ಪ್ರಗುಣಿ ಓಟಿಟಿಯಲ್ಲಿ ಹಾಸ್ಯೋತ್ಸವ ಸ್ಪರ್ಧೆ | ನಗಿಸುವ ಪುಟ್ಟ ವಿಡಿಯೋ ಮಾಡಿ ಪ್ರಗುಣಿ ಓಟಿಟಿಯಲ್ಲಿ ಅಪ್‌ಲೋಡ್ ಮಾಡಿ

ಪ್ರಗುಣಿ ಓಟಿಟಿಯಲ್ಲಿ ಹಾಸ್ಯೋತ್ಸವ ಸ್ಪರ್ಧೆ ಆಯೋಜನೆಯಾಗಿದೆ. ಈ ಜಗತ್ತನ್ನು ಕಾಪಾಡುವುದು ಹಾಸ್ಯ. ಎಂಥಾ ಸಮಸ್ಯೆ ಇದ್ದರೂ ಒಮ್ಮೆ ನಕ್ಕರೆ ಮನಸ್ಸು ಹಗುರವಾಗುತ್ತದೆ.

ನೀವು ಇನ್ನೊಬ್ಬರನ್ನು ನಗಿಸುವ ಸಾಮರ್ಥ್ಯ ಹೊಂದಿದ್ದರೆ, ಮತ್ತೊಬ್ಬರನ್ನು ನಗಿಸುವ ಪುಟ್ಟ ವಿಡಿಯೋ ಮಾಡಿ ಪ್ರಗುಣಿ ಓಟಿಟಿಯಲ್ಲಿ ಅಪ್‌ಲೋಡ್ ಮಾಡಿ. ವಿಜೇತರಿಗೆ ಪ್ರಗುಣಿ ಬಹುಮಾನ ನೀಡಿ ಗೌರವಿಸುವುದಲ್ಲದೆ, ಪ್ರಗುಣಿ ಓಟಿಟಿಯಲ್ಲು ಆ ಕಾರ್ಯಕ್ರಮ ಪ್ರಸಾಗವಾಗುತ್ತದೆ.

ಕೆಜಿಫ್-2ನಲ್ಲಿ ಪ್ರಕಾಶ್ ರೈ ಪಾತ್ರಕ್ಕೆ ಅನಂತ್‌ನಾಗ್ ಪಾತ್ರವೇ ಏನಿದೆ ವ್ಯತ್ಯಾಸ..? ನೀಲ್ ಹೇಳಿದ್ದಿಷ್ಟು

ನಿಮ್ಮ ಹಾಸ್ಯ ವಿಡಿಯೋ 10 ನಿಮಿಷ ಮೀರಿರಬಾರದು. ನಿಮ್ಮ ಸ್ವಂತ ಶಕ್ತಿಯಿಂದ ರಚಿಸಿದ ವಿಡಿಯೋ ಆಗಿರಬೇಕು. ವಿಡಿಯೋ ಕಳುಹಿಸಬೇಕಾದ ಕೊನೆಯ ದಿನಾಂಕ ಮೇ 10. ಎರಡು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು, ಮೊದಲ ವಿಭಾಗದಲ್ಲಿ ತೀರ್ಪುಗಾರರ ನಿರ್ಧಾರ ಅಂತಿಮ.

ಈ ವಿಭಾಗದಲ್ಲಿ ಎಂಟು ಕೆಟಗರಿಗಳಿವೆ. ಇನ್ನೊಂದು ನೋಡುಗರ ಆಯ್ಕೆ. ನೋಡುಗರ ಓಟಿನ ಮೇಲೆ ಈ ಬಹುಮಾನ ಯಾರಿಗೆ ಎಂಬುದು ನಿರ್ಧಾರವಾಗುತ್ತದೆ. ಈ ಸ್ಪರ್ಧೆಯ ತೀರ್ಪುಗಾರರು ಎಂ ಎಸ್ ನರಸಿಂಹಮೂರ್ತಿ, ಸಿಹಿಕಹಿ ಗೀತಾ, ನಾಗೇಂದ್ರ ಶಾ, ಸುಂದರ್ ವೀಣಾ ಮತ್ತು ಪವನ್ ಕುಮಾರ್.

ಪ್ರಸನ್ನ ಮಧ್ಯಸ್ಥ ಮತ್ತು ಗುರುಪ್ರಸಾದ್ ಮುದ್ರಾಡಿ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಪ್ರಗುಣಿ ಓಟಿಟಿ ಈಗಾಗಲೇ ಶಾರ್ಟ್‌ಫಿಲ್ಮ್ ಸ್ಪರ್‘ೆ ಆಯೋಜಿಸಿ ಯಶಸ್ವಿಯಾಗಿತ್ತು. ಇದೀಗ ಹಾಸ್ಯೋತ್ಸವ ಸ್ಪರ್‘ೆ ಆಯೋಜಿಸಿದೆ. ಹೆಚ್ಚಿನ ಮಾಹಿತಿಗೆ ಈ ಲಿಂಕ್ ನೋಡಿ- www.praguni.com/contest