Asianet Suvarna News Asianet Suvarna News

ನಟ ಪ್ರಥಮ್‌ಗೆ ಜೀವ ಬೆದರಿಕೆ ಹಾಕಿದ ದರ್ಶನ್ ಅಭಿಮಾನಿಗಳು; 500ಕ್ಕೂ ಅಧಿಕ ಕಾಲ್, ಮೆಸೇಜ್

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಂಧನವಾಗಿರುವ ನಟ ದರ್ಶನ್ ಬಗ್ಗೆ ಮಾತನಾಡಿದ್ದಕ್ಕೆ ಆತನ ಅಭಿಮಾನಿಗಳು ನಟ ಪ್ರಥಮ್‌ಗೆ 500ಕ್ಕೂ ಅಧಿಕ ಬಾರಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.

Renuka Swamy Murder Accused Actor Darshan fans threatened to actor Pratham sat
Author
First Published Jun 19, 2024, 1:22 PM IST

ಬೆಂಗಳೂರು (ಜೂ.19): ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಂಧನವಾಗಿರುವ ನಟ ದರ್ಶನ್ ಅಭಿಮಾನಿಗಳಿಗೆ ಬುದ್ಧಿಮಾತು ಹೇಳಿದ್ದ ಬಿಗ್‌ಬಾಸ್ ಸ್ಪರ್ಧಿ ನಟ ಪ್ರಥಮ್‌ಗೆ ದರ್ಶನ್ ಅಭಿಮಾನಿಗಳು ಜೀವ ಬೆದರಿಕೆ ಹಾಕಿದ್ದಾರೆ. ದರ್ಶನ್ ಅಭಿಮಾನಿಗಳಿಂದ ಸುಮಾರು 500ಕ್ಕೂ ಅಧಿಕ ಫೋನ್ ಕರೆಗಳು ಬಂದಿದ್ದು, ನಿನ್ನ ಕೈ-ಕಾಲು ಎತ್ತುತ್ತೇವೆ, ತಲೆ ಎತ್ತುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಒಳ್ಳೆ ಹುಡುಗ ಪ್ರಥಮ್ ರಕ್ಷಣೆಗಾಗಿ ಪೊಲೀಸರ ಮೊರೆಹೋಗಿದ್ದಾರೆ. 

ಹೌದು, ನಟ ದರ್ಶನ್ ತನ್ನ 2ನೇ ಪತ್ನಿ ಪವಿತ್ರಾಗೌಡಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಸಿ, ಕೊಲೆ ಮಾಡಿದ ಆರೋಪದನ್ನು ಬಂಧನವಾಗಿದ್ದಾರೆ. ಆದರೆ, ದರ್ಶನ್ ಅಭಿಮಾನಿಗಳು ಪೊಲೀಸ್ ಠಾಣೆ ಸೇರಿ ಸ್ಥಳ ಮಹಜರು ಸ್ಥಳದಲ್ಲೆಲ್ಲಾ ಡಿ ಬಾಸ್‌ಗೆ ಜೈ, ದರ್ಶನ್‌ಗೆ ಜೈ ಎಂದು ಜೈಕಾರ ಕೂಗುತ್ತಾ ಅವರನ್ನು ಸಪೋರ್ಟ್ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿಗಳಿಗೆ ಬುದ್ಧಿಮಾತು ಹೇಳಿದ್ದ ನಟ ಪ್ರಥಮ್ ಪೊಲೀಸರು ನನಗೆ ಒಂದು ವಾರ ಪೊಲೀಸ್ ಕಾನ್ಸ್‌ಸ್ಟೇಬಲ್ ಡ್ಯೂಟಿ ಕೊಟ್ಟರೆ ಎಲ್ಲ ದರ್ಶನ್ ಅಭಿಮಾನಿಗಳನ್ನು ಲಾಠಿಯಿಂದ ಹೊಡೆದು ಒಬ್ಬರೂ ಬಾರದಂತೆ ಬುದ್ಧಿ ಕಲಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.

ದರ್ಶನ್ ಪತ್ನಿ ವಿಜಲಕ್ಷ್ಮಿಗೂ ನೋಟಿಸ್ ಕೊಟ್ಟು ಠಾಣೆಗೆ ಕರೆಸಿಕೊಂಡ ಪೊಲೀಸರು

ಇದರ ಬೆನ್ನಲ್ಲಿಯೇ ದರ್ಶನ್ ಅಭಿಮಾನಿಗಳು ನಟ ಪ್ರಥಮ್ ಹೇಳಿಕೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೀಗಾಗಿ, ನಟ ಪ್ರಥಮ್‌ಗೆ 500ಕ್ಕೂ ಅಧಿಕ ಬಾರಿ ಕರೆ ಮಾಡಿರುವ ದರ್ಶನ್ ಅಭಿಮಾನಿಗಳು ಜೀವ ಬದರಿಕೆ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಣ ರಕ್ಷಣೆಗಾಗಿ ನಟ ಪ್ರಥಮ್ ಜ್ಞಾನ ಭಾರತಿ ನಗರ ಪೊಲೀಸ್ ಠಾಣೆಗೆ ತೆರಳಿ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಮನವಿ ಪತ್ರವನ್ನು ಸ್ವೀಕರಿಸಿ ರಕ್ಷಣೆ ಕೊಡುವುದಾಗಿ ಭರವಸೆ ನೀಡಿದ್ದಾರೆ. 

