ಅಂಜನಾದ್ರಿ ಬೆಟ್ಟವೇರಿದ ಪುನೀತ್: ಪವರ್‌ಸ್ಟಾರ್‌ ಸರಳತೆಗೆ ಅಭಿಮಾನಿಗಳು ಫಿದಾ

ಹಂಪಿಯ 575 ಮೆಟ್ಟಿಲುಗಳಿರುವ ಅಂಜನಾದ್ರಿ ಬೆಟ್ಟವೇರಿದ ವೀಡಿಯೋವನ್ನು ಸ್ವತಃ ತಾವೇ ಸೆಲ್ಫಿ ಸ್ಟಿಕ್‌ ಹಿಡಿದು ಶೂಟ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿದ್ದಾರೆ.

Power star Puneeth Rajkumars video goes viral on social media dpl

ಪುನೀತ್‌ ರಾಜ್‌ಕುಮಾರ್‌ ಹಂಪಿಯ ಅಂಜನಾದ್ರಿ ಬೆಟ್ಟವೇರಿದ ವೀಡಿಯೋವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. 575 ಮೆಟ್ಟಿಲುಗಳಿರುವ ಈ ಬೆಟ್ಟಏರೋದನ್ನು ಸ್ವತಃ ತಾವೇ ಸೆಲ್ಫಿ ಸ್ಟಿಕ್‌ ಹಿಡಿದು ಶೂಟ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿದ್ದಾ. ಅವರರೆ ಸರಳತೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಹಂಪಿಯ ಆನೆಗುಂದಿ ಸಮೀಪ ಇರುವ ಅಂಜನಾದ್ರಿ ಬೆಟ್ಟರಾಮಾಯಣದ ಹನುಮಂತನ ಹುಟ್ಟಿದ ಸ್ಥಳ ಎಂದೇ ಪ್ರಸಿದ್ಧ. ಬೆಟ್ಟದ ತುದಿಗೆ ತಲುಪಬೇಕೆಂದರೆ ಸುಮಾರು 575 ಮೆಟ್ಟಿಲುಗಳನ್ನೇರಬೇಕು.

10 ಜನ ಫ್ರೆಂಡ್ಸ್‌ ಜೊತೆ ಬೈಕ್‌ ಹತ್ತಿ ಮಡಿಕೇರಿಗೆ ಹೊರಟ ಚಾಲೆಂಜಿಂಗ್‌ ಸ್ಟಾರ್

ಇಲ್ಲಿನ ಬಂಡೆಯ ಮೇಲೆ ಹನುಮಂತನ ಶಿಲ್ಪ ಕೆತ್ತಲಾಗಿದೆ. ಜೊತೆಗೆ ರಾಮ, ಸೀತೆ ಹಾಗೂ ಆಂಜನೇಯನ ತಾಯಿ ಅಂಜನಾ ದೇವಿಯ ಮಂದಿರವಿದೆ. ಈ ಹಿಂದೆ ಜೇಮ್ಸ್‌ ಚಿತ್ರೀಕರಣದ ವೇಳೆ ಪುನೀತ್‌ ರಾಜ್‌ಕುಮಾರ್‌ ಸೆಲ್ಫಿ ಸ್ಟಿಕ್‌ ಹಿಡಿದು ಬರಿಗಾಲಲ್ಲಿ ಅಷ್ಟೂಮೆಟ್ಟಿಲುಗಳನ್ನೇರಿ ಬೆಟ್ಟವನ್ನೇರಿದ್ದರು. ಜೈ ಶ್ರೀರಾಮ್‌ ಎನ್ನುತ್ತಾ ಇತರೇ ಭಕ್ತರನ್ನು ಹುರಿದುಂಬಿಸಿದ್ದರು.

ಬೆಟ್ಟದ ಮೇಲೆ ಕೋತಿಗಳಿಗೆ ಬಾಳೆ ಹಣ್ಣು ತಿನ್ನಿಸೋದರ ಜೊತೆಗೆ ಅಭಿಮಾನಿಗಳೊಂದಿಗೆ ಸೆಲ್ಫೀಗೂ ಫೋಸ್‌ ನೀಡಿದ್ದರು. ಈಗ ತಾವೇ ಚಿತ್ರೀಕರಿಸಿರುವ ಅಂಜನಾದ್ರಿ ಬೆಟ್ಟದ ಟ್ರೆಕ್ಕಿಂಗ್‌ ವೀಡಿಯೋವನ್ನು ಪುನೀತ್‌ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಕ್ಲಿಕ್ ಆಯ್ತು ಸುದೀಪ್‌- ಆಶಿಕಾ‌ ಜೋಡಿ: ಕೋಟಿಗೊಬ್ಬ 3 ಪಟ್ಟಾಕಿ ಪೋರಿಯೋ ಹಾಡಿಗೆ ಭಾರಿ ಮೆಚ್ಚುಗೆ

ಈ ವೀಡಿಯೋವನ್ನು ಸಾವಿರಾರು ಜನ ನೋಡಿ ಪವರ್‌ ಸ್ಟಾರ್‌ ಸಿಂಪ್ಲಿಸಿಟಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ಬಳ್ಳಾರಿಯಲ್ಲಿ ಜೇಮ್ಸ್‌ ಚಿತ್ರೀಕರಣ ಮುಗಿದಿದೆ. ಆದರೆ ಪುನೀತ್‌ ಇನ್ನೂ ಆ ಗುಂಗಿನಲ್ಲೇ ಇರುವಂತಿದೆ.

Latest Videos
Follow Us:
Download App:
  • android
  • ios