ಪ್ರಜ್ವಲ್‌ ದೇವ​ರಾಜ್‌ ಹಾಗೂ ಜಾಕಿ ಭಾವನಾ ಜೋಡಿ​ಯಾಗಿ ನಟಿ​ಸಿ​ರುವ ಸಿನಿಮಾ ಇದು. ಹುಬ್ಬಳ್ಳಿಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದ ಬೃಹತ್‌ ವೇದಿಕೆಯಲ್ಲಿ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಸಾವಿರಾರು ಜನರು ನೆರೆದಿದ್ದ ಈ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್‌, ಆಶಿಕಾ ರಂಗನಾಥ್‌, ದೀಪಿಕಾ ದಾಸ್‌, ಅದಿತಿ ಪ್ರಭುದೇವ ಹೆಜ್ಜೆ ಹಾಕಿ​ದರು. ಜತೆಗೆ ಅನೂಪ್‌ ಸೀಳಿನ್‌ ಸಂಗೀತ ಸಂಜೆಯೂ ನಡೆ​ಯಿತು. ಮಾಜಿ ಮುಖ್ಯ​ಮಂತ್ರಿ ಜಗ​ದೀಶ್‌ ಶೆಟ್ಟರ್‌ ಅವರು ಕಾರ್ಯ​ಕ್ರ​ಮದ ಮುಖ್ಯ ಅತಿ​ಥಿ​ಗ​ಳಾಗಿ ಆಗ​ಮಿ​ಸಿ​ದ್ದರು.

#MovieReview: ಈ ಜಂಟಲ್‌ಮನ್ ನಿಜಕ್ಕೂ 'ನಂಬರ್ ಒನ್..!'

ವೇದಿಕೆ ಮೇಲೆ ಪೊಲೀಸ್‌ ಡ್ರೆಸ್‌​ನಲ್ಲಿ ಪ್ರಜ್ವಲ್‌ ದೇವ​ರಾಜ್‌ ಎಂಟ್ರಿ ಕೊಟ್ಟರು. ದೇವ​ರಾಜ್‌ ಮತ್ತು ಪ್ರಣವ್‌ ದೇವ​ರಾಜ್‌ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದು ವಿಶೇ​ಷ​ವಾ​ಗಿ​ತ್ತು. ವಿಖ್ಯಾತ್‌ ನಿರ್ಮಾ​ಣದ ಈ ಚಿತ್ರ​ದಲ್ಲಿ ರಘು​ ಮು​ಖ​ರ್ಜಿ, ಅವಿನಾಶ್‌, ಧರ್ಮಣ್ಣ ಮುಂತಾ​ದ​ವರು ನಟಿ​ಸಿ​ದ್ದಾ​ರೆ. ನರ​ಸಿಂಹ ನಿರ್ದೇ​ಶ​ನದ ಈ ಸಿನಿಮಾ ಈಗ ಅದ್ದೂ​ರಿ​ಯಾಗಿ ಆಡಿಯೋ ಬಿಡು​ಗಡೆ ಮಾಡಿ​ಕೊಂಡಿದೆ.