ರಿಷಭ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಒಂಬತ್ತು ವರ್ಷಗಳ ಪ್ರೀತಿ ಸಂಭ್ರಮದಲ್ಲಿದ್ದಾರೆ. ಚಿತ್ರಮಂದಿರದಲ್ಲಿ ಆಕಸ್ಮಿಕ ಭೇಟಿಯಿಂದ ಆರಂಭವಾದ ಪ್ರೀತಿ, ಫೇಸ್‌ಬುಕ್ ಮೂಲಕ ಬೆಳೆದು, ಒಂದೇ ವರ್ಷದಲ್ಲಿ ವಿವಾಹದಲ್ಲಿ ಕೊನೆಗೊಂಡಿದ್ದರು.

ಸ್ಯಾಂಡಲ್’ವುಡ ನಟ ಹಾಗೂ ನಿರ್ದೇಶಕ, ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಭ್ ಶೆಟ್ಟಿ (Rishabh Shetty) ಪತ್ನಿಯ ಕುರಿತು ಹೆಚ್ಚು ಹೇಳುವ ಅಗತ್ಯ ಇಲ್ಲ. ಯಾಕಂದ್ರೆ ಅವರ ಕುರಿತು ಈಗಂತೂ ಎಲ್ಲರಿಗೂ ಗೊತ್ತೇ ಇದೆ. ರಿಷಭ್ ಶೆಟ್ಟಿಯವರ ಯಶಸ್ಸಿನಲ್ಲಿ ಸಮಭಾಗಿ ಅಂದ್ರೆ ಪತ್ನಿ ಪ್ರಗತಿ ಶೆಟ್ಟಿ. ಗಂಡನ ಪ್ರತಿ ಕೆಲಸದಲ್ಲೂ ಜೊತೆಯಾಗಿ ನಿಂತು, ಬೆನ್ನೆಲುಬಾಗಿ, ಸಂಸಾರ ಹಾಗೂ ಕೆಲಸವನ್ನು ಜೊತೆ ಜೊತೆಯಾಗಿ ತೂಗಿಸಿಕೊಂಡು ಬಂದವರು ಪ್ರಗತಿ ಶೆಟ್ಟಿ. 

ಕಾಂಚಿವರಂ ಸೀರೆಯಲ್ಲಿ ಮಿಂಚಿದ 'ಕಾಂತಾರ' ರಿಷಬ್ ಶೆಟ್ಟಿ ಪತ್ನಿ ಪ್ರಗತಿ; ಕುಂದಾಪುರದ ಮಲ್ಲಿಗೆ ಎಂದ ನೆಟ್ಟಿಗರು

ಇದೀಗ ಪ್ರಗತಿ ಶೆಟ್ಟಿ (Pragathi Shetty) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಗಂಡನ ಜೊತೆಗಿನ ಒಂದಷ್ಟು ಹಳೆಯ ಹಾಗೂ ಹೊಸ ಫೋಟೊಗಳನ್ನು ಶೇರ್ ಮಾಡಿದ್ದು, ತಮ್ಮ 9 ವರ್ಷಗಳ ಪ್ರೀತಿಯ ಬಗ್ಗೆ ತಿಳಿಸಿದ್ದಾರೆ. ಫೋಟೊ ಜೊತೆ ಪ್ರಗತಿ 9 ವರ್ಷಗಳ ಹಿಂದೆ ನಾವು ಅಪರಿಚಿತರಾಗಿ ಭೇಟಿಯಾದೆವು, ಮತ್ತು ಇವತ್ತು ನೀವು ನನಗೆಲ್ಲಾ ಆಗಿದ್ದೀರಿ. ನನ್ನ ಕಾಂಸ್ಟಂಟ್, ಫ್ರೆಂಡ್, ಶಕ್ತಿ ಆಗಿರೋದಕ್ಕೆ ಥ್ಯಾಂಕ್ಯೂ ಎಂದಿದ್ದಾರೆ ಪ್ರಗತಿ., ( 9 years ago, we met as strangers, and today, you’re my everything. Thank you for being my constant, my friend, and my greatest strength, always) 

ಬ್ಯುಸಿ ಶೆಡ್ಯೂಲ್’ಗೆ ಬ್ರೇಕ್, ಹೆಂಡ್ತಿ ಮಕ್ಕಳೊಂದಿಗೆ ಜಾಲಿ ಮೂಡಲ್ಲಿ ರಿಷಭ್ ಶೆಟ್ಟಿ !

ಸದ್ಯ ಕರ್ನಾಟಕದಲ್ಲಿ ಜನಪ್ರಿಯ ಸೆಲೆಬ್ರಿಟಿ ಜೋಡಿಗಳಾಗಿರುವ ರಿಷಭ್ ಮತ್ತು ಪ್ರಗತಿ ಲವ್ ಸ್ಟೋರಿ (Love Story) ಹೀಗಿದೆ. ಪ್ರಗತಿ ಶೆಟ್ಟಿ ಮೊದಲ ಬಾರಿ ರಿಷಭ್ ಅವರನ್ನು ಭೇಟಿಯಾದಾಗ ಅವರ ಹೆಸರು ಏನು? ಅವರು ಯಾರು ಅಂತಾನೇ ಗೊತ್ತಿರಲಿಲ್ಲವಂತೆ. ಹಾಗಿದ್ರೆ ಇಬ್ಬರ ನಡುವೆ ಪ್ರೀತಿ ಬೆಳೆದದ್ದು ಹೇಗೆ? ಇಂಟ್ರೆಸ್ಟಿಂಗ್ ಆಗಿದೆ ಕಥೆ. 'ಉಳಿದವರು ಕಂಡಂತೆ' ಸಿನಿಮಾ ನೋಡಿ ಪ್ರಗತಿ ಅವರು ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿದ್ದರು, ಹಾಗಾಗಿ ಸ್ನೇಹಿತರ ಜೊತೆ ರಿಕ್ಕಿ ಸಿನಿಮಾ ನೋಡೋದಕ್ಕೆ ಹೋಗಿದ್ದರಂತೆ. ಆ ಸಂದರ್ಭದಲ್ಲಿ ಥಿಯೇಟರ್ ಗೆ ಚಿತ್ರತಂಡ ವಿಸಿಟ್ ಮಾಡಿತ್ತು. ಆ ಸಂದರ್ಭದಲ್ಲಿ ಪ್ರಗತಿಗೆ ಇವರು ರಿಕ್ಕಿ ಸಿನಿಮಾದ ನಿರ್ದೇಶಕರು ಅನ್ನೋದು ಗೊತ್ತಾಗಿದೆ. ಎಲ್ಲರೂ ಸೆಲ್ಫಿ ತೆಗೆಯುವಂತೆ ತಾವು ಹೋಗಿ ಫೋಟೊ ತೆಗೆಸಿಕೊಂಡಿದ್ದರು.

ಕಾಂತಾರ ನಟನ ಮನೆಯಲ್ಲಿ ಅದ್ಧೂರಿ ದೀಪಾವಳಿ; ಶೆಟ್ರು ಹೇರ್‌ಸ್ಟೈಲ್‌ ಮೇಲೆ ನೆಟ್ಟಿಗರ ಕಣ್ಣು!

ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಕೂಡ ಕುಂದಾಪುರದವರು ಅನ್ನೋದು ಗೊತ್ತಾಗಿ, ಕರಾವಳಿ ಜನ ಸಿನಿಮಾದಲ್ಲಿ ಇರೋದು ಖುಷಿ ಕೊಟ್ಟಿದೆ ಎಂದಿದ್ದಾರೆ ಪ್ರಗತಿ. ರಿಷಬ್ ಶೆಟ್ಟಿ ಥ್ಯಾಂಕ್ಸ್ ಹೇಳಿ ಹೊರಟಿದ್ದಾರೆ. ಬಳಿಕ ಫೇಸ್‌ಬುಕ್‌ನಲ್ಲಿ ಪ್ರಗತಿಯವರನ್ನು ಹುಡುಕಿ ಶೆಟ್ಟಿ ಫ್ರೆಂಡ್ ರಿಕ್ವೆಸ್ಟ್ (facebook friend request)ಕಳುಹಿಸಿದ್ದರು. ಬಳಿಕ ಆ ಪರಿಚಯ ಪ್ರೀತಿಗೆ ತಿರುಗಿತ್ತು. ಇದಾದ ನಂತರ ಒಂದೇ ವರ್ಷದಲ್ಲಿ ಪ್ರಪೋಸ್ ಮಾಡಿ, ಮನೆಯವರನ್ನು ಒಪ್ಪಿಸಿ ಆ ವರ್ಷವೇ ಮದುವೆ ಕೂಡ ಆಗಿದ್ದರು ರಿಷಭ್ ಶೆಟ್ಟಿ. ಅಲ್ಲಿಂದ ಇಲ್ಲಿವರೆಗೆ ಈ ಜೋಡಿಯ ಜೀವನ ಮೇಡ್ ಫಾರ್ ಈಚ್ ಅದರ್ ಎನ್ನುವಂತೆ ಸುಂದರವಾಗಿದೆ. ರಿಷಭ್ ಶೆಟ್ಟಿ ಸಿನಿಮಾಗಳಲ್ಲಿ ಪ್ರಗತಿ ಕಾಸ್ಟ್ಯೂಮ್ ಡಿಸೈನರ್ (Costume designer) ಆಗಿ ಕೆಲಸ ಮಾಡುವ ಮೂಲಕ ಗಂಡನ ನೆರಳಾಗಿ ಇರುತ್ತಾರೆ ಅಂದ್ರೆ ತಪ್ಪಲ್ಲ. 

View post on Instagram