ಟೈಟಲ್‌ಗೆ ತಕ್ಕಂತೆ ಕತೆ ಇದೆ. ಅದರ ಜೊತೆಗೆ ಚಿತ್ರದಲ್ಲಿ ಯಾವ ಆಟ ಇರಲಿದೆ, ನಾಯಕ ಯಾರು, ಗೆಲುವು ಯಾರದ್ದು, ಸೋಲು ಯಾರದ್ದು ಎಂಬೆಲ್ಲಾ ಪ್ರಶ್ನೆಗಳಿಗೆ ಚಿತ್ರತಂಡದ ಕಡೆಯಿಂದ ಸದ್ಯಕ್ಕೆ ಉತ್ತರ ಇಲ್ಲ. ಅದಕ್ಕೆ ಬದಲಾಗಿ ಈಗ ಆಡಿಯೋ ಬಿಡುಗಡೆ ಮಾಡಿಕೊಂಡು ಸೆನ್ಸಾರ್‌ ಮುಗಿಸಿಕೊಂಡಿರುವ ಚಿತ್ರತಂಡ ಸದ್ಯದಲ್ಲಿಯೇ ತೆರೆಗೆ ಬಂದು ಪ್ರೇಕ್ಷಕರ ಎಲ್ಲಾ ಕುತೂಹಲಗಳಿಗೆ ಉತ್ತರ ನೀಡುವ ತವಕದಲ್ಲಿದೆ.

ಯೋಗಿತ ಫಿಲಂ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಸತೀಶ್‌ ಎಚ್‌ (ಮಾರ್ಕೆಟ್‌) ನಿರ್ಮಾಣ ಮಾಡುತ್ತಿರುವ ‘ಖೇಲ್‌’ ಚಿತ್ರಕ್ಕೆ ರಾಜೀವ್‌ ನಾಯಕ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ನಟನಾಗಿ ಬಣ್ಣದ ಲೋಕಕ್ಕೆ ಬಂದ ಅವರು ಇದೀಗ ಡೈರೆಕ್ಟರ್‌ ಕ್ಯಾಪ್‌ ತೊಟ್ಟು ತಮ್ಮ ಆಟ ಇನ್ನು ಮುಂದೆ ಶುರುವಾಗಲಿದೆ ಎನ್ನುವ ವಿಶ್ವಾಸ ಹೊಂದಿದ್ದಾರೆ. 45 ದಿನಗಳಲ್ಲಿ ಚಿಂತಾಮಣಿ, ಕೋಲಾರ, ಕೈವಾರ ಸುತ್ತಮುತ್ತಲೂ ಚಿತ್ರೀಕರಣ ಮುಗಿಸಿದ್ದೇವೆ. ಚಿತ್ರ ಎಲ್ಲಾ ವರ್ಗದವರಿಗೂ ಇಷ್ಟವಾಗುತ್ತದೆ ಎಂದು ಹೇಳಿಕೊಂಡರು.

ಚಿತ್ರ ವಿಮರ್ಶೆ: ನಾನೊಂಥರ 

ಗಣೇಶ್‌ ಭಾಗವತ್‌ ಸಂಗೀತ ನೀಡಿರುವ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಐಟಂ, ರೊಮ್ಯಾಂಟಿಕ್‌ ಸಾಂಗ್‌ಗಳೂ ಸ್ಥಾನ ಪಡೆದಿವೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮುರಳಿ ಮೋಹನ್‌ ಅವರು, ಹೊಸಬರ ಸಿನಿಮಾಗಳೇ ಹೊಸ ಹೊಸ ಇತಿಹಾಸ ಸೃಷ್ಟಿಸುತ್ತವೆ. ನಮ್ಮ ಭಾಷೆಗೆ ಹೊಸ ಹೊಸ ನಾಯಕರು ಬೇಕಾಗಿದ್ದಾರೆ. ರಾಜ್ಯದಲ್ಲಿ ನಿಮ್ಮ ಆಟ ಶುರುವಾಗಲಿ ಎಂದು ಹಾರೈಸಿದರು. ನಿರ್ದೇಶಕ ಶಿವಗಣೇಶ್‌ ಶುಭಕೋರಿದರು.

ನಾಯಕ ಅರವಿಂದ್‌ ತಮ್ಮ ಮೊದಲ ಸಿನಿಮಾ ಬಗ್ಗೆ ಮಾತನಾಡುತ್ತಾ, ವಿಶೇಷವಾದ ಪಾತ್ರದ ಮೂಲಕ ಆಗಮಿಸುತ್ತಿದ್ದೇನೆ. ಇಲ್ಲಿ ನಾನೊಬ್ಬ ಕಳ್ಳ, ಅದಕ್ಕೆ ಕಾರಣ ಏನು ಎಂಬುದನ್ನು ಸಿನಿಮಾದಲ್ಲಿಯೇ ನೋಡಿ ಎಂದು ಹೇಳಿಕೊಂಡರು.

30 ವರ್ಷ ಹಿಂದಕ್ಕೆ ಹೋದ ಕನ್ನಡ ಚಿತ್ರರಂಗ;1990ರಲ್ಲಿ, 2020ರಲ್ಲಿ ಬಿಡುಗಡೆಯಾದ ಚಿತ್ರಗಳು ಎಷ್ಟು? 

ನಾಯಕಿ ಹಿಮಾ ಮೋಹನ್‌ ಈಗಾಗಲೇ ಆರು ಸಿನಿಮಾ ಮಾಡಿದ್ದಾರೆ. ಅವುಗಳಲ್ಲಿ ಬಿಡುಗಡೆಯಾಗಲಿರುವ ಎರಡನೇ ಚಿತ್ರವಿದು. ಎರಡು ಶೇಡ್‌ಗಳಲ್ಲಿ ಹಿಮಾ ದರ್ಶನ ನೀಡಲಿದ್ದಾರೆ. ‘ಐರಾವತ’, ‘ಹೊಂಬಣ್ಣ’, ‘ಚಿ ತು ಸಂಘ’ ಸೇರಿ 60ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಪೃಥ್ವಿ ಯಾದವ್‌ ಇಲ್ಲಿ ವಿಲನ್‌. ದಿಲೀಪ್‌ ಪಿರಿಲಾ ಛಾಯಾಗ್ರಹಣ ಮಾಡಿರುವ ಚಿತ್ರದಲ್ಲಿ ಚಂದ್ರ ಯಾದವ್‌, ಗೌತಮ್‌ ರಾಜ್‌, ಪ್ರೆಸ್‌ ರವಿ, ಪವಿತ್ರ, ಸಂತೋಷ್‌, ರಾಜೇಶ್‌, ಮಹೇಶ್‌ ಮುಂತಾದವರು ಇದ್ದಾರೆ.