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಪ್ರಥಮ್ 'ಜೀವನ ಬಹಳ ದೊಡ್ಡದು;ಯಾರಿಗೋಸ್ಕರವೋ ನೀವು ಅದನ್ನ ಹಾಳು ಮಾಡಿಕೊಳ್ಳಬೇಡಿ. ನಾನು ತುಂಬಾ ಶಾಂತಿಯಿಂದಲೇ ಇದ್ದೆ;ನೀವು ಅತೀಯಾಗಿ ನಮ್ಮ #ಕರ್ನಾಟಕದ_ಅಳಿಯ ತಂಡದ ಆಫೀಸ್‌ ನಂಬರ್‌ಗೆ ಕಾಲ್ ಮಾಡಿ ಬೆದರಿಕೆ ಹಾಕುತ್ತಲೆ ಬಂದಿದ್ದೀರಾ.? ಇನ್ಮೇಲೆ ನನಗೆ ಬರೋ ಕಾಲ್, ಮೆಸೇಜ್ ಅಥವಾ ಸಾಮಾಜಿಕ ಜಾಲತಾಣದಲ್ಲಿ ಬೆದಿಕೆ ಎಲ್ಲವೂ ಪೋಲೀಸರು ನೋಡಿಕೊಳ್ತಾರೆ. ಬದುಕು ಸುಂದರವಾದದ್ದು; #ಅಂಧಾಭಿಮಾನಿಗಳೇ, ನಿಮ್ಮ ತಂದೆ ತಾಯಿಗಳಿಗೆ ಮೀಸಲಿಡಿ. ಯಾರಿಗೋಸ್ಕರವೋ ಹಾಳುಮಾಡಿಕೊಳ್ಳಬೇಡಿ. ಕನ್ನಡಕ್ಕಾಗಿ, ಕಾವೇರಿಗಾಗಿ, ಸಂಸ್ಕೃತಿ ಉಳಿಸೋಕೆ ಬೇಕಾದ್ರೆ ಜೈಲಿಗೆ ಹೋಗಿ. ಯಾರಿಗೋಸ್ಕರವೋ ಲೈಫ್ ಹಾಳುಮಾಡಿಕೊಳ್ಳಬೇಡಿ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ವಿರೋಧಿಸಿದ್ದಕ್ಕೆ ಕೊಲೆ ಮಾಡಿದ ಎಸ್‌ಎಸ್‌ಎಲ್‌ಸಿ ಬಾಲಕ

ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ನಟ ಪ್ರಥಮ್, ನನಗೆ ಕಳೆದ ಮೂರ್ನಾಲ್ಕು ದಿನಗಳಿಂದ ಸಾಕಷ್ಟು ಫೋನ್ ಕಾಲ್ ಬರುತ್ತಿವೆ. ನಿನ್ನನ್ನ ಎತ್ತುತ್ತೇನೆ ಅಂತ ಬೆದರಿಕೆ ಹಾಕುತ್ತಿದ್ದಾರೆ. ತಲೆ ತೆಗಿತೀನಿ, ಕೈ ತೆಗಿತೀನಿ ಅಂತ ಆವಾಜ್ ಹಾಕುತ್ತಾರೆ. 500ಕ್ಕೂ ಹೆಚ್ಚು ಫೋನ್ ಕಾಲ್ ಬಂದಿವೆ. ಅಂದಾಭಿಮಾನಿಗಳಿಗೆ ಮಾತ್ರ ಹೇಳುತ್ತಿದ್ದೇನೆ ಅಪ್ಪ ಅಮ್ಮನ ನೋಡಿಕೊಳ್ಳಿ ಬದುಕು ಚೆನ್ನಾಗಿ ಕಟ್ಟಿಕೊಳ್ಳಿ. ನನಗೆ ವಾರ್ನ್ ಮಾಡೋ ಟೈಂ ಅನ್ನ ಅಮ್ಮ ಅಪ್ಪನಿಗೆ ಮೀಸಲಿಡಿ. ದರ್ಶನ್ ಅವರ ಅಂದಾಭಿಮಾನಿಗಳ ಮಾತು, ಮೆಸೆಜ್ ನೋಡಿದ್ರೆ ಅಸಹ್ಯ ಆಗಿರುತ್ತದೆ. ಚಾನೆಲ್ ನಲ್ಲಿ ಪ್ರಸಾರ ಮಾಡೋಕೂ ಆಗಲ್ಲ ಅಷ್ಟು ಕೆಟ್ಟದಾಗಿರುತ್ತದೆ. ನಾನು ಬೈದಿರೋದು ಅಂದಾಭಿಮಾನಿಗಳಿಗೆ. ಪೊಲೀಸರು ಬೆದರಿಕೆ ಹಾಕುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಅಂತ ಹೇಳಿದ್ದಾರೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios