಡಿದ್ರೇ ಚಿತ್ರದ ಬಗ್ಗೆ ಒಂದು ಇಮೇಜ್ ಬೆಳೆಯುತ್ತೆ. ಈ ನಿರೀಕ್ಷೆಯನ್ನು ನಿರ್ದೇಶಕ ರಾಮ್‌ನಾರಾಯಣ್ ಹೆಚ್ಚಿಸಿದ್ದಾರೆಯೇ ವಿನಃ ಮೋಸ ಮಾಡಿಲ್ಲ. ನನ್ನ ತಂದೆ, ತಮ್ಮನಿಗೆ ಅವರು ನಿರ್ದೇಶನ ಮಾಡಿದ್ದಾರೆ. ಇದೀಗ ನನ್ನ ಚಿತ್ರವನ್ನು ನಿರ್ದೇಶಿಸುವುದು ಖುಷಿ ಕೊಟ್ಟಿದೆ’ ಎಂದರು.
30 ವರ್ಷ ಹಿಂದಕ್ಕೆ ಹೋದ ಕನ್ನಡ ಚಿತ್ರರಂಗ;1990ರಲ್ಲಿ, 2020ರಲ್ಲಿ ಬಿಡುಗಡೆಯಾದ ಚಿತ್ರಗಳು ಎಷ್ಟು?
ನಿರ್ದೇಶಕ ರಾಮ್ ನಾರಾಯಣ್‌ಗೆ ಪ್ರಜ್ವಲ್ ಡೆಡಿಕೇಶನ್ ಸಖತ್ ಇಷ್ಟಆಗಿದೆ. ‘ಪ್ರಜ್ವಲ್ ಅವರು ಕತೆ ಕೇಳುವ ರೀತಿ, ಕತೆಯನ್ನು ಬೆಳೆಸುವ ರೀತಿ ಕಂಡು ಬಹಳ ಖುಷಿಯಾಯ್ತು. ಒಂದೇ ದಿನ ಮೂರು ಶೇಡ್‌ನ ಪಾತ್ರಗಳನ್ನು ಮೂವರು ಹೀರೋಯಿನ್ ಜೊತೆಗೆ ಮಾಡಿದ್ದು ಕಂಡು ಥ್ರಿಲ್ ಆದೆ ’ ಎಂದರು ರಾಮ್‌ನಾರಾಯಣ್.
ಶಿವಣ್ಣ ಬೆಂಬಲ
ಅಬ್ಬರ ಚಿತ್ರದ ಶೀರ್ಷಿಕೆಯನ್ನು ಅನಾವರಣ ಮಾಡಿದ್ದು ಶಿವರಾಜ್ ಕುಮಾರ್. ಈ ಮೂಲಕ ಪ್ರಜ್ವಲ್ ದೇವರಾಜ್ ಹಾಗೂ ಚಿತ್ರತಂಡಕ್ಕೆ ಶಿವಣ್ಣ ಬೆಂಬಲವಾಗಿ ನಿಂತು ಶುಭ ಹಾರೈಸಿದ್ದಾರೆ. ತಮ್ಮ ತಂಡವನ್ನು ಪ್ರೋತ್ಸಾಹಿಸಿದ ಶಿವಣ್ಣ ಅವರಿಗೆ ಚಿತ್ರತಂಡ ಈ ಸಂದರ್ಭ ಧನ್ಯವಾದ ತಿಳಿಸಿತು.
ಅಖಾಡಕ್ಕೆ ಇಳಿಯಲು ಸಜ್ಜಾಗಿದೆ ಕ್ರೀಡಾ ಪ್ರಧಾನ ಚಿತ್ರ 'ಖೇಲ್'
ಅಬ್ಬರ ಚಿತ್ರದ ಶೀರ್ಷಿಕೆಯನ್ನು ಅನಾವರಣ ಮಾಡಿದ್ದು ಶಿವರಾಜ್ ಕುಮಾರ್. ಈ ಮೂಲಕ ಪ್ರಜ್ವಲ್ ದೇವರಾಜ್ ಹಾಗೂ ಚಿತ್ರತಂಡಕ್ಕೆ ಶಿವಣ್ಣ ಬೆಂಬಲವಾಗಿ ನಿಂತು ಶುಭ ಹಾರೈಸಿದ್ದಾರೆ. ತಮ್ಮ ತಂಡವನ್ನು ಪ್ರೋತ್ಸಾಹಿಸಿದ ಶಿವಣ್ಣ ಅವರಿಗೆ ಚಿತ್ರತಂಡ ಈ ಸಂದರ್ಭ ಧನ್ಯವಾದ ತಿಳಿಸಿತು.
ನಿಮಿಕಾ ರತ್ನಾಕರ್, ರಾಜಶ್ರೀ ಪೊನ್ನಪ್ಪ ಹಾಗೂ ಲೇಖಾ ಚಂದ್ರ ಸಿನಿಮಾದ ನಾಯಕಿಯರು. ಈ ಪೈಕಿ ನಿಮಿಕಾ ಮಾತನಾಡಿ, ‘ನನ್ನದು ಎನ್‌ಆರ್‌ಐ ಪಾತ್ರ. ಒಂದು ಹಂತದಲ್ಲಿ ಪ್ರಜ್ವಲ್ ಜೊತೆಗೆ ಲವ್ವಾಗುತ್ತೆ. ಚಿತ್ರದ ಸ್ಕ್ರೀನ್ ಪ್ಲೇ ಅದ್ಭುತವಾಗಿದೆ. ಸಿನಿಮಾ ಖಂಡಿತಾ ಅಬ್ಬರ ಮಾಡುತ್ತೆ’ ಅಂದರು.
ರಂಗಭೂಮಿಯಿಂದ ಮತ್ತೆ ಸಿನಿಮಾಕ್ಕೆ ಕರೆತಂದು, ಗ್ಲಾಮರ್ ಪಾತ್ರದಿಂದ ಸರಳ ಪಾತ್ರಕ್ಕೆ ಬ್ರೇಕ್ ಕೊಟ್ಟಿರೋದಕ್ಕೆ ಅಬ್ಬರ ಚಿತ್ರತಂಡಕ್ಕೆ ಋುಣಿಯಾಗಿರುವುದಾಗಿ ಇನ್ನೊಬ್ಬ ನಾಯಕಿ ರಾಜಶ್ರೀ ಹೇಳಿದರು. ಉಳಿದಂತೆ ಚಿತ್ರದಲ್ಲಿ ರವಿಶಂಕರ್, ಶೋಭರಾಜ್, ಶಂಕರ್ ಅಶ್ವತ್‌್ಥ ಮತ್ತಿತರರಿದ್ದಾರೆ. ಜೆ.ಕೆ ಗಣೇಶ್ ಕ್ಯಾಮರ, ರವಿ ಬಸ್ರೂರು ಸಂಗೀತವಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 19, 2020, 10:38 AM IST