Asianet Suvarna News Asianet Suvarna News

ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ದೂರು ಕೊಡಬಹುದಲ್ವಾ.? ಪವಿತ್ರಾಗೌಡ ಮಾಜಿ ಪತಿ ಸಂಜಯ್ ಸಿಂಗ್

ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪವಿತ್ರಾಗೌಡ ಅವರೊಂದಿಗಿನ ನನ್ನ ವೈಯಕ್ತಿಕ ಜೀವನದ ಫೋಟೋಗಳನ್ನು ಹೇಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅವರ ವಿರುದ್ಧ ದೂರು ಕೊಡಬಹುದಲ್ವಾ ಎಂದು ಪವಿತ್ರಾಗೌಡ ಮಾಜಿ ಪತಿ ಸಂಜಯ್ ಸಿಂಗ್ ಹೇಳಿದ್ದಾರೆ.

Pavithra Gowda ex husband Sanjay Singh will file complaint against Darshan wife Vijayalakshmi sat
Author
First Published Jun 19, 2024, 4:41 PM IST

ಬೆಂಗಳೂರು (ಜೂ.19): ನಟ ದರ್ಶನ್ ಹಾಗೂ ಪವಿತ್ರಾಗೌಡ ಸ್ನೇಹಿತರು. ಮುಂದುವರೆದು ಪರಸ್ಪರ ಹೊಂದಾಣಿಕೆ ಮೂಲಕ ಜೊತೆಗಿರಬಹುದು. ಪವಿತ್ರಾಗೌಡ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡರೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ನನ್ನ ವೈಯಕ್ತಿಕ ಜೀವನದ ಫೋಟೋಗಳನ್ನು ಹೇಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅವರನ್ನು ನಾನು ಸುಮ್ಮನೇ ಬಿಡುವುದಿಲ್ಲ, ದೂರು ಕೊಡ್ತೇನೆ ಎಂದು ಪವಿತ್ರಾಗೌಡ ಮಾಜಿ ಪತಿ ಸಂಜಯ್ ಸಿಂಗ್ ಹೇಳಿದ್ದಾರೆ.

ದರ್ಶನ್ ಜೊತೆಗೆ 10 ವರ್ಷಗಳ ಬಾಂದವ್ಯ ಇದೆ ಎಂದು ಪವಿತ್ರಾಗೌಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಕ್ಕೆ ವಿಜಯಲಕ್ಷ್ಮೀ ಅವರು ಅಕ್ಷೇಪ ವ್ಯಕ್ತಪಡಿಸಿ ಕೆಲವೊಂದು ಫೋಟೋಗಳನ್ನು ಕೂಡ ಹಾಕಿದ್ದರು. ಆದರೆ, ಇದಕ್ಕೆ ನನ್ನದು ತೀವ್ರ ಆಕ್ಷೇಪವಿದೆ. ನಾವು ಯಾವ ಚಾನಲ್‌ಗೂ ಹೇಳಿಲ್ಲ, ಮೊದಲ ಬಾರಿಗೆ ನಿಮ್ಮನ್ನು ಕೇಳುತ್ತಿದ್ದೇನೆ.  ನೀವು ವಿಜಯಲಕ್ಷ್ಮೀ ಅವರನ್ನು ನನ್ನೊಂದಿಗೆ ಲೈವ್‌ನಲ್ಲಿ ಮಾತನಾಡಿಸಿ. ವಿಜಯಲಕ್ಷ್ಮೀ ನನ್ನ ವೈಯಕ್ತಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಿಕ್ಕೆ ಅವರು ಯಾರು? ಅವರಿಗೆ ನನ್ನ ಹಿಂದಿನ ಜೀವನದ ಫೋಟೋಗಳನ್ನು ಹಂಚಿಕೊಳ್ಳಲು ಏನು ಅರ್ಹತೆಯಿದೆ ಎಂದು ಕೇಳುವುದಾಗಿ ಪವಿತ್ರಾಗೌಡ ಪತಿ ಆಕ್ಷೇಪ ವ್ಯಕ್ತಪಡಿಸಿದರು.

