ನರೇಶ್- ಪವಿತ್ರಾ ಲೋಕೇಶ್ 'ಮತ್ತೆ ಮದುವೆ'; ಗಿಮಿಕ್ ಎಂದು ನೆಟ್ಟಿಗರು ಗರಂ
ಸಿನಿಮಾ ದೃಶ್ಯವನ್ನು ತೋರಿಸಿ ಆಶೀರ್ವದಿಸಿ ಎಂದು ಕೇಳಿದ್ದ ನರೇಶ್. ಪವಿತ್ರಾ ಲೋಕೇಶ್ ಮೇಲೆ ಗೌರವ ಹೋಯ್ತು ಎಂದ ನೆಟ್ಟಿಗರು...
ತೆಲುಗು ನಟ ಕಮ್ ನಿರ್ದೇಶಕ ನರೇಶ್ ಮತ್ತು ಬಹುಭಾಷಾ ನಟಿ ಪವಿತ್ರಾ ಲೋಕೇಶ್ ವೈಯಕ್ತಿಕ ಜೀವನದಲ್ಲಿ ಏನೋ ಆಯ್ತು ಅಂತ ವೃತ್ತಿ ಜೀವನದಲ್ಲಿ ಸರಿ ಮಾಡಿಕೊಳ್ಳಲು ಹೊರಟಿದ್ದಾರೆ. ಕೆಲವು ದಿನಗಳ ಹಿಂದೆ ಮದುವೆ ಮಾಡಿಕೊಂಡು ದುಬೈನಲ್ಲಿ ಹನಿಮೂನ್‌ಗೆ ಹೋಗಿದ್ದ ಜೋಡಿ ಈಗ 'ಮತ್ತೆ ಮದುವೆ' ಎನ್ನುತ್ತಿದ್ದಾರೆ. ಪ್ರಚಾರ ಮಾಡಲು ಹೊಸ ಪೋಸ್ಟರ್ ಬೇರೆ ರಿಲೀಸ್ ಮಾಡಿದ್ದಾರೆ. ಹೀಗಾಗಿ ಜನರ ಭಾವನೆಗಳ ಆಟವಾಡಬೇಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ನರೇಶ್, ಪವಿತ್ರಾ ಲೋಕೇಶ್ ಜೋಡಿಯ ‘ಮತ್ತೆ ಮದುವೆ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ನರೇಶ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಎಂ. ಎಸ್. ರಾಜು ನಿರ್ದೇಶಕರು. ಈ ಸಿನಿಮಾ ಏಕಕಾಲದಲ್ಲಿ ತೆಲುಗು ಹಾಗೂ ಕನ್ನಡದಲ್ಲಿ ನಿರ್ಮಾಣವಾಗಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬಿಡುಗಡೆ ಕಾಣಲಿದೆ. ಜಯಸುಧಾ ಮತ್ತು ಶರತ್ ಬಾಬು ಚಿತ್ರದ ಮುಖ್ಯ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ.
ಈ ಹಿಂದೆ ನರೇಶ್ ಸಾಮಾಜಿಕ ಜಾಲತಾಣಗಳಲ್ಲಿ ನರೇಶ್-ಪವಿತ್ರಾ ಮದುವೆಯ ವೀಡಿಯೋ ಹಂಚಿಕೊಂಡು ನಿಮ್ಮ ಆಶೀರ್ವಾದ ಬೇಕು ಎಂದು ಕೇಳಿದ್ದರು. ಆಗ ಅವರಿಬ್ಬರು ವಿವಾಹವಾಗಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇದೀಗ ಆ ವೀಡಿಯೋ ಈ ಸಿನಿಮಾದ ತುಣುಕು ಎನ್ನಲಾಗಿದೆ. ‘ಮತ್ತೆ ಮದುವೆ’ ಸಿನಿಮಾ ಚಿತ್ರೀಕರಣದ ವಿಡಿಯೋವನ್ನು ಮದುವೆ ಎಂಬಂತೆ ಪ್ರಚಾರ ಕೊಟ್ಟು ಗಿಮಿಕ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿನಿಮಾ ಆಗ್ತಿದೆ ಪವಿತ್ರಾ ಲೋಕೇಶ್-ನರೇಶ್ ರಿಯಲ್ ಲವ್ ಸ್ಟೋರಿ
ಅಭಿಮಾನಿಗಳ ವಿರುದ್ಧವೇ ದೂರು?
ಕೆಲವು ತಿಂಗಳುಗಳಿಂದ ಇವರ ವಿಚಾರ ಭಾರಿ ಸುದ್ದಿ ಹರಿದಾಡುತ್ತಿದೆ. ಇವರು ಹೋದಲ್ಲಿ, ಬಂದಲ್ಲಿ ಕ್ಯಾಮೆರಾ ಕಣ್ಣುಗಳು ಹಿಂದೆಯೇ ಹೋಗುತ್ತಿರುತ್ತವೆ. ಇದೇ ಕಾರಣಕ್ಕೆ ಇದಾಗಲೇ ನರೇಶ್ (Naresh) ಅವರು ತಮ್ಮ ವಿರುದ್ಧ ಪ್ರಚಾರ ಮಾಡುತ್ತಿರುವವರ ಬಗ್ಗೆ ಇದಾಗಲೇ ಆಕ್ರೋಶ ಹೊರಹಾಕಿದ್ದರು. ತಮ್ಮ ವಿರುದ್ಧ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಇದಾಗಲೇ ಅವರು ಕೆಲವು ಮಾಧ್ಯಮಗಳು ಹಾಗೂ ಜನರ ವಿರುದ್ಧ ಕಿಡಿ ಕಾರಿದ್ದಾರೆ. ತಮ್ಮ ವಿರುದ್ಧ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ವಿಧವಿಧ ರೀತಿಯ ಚಿತ್ರಗಳನ್ನು ಶೇರ್ ಮಾಡಿಕೊಂಡು ಟ್ರೋಲ್ ಮಾಡುತ್ತಿದ್ದಾರೆ ಎಂದು ದೂರಿದ್ದರು. ಹೋದಲ್ಲಿ, ಬಂದಲ್ಲಿ ತಮ್ಮ ಸಂಬಂಧದ ಕುರಿತು ಪ್ರಶ್ನೆ ಮಾಡುವವರ ಮೇಲೆ ಹರಿಹಾಯ್ದಿದ್ದಾರೆ. ತಮ್ಮ ಸಂಬಂಧದ ಕುರಿತು ಇಲ್ಲಸಲ್ಲದ್ದನ್ನು ಹೇಳಲಾಗುತ್ತಿದೆ ಎಂದು ಆರೋಪಿಸಿದ್ದ ನರೇಶ್, ಈ ಹಿಂದೆ ಕುಡ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಇವರ ಆಕ್ರೋಶಕ್ಕೆ ಕಾರಣವಾಗಿದ್ದು, ನರೇಶ್ ಅವರ ಮಲ ತಂದೆ ನಟ ಕೃಷ್ಣ ಅವರು ನಿಧನರಾದ ಸಂದರ್ಭದಲ್ಲಿ ನಡೆದ ಸಂಗತಿ. ಅವರ ಅಂತಿಮ ದರ್ಶನಕ್ಕೆ ನರೇಶ್ ಮತ್ತು ಪವಿತ್ರಾ ಲೋಕೇಶ್ (Pavitra Lokesh) ಹೋಗಿದ್ದಾಗ ಇವರಿಬ್ಬರೂ ಕಣ್ ಸನ್ನೆಯಲ್ಲೇ ಮಾತನಾಡುತ್ತಿದ್ದುದಾಗಿ ಫೋಟೋ ಹಾಕಿ ಟ್ರೋಲ್ (Troll) ಮಾಡಲಾಗಿತ್ತು. ಇದರ ವಿರುದ್ಧ ಸಿಡಿದೆದ್ದಿದ್ದ ನರೇಶ್ ಅವರು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದದರು. ತಮ್ಮ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳನ್ನು ಮಾಡಲಾಗುತ್ತಿದೆ ಎಮದು ತೆಲಂಗಾಣ (Telangana) ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇದು ಇಲ್ಲಿಗೆ ಸುಮ್ಮನಾಗಲಿಲ್ಲ. ಜನರು ಒಂದು ಸಲ ಸಿಕ್ಕರೆ ಬಿಡುತ್ತಾರೆಯೆ? ಈಗಲೂ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್, ಥಹರೇವಾರಿ ಕಮೆಂಟ್ಗಳು, ಫೋಟೋಗಳು ಬರುತ್ತಲೇ ಇವೆ.
ನರೇಶ್, ಪವಿತ್ರಾ ದಂಪತಿಯನ್ನು ಟ್ರೋಲ್ಗಳು ಹೆಚ್ಚುತ್ತಲೇ ಇರುವ ಕಾರಣ ಇನ್ನೊಮ್ಮೆ ಈಗ ದೂರು ದಾಖಲು ಮಾಡಲಾಗಿದೆ. ತಮ್ಮ ಬಗ್ಗೆ ಕೆಟ್ಟದಾಗಿ ಬರೆಯುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ತಗೆದುಕೊಳ್ಳಬೇಕೆಂದು ಅವರು ದೂರಿನಲ್ಲಿ ಬರೆದಿದ್ದಾರೆ. ಯಾವ್ಯಾವುದೋ ಹೆಸರುಗಳನ್ನು ಇಟ್ಟುಕೊಂಡ ಚಾನೆಲ್ಗಳು ಸಾಮಾಜಿಕ ಜಾಲತಾಣವನ್ನು ವೇದಿಕೆ ಮಾಡಿಕೊಂಡು, ತಮಗೆ ಮಾನಹಾನಿ ಮಾಡುವಂತಹ ವಿಷಯ, ಗಾಸಿಪ್ಗಳನ್ನು ಬರೆಯುತ್ತಿದ್ದಾರೆ. ನಮ್ಮ ಮನೆಯಲ್ಲಿ ನಡೆಯುವ ಖಾಸಗಿ ವಿಷಯಗಳನ್ನು ಮನಸೋ ಇಚ್ಛೆ ಬರೆಯುತ್ತಿದ್ದಾರೆ. ನಮ್ಮ ಮೇಲಿನ ದ್ವೇಷದಿಂದ ಅವರು ಈ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದು ನರೇಶ್ ದೂರಿನಲ್ಲಿ (Complaint) ತಿಳಿಸಿರುವುದಾಗಿ ಹೇಳಲಾಗಿದೆ.