ಶಿವಮೊಗ್ಗ(ಆ. 11)  ನಟ ವಿಜಯ್ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ಹಾಕಿ  ಪೆಟ್ರೋಲ್ ಬಂಕ್ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ.  ಶಿವಮೊಗ್ಗದ ಪ್ರತಿಷ್ಟಿತ ಪೆಟ್ರೋಲ್ ಬಂಕ್ ಒಂದರಲ್ಲಿ ಅಚಾತುರ್ಯ ನಡೆದಿದೆ.

ಶಿವಮೊಗ್ಗ ಜಿಲ್ಲೆಗೆ ಪ್ರವಾಸಕ್ಕೆಂದು ಕುಟುಂಬದೊಂದಿಗೆ ವಿಜಯ್ ರಾಘವೇಂದ್ರ ತೆರಳಿದ್ದರು.  ಜೋಗ ಜಲಪಾತರ ನೋಡಿಕೊಂಡು ವಾಪಸ್ ಬೆಂಗಳೂರಿಗೆ ಆಗಮಿಸುತ್ತಿದ್ದಾಗ ಎಡವಟ್ಟಾಗಿದೆ.  ನೆಚ್ಚಿನ ನಟನನ್ನು ನೋಡಿದ ಖುಷಿಯಲ್ಲಿ ಪೆಟ್ರೋಲ್ ಸಿಬ್ಬಂದಿ ಡೀಸೆಲ್ ಹಾಕಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸಿಕ್ಕಾಪಟ್ಟೆ ಇಳಿಸಿದ ದೆಹಲಿ ಸರ್ಕಾರ

ಬಳಿಕ ವಿಜಯ್ ರಾಘವೇಂದ್ರ ಬಳಿ ಕ್ಷಮೆ ಯಾಚಿಸಿದ ಬಂಕ್ ಸಿಬ್ಬಂದಿ ಹಾಗೂ ಮಾಲೀಕರು  ಕಾರನ್ನು ಲಾರಿಯಲ್ಲಿ ಹತ್ತಿಸಿ‌ ಸರ್ವೀಸ್ ಗೆ ಸ್ಟೇಶನ್ ಗೆ ಕಳುಹಿಸಿಕೊಟ್ಟಿದ್ದಾರೆ,. ವಿಜಯ್ ರಾಘವೇಂದ್ರ‌ ಹಾಗೂ ಕುಟುಂಬದವರು ಬೇರೆ ಕಾರಿನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡಿದ್ದಾರೆ. 

ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ಜೋಗ ಜಲಪಾತ ಮೈದುಂಬಿಕೊಂಡಿದೆ. ಪ್ರವಾಸಿ ತಾಣಗಳತ್ತ ಕೊರೋನಾ ಇದ್ದರೂ  ಸೆಲೆಬ್ರಿಟಿಗಳ ಆದಿಯಾಗಿ ನಾಗರಿಕರು ಭೇಟಿ ನೀಡುತ್ತಿದ್ದಾರೆ.