ದರ್ಶನ್ ಪತ್ನಿ ವಿಜಯಲಕ್ಷ್ಮಿಗೂ ನೋಟಿಸ್ ಕೊಟ್ಟು ಠಾಣೆಗೆ ಕರೆಸಿಕೊಂಡ ಪೊಲೀಸರು

ಯಾಕೆ ವಿಜಯಲಕ್ಷ್ಮೀ ಅವರಿಗೆ ತಮ್ಮ ಪತಿ ದರ್ಶನ್ ಬಗ್ಗೆ ನಂಬಿಕೆ ಇಲ್ಲವೇ? ಅವರ ಬಗ್ಗೆ ನಂಬಿಕೆ ಇದ್ದಿದ್ದರೆ ಸುಮ್ಮನೇ ಬಿಡಬೇಕಿತ್ತು. ಪವಿತ್ರಾಗೌಡ ಅವರೇ ದರ್ಶನ್ ಅವರನ್ನು ಬುಟ್ಟಿಗೆ ಬೀಳಿಸಿಕೊಂಡಿದ್ದಾರೆ ಎಂದು ಹೇಳುತ್ತಾರೆ. ದರ್ಶನ್ ಅವರಿಗೆ ಬುದ್ಧಿ ಇಲ್ಲವಾ? ಈ ಬಗ್ಗೆ ದರ್ಶನ್ ಆಲೋಚನೆ ಮಾಡಿಲ್ಲವೇ? ಅವರಿಗೆ ಮುದ್ದಾದ ಹೆಂಡತಿ, ಹ್ಯಾಂಡ್‌ಸಮ್ ಮಗ ಇದ್ದಾನೆ. ದರ್ಶನ್ ಬಗ್ಗೆ ಯಾವಾಗಲೂ ಆಲೋಚನೆ ಮಾಡಿ ಒಳಿತನ್ನು ಬಯಸುವ ಹೆಂಡತಿ ಇದ್ದಾಳೆ. ಆದರೂ ದರ್ಶನ್ ಅವರಿಗೆ ಪವಿತ್ರಾಗೌಡ ಅವರ ಅಗತ್ಯವಾದರೂ ಏನಿದೆ? ಅವರಿಬ್ಬರೂ ಒಳ್ಳೆಯ ಫ್ರೆಂಡ್ಸ್ ಆಗಿರಬಹುದು. ಇಲ್ಲ ಪರಸ್ಪರ ಹೊಂದಾಣಿಕೆ ಮೂಲಕ ಜೊತೆಗಿರಬಹುದು. ಅದನ್ನು ಇಷ್ಟು ದೊಡ್ಡದಾಗಿ ಹೈಲೆಟ್ ಮಾಡುವುದು ಏನಿತ್ತು? ಈ ಬಗ್ಗೆ ನನ್ನ ವೈಯಕ್ತಿಕ ಫಟೋಗಳನ್ನು ಸಾಮಾಜಕ ಜಾಲತಾಣದಲ್ಲಿ ಹಾಕಿದ ಬಗ್ಗೆ ನಾನೂ ಕೂಡ ವಿಜಯಲಕ್ಷ್ಮಿ ಅವರ ಮೇಲೆ ದೂರು ಕೊಡಬಹುದು ಅಲ್ಲವೇ? ಎಂದು ಪ್ರಶ್ನೆ ಮಾಡಿದರು.

ದರ್ಶನ್ ಅವರ ಪತ್ನಿ ತಮ್ಮ ವೈಯಕ್ತಿಕ ಜೀವನಕ್ಕೆ ಪವಿತ್ರಾಗೌಡ ಅವರ ಹೆಸರಿಗೆ ಸೇರಿಸಿಬಿಟ್ಟು, ನನ್ನ ಮತ್ತು ನನ್ನ ಮಗಳ ಹೆಸರನ್ನು ಬಳಕೆ ಮಾಡಿಕೊಂಡಿದ್ದಾರೆ. ವಿಜಯಲಕ್ಷ್ಮೀ ಅವರಿಗೆ ಹೇಗೆ ನನ್ನ ಫೋಟೋ ಸಿಕ್ತು? ನನಗೆ ಪವಿತ್ರಾಗೌಡ ಅವರ ಫೋಟೋ ಇದ್ದರೆ ನಾನೇ ಅವರ ಬಳಿ ನೇರವಾಗಿ ಮಾತನಾಡುತ್ತೇನೆ. ಆದರೆ, ವಿಜಯಲಕ್ಷ್ಮೀ ಯಾಕೆ ನಮ್ಮ ಫೋಟೋಗಳನ್ನು ಹಾಕಿದ್ದಾರೆ. ಈ ಬಗ್ಗೆ ನಾನು ಕೂಡ ದೂರು ಕೊಡಬಹುದು ಅಲ್ಲವೇ ಎಂದು ಕಿಡಿಕಾರಿದರು.

ನಟ ಪ್ರಥಮ್‌ಗೆ ಜೀವ ಬೆದರಿಕೆ ಹಾಕಿದ ದರ್ಶನ್ ಅಭಿಮಾನಿಗಳು; 500ಕ್ಕೂ ಅಧಿಕ ಕಾಲ್, ಮೆಸೇಜ್

ಇನ್ನು ಕೊಲೆಯಾಗಿರುವ ರೇಣುಕಾಸ್ವಾಮಿ ಪವಿತ್ರಾಗೌಡ ದರ್ಶನ್ ಫ್ಯಾನ್ ಎಂದು ಹೇಳಿಕೊಂಡು ಅಣ್ಣನ ಜೀವನದಲ್ಲಿ ನೀವು ಬಂದಿದ್ದಕ್ಕೆ ಇಷ್ಟೆಲ್ಲಾ ಆಗಿದೆ ಎಂದು 10 ವರ್ಷಗಳಾದ ಬಳಿಕ ಯಾಕೆ ಕೇಳಬೇಕು. ಈ ವಿಚಾರವನ್ನು ಪವಿತ್ರಾಗೌಡ ದರ್ಶನ್‌ಗೆ ನೇರವಾಗಿ ಹೇಳದೇ ಪವನ್‌ಗೆ ಹೇಳಿದ್ದಾರೆ. ಆದರೆ, ಪವನ್ ತುಂಬಾ ಹೈಪರ್ ಆಗಿರುವ ದರ್ಶನ್‌ಗೆ ಹೇಳಿದ್ದಾರೆ. ಆಗ ದರ್ಶನ್ ತಮ್ಮ ಗ್ಯಾಂಗ್‌ಗೆ ಹೇಳಿ ಕರೆಸಿಕೊಂಡು ಹಲ್ಲೆ ಮಾಡಿ ಕೊಲೆ ಮಾಡಿರಬಹುದು. ರೇಣುಕಾಸ್ವಾಮಿ ಅವರನ್ನು ಗುರುತಿಸಲು ಪವಿತ್ರಾಗೌಡ ಅವರು ಅಲ್ಲಿಗೆ ಹೋಗಿ ಗುರುತಿಸಿ ಹೇಳಿಬಹುದು. ಆದರೆ, ಇದರಲ್ಲಿ ಪವಿತ್ರಾಗೌಡ ಅವರದ್ದು ಪವಿತ್ರಾಗೌಡ ಅವರದ್ದು ಯಾವುದೇ ತಪ್ಪಿಲ್ಲ. ಇಷ್ಟೆಲ್ಲಾ ಪವಿತ್ರಾಗೌಡ ಅವರಿಂದಲೇ ನಡೆದಿದ್ದರೂ, ಯಾಕೆ ನಡೆದಿದೆ? ಯಾರು ಕೊಲೆ ಮಾಡಿದ್ದಾರೆ? ಎಂದು ಆಲೋಚನೆ ನೋಡಬಹುದು ಎಂದು ಪವಿತ್ರಾಗೌಡ ಮಾಜಿ ಪತಿ ಸಂಜಯ್ ಸಿಂಗ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios